ನಾಗೂರು: ದೇವಾಡಿಗ ಸಂಘ ( ರಿ) ನಾಗೂರು- ಕಿರಿಮಂಜೇಶ್ವರ: ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ & ಅಭಿನಂದನಾ ಕಾರ್ಯಕ್ರಮ (Updated)

 

ನಾಗೂರು: ದೇವಾಡಿಗ ಸಂಘ ( ರಿ) ನಾಗೂರು- ಕಿರಿಮಂಜೇಶ್ವರ (ಹಳಗೇರಿ, ಉಳ್ಳೂರು-11,ಖಂಬದಕೋಣೆ) ಇವರಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ & ಅಭಿನಂದನಾ ಕಾರ್ಯಕ್ರಮ ಇಂದು 15-07-2018 ರಂದು ಜರುಗಿತು.

ದಿನೇಶ್ ದೇವಾಡಿಗ ಚಿತ್ರಾಡಿ ನಾಗೂರು ಇವರ ಸಹಯೋಗದೊಂದಿಗೆ ಈ ಸಂಘದ ವ್ಯಾಪ್ತಿಯ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ & ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವರದಿ ವಿವರ:

ದೇವಾಡಿಗ ಸಂಘ (ರಿ) ನಾಗೂರು ಕಿರಿಮಂಜೇಶ್ವರ  (ಹಳಗೇರಿ, ಉಳ್ಳೂರು-11,ಖಂಬದಕೋಣೆ)ಮತ್ತು ದಿನೇಶ್ ದೇವಾಡಿಗ ಚಿತ್ರಾಡಿ ನಾಗೂರು ಇವರ ಸಹಯೋಗದೊಂದಿಗೆ ದಿವಂಗತ ಗುಲಾಬಿ ದೇವಾಡಿಗರ ಸ್ಮರಣಾರ್ಥ ಸಂಘದ ವ್ಯಾಪ್ತಿಯ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಕಾರ್ಯಕ್ರಮದ ಉದ್ಘಾಟನೆ 15/07/2018  ರಂದು ಆದಿತ್ಯವಾರ ಒಡೆಯರ ಮಠ ಶ್ರೀ ಕ್ರಷ್ಣ ಲಲಿತಾ ಕಲಾಮಂದಿರ ನಾಗೂರು ಇಲ್ಲಿ ಜರುಗಿತು.

ಕಾರ್ಯಕ್ರಮವನ್ನು ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟಿ ಅಣ್ಣಯ್ಯ ಶೇರಿಗಾರ್  ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಎಚ್ ಮೋಹನ್ ದಾಸ್ ಶುಭಸಂಶನೆ ಗೈದರು.

ಮಾನ್ಯ ಬೈಂದೂರು ಶಾಸಕರಾದ ಬಿ ಎಮ್ ಸುಕುಮಾರ್ ಶೆಟ್ಟಿ ಯವರನ್ನು ಹಾಗೂ ಡ್ರಮ್ ಮಾಂತ್ರಿಕ ಹಾಗೂ ಕ್ರೀಡಾಪಟು ಅಭಿನ್ ಬಿ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾದ ವೇದ ಮೂರ್ತಿ ವಿಶ್ವನಾಥ್ ಉಡುಪ; ಶ್ರೀ ಮಹಾಲಿಂಗ ದೇವಾಡಿಗ ಚೀಪ್ ಮ್ಯಾನೇಜರ್ ಕಾರ್ಪೊರೇಷನ್ ಬ್ಯಾಂಕ್ ;  ಸುರೇಶ್ ದೇವಾಡಿಗ ಬಿಜೂರು;  ಶ್ರೀಮತಿ ಲಲಿತಾ ಖಾರ್ವಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕಿರಿಮಂಜೇಶ್ವರ;  ಶ್ರೀ  ರಾಜು ದೇವಾಡಿಗ ತ್ರಾಸಿ ಅಧ್ಯಕ್ಷರು ತಾಲೂಕು ದೇವಾಡಿಗ ಸಂಘ; ಶ್ರೀ ಸುಂದರ್ ದೇವಾಡಿಗ ನಾಗುರೂ ಉದ್ಯಮಿ ಮುಂಬೈ;  ಶ್ರೀಮತಿ ಪ್ರಿಯದರ್ಶಿನಿ ಬೆಸ್ಕೂರು ಸಂಯೋಜಕರು ಕೊಲ್ಲೂರು ಡಾಟ್.ಕಾಂ; ಶ್ರೀ ಶೀನ ದೇವಾಡಿಗ ಮರವಂತೆ(ದುಬೈ) ;  ಖಂಬದಕೋಣೆ ಗ್ರಾಮ ಪಂ. ಅಧ್ಯಕ್ಷ ರಾಜೇಶ ದೇವಾಡಿಗ;  ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷರಾದ ಮಂಜು ದೇವಾಡಿಗ ಬಿಜೂರು; ಸಪ್ತಸ್ವರ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ ಉಪಸ್ಥಿತರಿದ್ದರು. 

ವಿಶೇಷ ಆಹ್ವಾನಿತರಾಗಿ  ಶ್ರೀ ರಾಘವೇಂದ್ರ ಜಿ ಮಣಿಪಾಲ್ ; ಶ್ರೀ ಸಚ್ಚಿದಾನಂದ ಎಮ್. ಎಲ್ ಜಿಲ್ಲಾ ಸಂಯೋಜಕರು; ಶ್ರೀ ಎಂ. ಗೋವಿಂದ ನಿವೃತ್ತ ಅಧಿಕಾರಿ ಸಿಂಡಿಕೇಟ್ ಬ್ಯಾಂಕ್;  ತಾಲೂಕು ಮಟ್ಟದ ಎಲ್ಲಾ ದೇವಾಡಿಗ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಾಗೂರು ಚಿತ್ರಾಡಿ ಗುಲಾಬಿ ದೇವಾಡಿಗ ಇವರ ಸ್ಮರಣಾರ್ಥ ದಿನೇಶ ದೇವಾಡಿಗ ನೀಡಿರುವ ಪುಸ್ತಕವನ್ನು ಶಾರದ ದೇವಾಡಿಗ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿದರು.  

ಕಾರ್ಯಕ್ರಮವನ್ನು ಮಂಜುನಾಥ್ ದೇವಾಡಿಗ ಅಧ್ಯಾಪಕರು ಚರುಮಕ್ಕಿ ನಾಯ್ಕನಕಟ್ಟೆ ,ಹಾಗೂ ತಲ್ಲೂರು ಸಪ್ತಸ್ವರ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿ ದೇವಾಡಿಗ ನಿರೂಪಿಸಿದರು.ಪುರುಷೋತ್ತಮದಾಸ್ ಉಪ್ಪುಂದ ಧನ್ಯವಾದಗೈದರು.


Share