ನಿಸ್ವಾರ್ಥ ಕಾರ್ಯಕರ್ತನನ್ನು ಕಳೆದುಕೊಂಡ "ಪುಣೆ ದೇವಾಡಿಗ ಸಂಘ

ಪುಣೆ : ಪುಣೆ ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿಯಾದ ಎಲ್ಲೂರ್ ಗಣೇಶ್ ದೇವಾಡಿಗ (38)ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಇಂದು ಮದ್ಯಾಹ್ನ ನಿಧನ ಹೊಂದಿದರು . 

ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ . ಸಂಘಟನೆಯಲ್ಲಿ ಉತ್ಸಾಹದ ಚಿಲುಮೆಯಾಗಿದ್ದ ಗಣೇಶ್ ದೇವಾಡಿಗರು ಪುಣೆಯಲ್ಲಿ ದೇವಾಡಿಗ ಸಂಘದ ಸ್ಥಾಪನೆಯಲ್ಲೂ  ಪಾತ್ರ ವಹಿಸಿದ್ದು , ಸಂಘಕ್ಕೆ ತನ್ನ ನಿಸ್ವಾರ್ಥ ಅನವರತ ಸೇವೆ ಸಲ್ಲಿಸುತ್ತಿರುವ ಅವರು ಕಳೆದೆರಡು  ವರ್ಷಗಳಿಂದ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು . ಹೋಟೆಲ್ ಉದ್ಯಮಿಯೂ ಆಗಿದ್ದ ಅವರು ತುಳು - ಕನ್ನಡಿಗರಲ್ಲಿ ಅನ್ಯೋನ್ಯವಾಗಿದ್ದರು

ದೇವರು ಅವರ ಆತ್ಮಕ್ಕೆ ಸದಾ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸೋಣ.


Share