ಉಪ್ಪುಂದ: ಕಿರಣ್ ದೇವಾಡಿಗರಿಗೆ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

 

ಉಪ್ಪುಂದ: ಉಪ್ಪುಂದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಕಿರಣ್ ದೇವಾಡಿಗ ಇವರು ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಇವರು ಕಬ್ಬಿನ ಗದ್ದೆಮನೆ ಗೋವಿಂದ ದೇವಸ್ಥಾನದ ಹತ್ತಿರ ಖಂಬದಕೋಣೆ ಯಲ್ಲಿ ವಾಸಿಸುತ್ತಿರುವ ತಂದೆ ರತ್ನಾಕರ ತಾಯಿ ಸುಶೀಲಾ ಅವರ ಪುತ್ರ.

ಈ ಗ್ರಾಮೀಣ ಪ್ರತಿಭೆಗೆ ನಿಮ್ಮ ಆಶೀರ್ವಾದ ಇರಲಿ....

(~ ಕೃಪೆ: ಪುರುಷೋತ್ತಮ, ಉಪ್ಪುಂದ)


Share