ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಹೆಚ್ ರವೀಂದ್ರ ನೇಮಕ

 

ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ  ಮೂಡುಬಗೆ ವಾಗ್ಜೋತಿ ವಿಶೇಷ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರಾದ ನಾಯ್ಕನಕಟ್ಟೆಯ ಶ್ರೀ ಹೆಚ್ ರವೀಂದ್ರ ಅವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ನೇಮಕ ಮಾಡಿದ್ದಾರೆ.

ಗೌರವ ಕಾರ್ಯದರ್ಶಿಯಾಗಿ ಗಣಪತಿ ಹೋಬಳಿದಾರ್ ಹಾಗೂ ಪ್ರಕಾಶ್ ಹೆಬ್ಬಾರ್ ಗುಲ್ಕೋಣ, ಗೌರವ ಕೋಶಾಧ್ಯಕ್ಷ ರಾಗಿ ಕುಶಲ್ ಗಾಣಿಗ ಹೇರಂಜಾಲು, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ್ ಡಿ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾ ಪ್ರತಿನಿಧಿಯಾಗಿ ವೀಣಾ ಶ್ಯಾನುಭಾಗ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ  ಪ್ರತಿನಿಧಿಯಾಗಿ ಮಹಾಬಲ ಕೆ.ಸಂಘ ಸಂಸ್ಥೆಯ ಪ್ರತಿನಿಧಿಯಾಗಿ ಉದಯ ನಾಯ್ಕ, ಸದಸ್ಯರಾಗಿ ಮಂಜುನಾಥ್ ಶಿರೂರು ಪ್ರಸನ್ನ ಬೈಂದೂರು, ಕ್ರಷ್ಣ ಗೋಪಾಲ್ ಹೆಬ್ಬಾರ್, ಸುಬ್ರಹ್ಮಣ್ಯ ಗಾಣಿಗ, ಗುರುರಾಜ್ ಶೆಟ್ಟಿ, ರವಿಚಂದ್ರ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಘಟಕದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

~ ಕೃಪೆ: ಪುರುಷೋತ್ತಮದಾಸ್, ಬೈಂದೂರು


Share