ದೇವಾಡಿಗ ನವೋದಯ ಸಂಘ ಬೆಂಗಳೂರು: ಆಟಿಡೊಂಜಿ ದಿನ  ಕಾರ್ಯಕ್ರಮ

 

ಬೆಂಗಳೂರು: ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕರಾವಳಿಯ ದೇವಾಡಿಗ ಸಮಾಜ ಭಾಂದವರಿಗೆ ಬೆಂಗಳೂರಿನಲ್ಲಿ ತಮ್ಮ ಊರಿನ ಆಚರಣೆ, ಕರಾವಳಿಯ ವಿಶಿಷ್ಟ ತಿನಿಸುಗಳ ಸವಿಯನ್ನು ಮತ್ತು ಕರಾವಳಿಯಲ್ಲಿ ಉಪಯೋಗಿಸುವ ವಸ್ತುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ದೇವಾಡಿಗ ನವೋದಯ ಸಂಘ ಬೆಂಗಳೂರು ಇವರ ನೇತೃತ್ವದಲ್ಲಿ ಆಟಿಡೊಂಜಿ ದಿನ  ಕಾರ್ಯಕ್ರಮವನ್ನು ದಿನಾಂಕ 29/07/2018 ರಂದು ವಿಜಯನಗರದ ಜಿ.ಬಿ.ಬಿ ಕಲ್ಯಾಣ್ ಮಹಲ್ ನಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷರಾದ ಶ್ರೀ ಹರಿ ದೇವಾಡಿಗರವರ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.   ವೇದಿಕೆಯಲ್ಲಿ ಸಮಾಜದ ಗಣ್ಯ ವ್ಯಕ್ತಿಗಳಾದ ಸನ್ಮಾನ್ಯ ಶ್ರೀ ಪಿ.ಜಿ.ಅರ್ ಸಿಂಧ್ಯಾ , ಮಾನ್ಯ ಮಾಜಿ ಗೃಹ ಮಂತ್ರಿಗಳು., ಸನ್ಮಾನ್ಯ ಶ್ರೀ ಬಿ.ಎಮ್ ಸುಕುಮಾರ್ ಶೆಟ್ಟಿ. ಮಾನ್ಯ ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ., ಶ್ರೀ ವಸಂತ್ ಕುಮಾರ್ ನಿಟ್ಟೆ. ಪ್ರಾಂಶುಪಾಲರು, ಆಳ್ವಾಸ್ ಶಿಕ್ಷಣ ಸಂಸ್ಥೆ, ಶ್ರೀ ಗಿರೀಶ್ ಬೈಂದೂರು. ಅಧ್ಯಕ್ಷರು ಲಾವಣ್ಯ (ರಿ) ಬೈಂದೂರು, ಶ್ರೀಮತಿ ಪ್ರಿಯದರ್ಶಿನಿ , ಸಂಯೋಜಕರು ಕೊಲ್ಲೂರು ಡಾಟ್ ಕಾಮ್, ಶ್ರೀ ಪ್ರವಿಣ್ ಕುಮಾರ್. ದೇವಾಡಿಗ ಯುವ ವೇದಿಕೆ ,ಉಡುಪಿ. ಶ್ರೀ ಯಶ್ವಂತ್ ಬಿಜೂರ್, ಕನ್ನಡ ಚಲನಚಿತ್ರ ನಟ, ಶ್ರೀ ಬಿ.ಆರ್ ದೇವಾಡಿಗ ,ಉಪಾಧ್ಯಕ್ಷರು  ದೇವಾಡಿಗ ನವೋದಯ ಸಂಘ ಲ ಬೆಂಗಳೂರು , ಶ್ರೀಮತಿ ಚಿತ್ರಲೇಖಾ ದೇವಾಡಿಗ, ಉಪಾಧ್ಯಕ್ಷರು, ದೇವಾಡಿಗ ನವೋದಯ ಸಂಘ ಲ ಬೆಂಗಳೂರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಚರಣ್ ಬೈಂದೂರು ಇವರು ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು.ಕುಮಾರಿ ಸಾನ್ವಿ ಮತ್ತು ಕುಮಾರಿ ದಾಮಿನಿ ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. 

 ಶ್ರೀ ಪಿ.ಜಿ.ಅರ್ ಸಿಂಧ್ಯಾರವರು ದೀಪ ಬೆಳಗಿಸಿ ಹೊಂಬಾಳೆ ಬಿಡಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಂತರದಲ್ಲಿ ಉದ್ಘಾಟನಾ ಭಾಷಣ ಮಾಡಿದ ಶ್ರೀ ಸಿಂಧ್ಯಾರವರು ದೇವಾಡಿಗ ಸಮಾಜದ ಜೊತೆ ತಮ್ಮ ಬಾಂಧವ್ಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು ದೇವಾಡಿಗ ಸಮಾಜಕ್ಕೆ ತಮ್ಮಿಂದಾಗುವ ಎಲ್ಲಾ ಸಹಾಯವನ್ನು ಮಾಡುದಾಗಿ ಭರವಸೆ ನೀಡಿದರು. ದೇವಾಡಿಗ ನವೋದಯ ಸಂಘದ ಕಛೇರಿಯ ನಿರ್ಮಾಣಕ್ಕಾಗಿ ಸೂಕ್ತ ಸ್ಥಳವನ್ನು ಒದಗಿಸುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಶ್ರೀ ಬಿ.ಎಮ್ ಸುಕುಮಾರ್ ಶೆಟ್ಟಿಯವರು ತಮ್ಮ ಭಾಷಣದಲ್ಲಿ ಬೈಂದೂರು ಕ್ಷೇತ್ರದಲ್ಲಿ ಸುಮಾರು ⅓ ಭಾಗ ದೇವಾಡಿಗ ಸಮುದಾಯದವರಯ ವಾಸಿಸುತಿದ್ದು ಬೈಂದೂರಿನಲ್ಲಿ ದೇವಾಡಿಗ ಸಮುದಾಯ ಭವನ ನಿರ್ಮಿಸುದಾಗಿ ಆಶ್ವಾಸನೆ ನೀಡಿದರು.

ಆಳ್ವಾಸ್ ನ ಪ್ರಾಂಶುಪಾಲರಾದ ಶ್ರೀ ವಸಂತ್ ಕುಮಾರ್ ನಿಟ್ಟೆಯವರು ದಿಕ್ಸೂಚಿ ಭಾಷಣದಲ್ಲಿ ಸಂಘದ ಕಾರ್ಯ ವೈಖರಿಯನ್ನು, ಯುವಕರ ಸಂಘಟನಾ ಶಕ್ತಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಉತ್ತಮ ಸಮಾಜಕ್ಕೆ ಯುವ ಪೀಳಿಗೆ ಯಾವ ರೀತಿಯಲ್ಲಿ ಸ್ಪಂದಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.  

ನಂತರದಲ್ಲಿ ಅತಿಥಿಗಳಾದ ಶ್ರೀಮತಿ ಪ್ರಿಯದರ್ಶಿನಿ, ಗಿರೀಶ್ ಬೈಂದೂರು, ಪ್ರವೀಣ್ ಕುಮಾರ್,ಯಶ್ವಂತ್ ಬಿಜೂರ್ ರವರು ದೇವಾಡಿಗ ನವೋದಯ ಸಂಘದ ಕಾರ್ಯಕ್ರಮವನ್ನು , ಯುವಕರ ಬಲ ಹಾಗೂ ಛಲವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಈ ಮಧ್ಯೆ ಬೈಂದೂರಿನ ದೇವಾಡಿಗ ಯುವಕರು ಮತ್ತು ಸ್ನೇಹಿತರು ನಿರ್ಮಾಣ ಮಾಡಿದ *ಶ್ವೇತಾ ಹೆಣೆ ಶ್ವೇತಾ* ಆಡಿಯೋ ಸಿ.ಡಿಯನ್ನು ಸುಕುಮಾರ್ ಶೆಟ್ಟಿಯವರ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಯಿತು.
 
ಆಟಿಡೊಂಜಿ ದಿನದ ಸಾಂಪ್ರದಾಯಿಕ ಕಲೆ ಆಟಿಕಳೆಂಜವನ್ನು ಸಂಘದ ಸದಸ್ಯರಾದ ರಶ್ಮಿ ದೇವಾಡಿಗ ಮತ್ತು ಆದರ್ಶ್ ದೇವಾಡಿಗರವರು ಅತಿಥಿಗಳ ಮುಂದೆ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ದ ವಿಶೇಷ ಗಣ್ಯರಾದ ಸನ್ಮಾನ್ಯ ಶ್ರೀ ಪಿ.ಜಿ.ಆರ್ ಸಿಂಧ್ಯಾ ಹಾಗೂ ಬಿ.ಎಮ್ .ಸುಕುಮಾರ್ ಶೆಟ್ಟಿ ಯವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.  

ದೇವಾಡಿಗ ನವೋದಯ ಸಂಘದ ಉಪಾಧ್ಯಕ್ಷರಾದ ಶ್ರೀ ಬಿ.ಆರ್.ದೇವಾಡಿಗರವರು ಸಂಘದ ಮುಂದಿನ ಹೆಜ್ಜೆಗಳನ್ನು ಗಣ್ಯರ ಸಮ್ಮುಖದಲ್ಲಿ ಪ್ರಸಾಪಿಸಿದರು.

ಸಂಘದ ಅಧ್ಯಕ್ಷರಾದ ಶ್ರೀಯುತ ಹರಿ ದೇವಾಡಿಗರವರು ಸಮಾಜದ 25 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದರು. ಸಭಾಕಾರ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷರಾದ ಶ್ರೀ ಹರಿ ದೇವಾಡಿಗರವರು ಗಣ್ಯರಿಗೆ  ಧನ್ಯವಾದಗಳನ್ನು ಸಮರ್ಪಿಸಿದರು. 

ಸಭಾ ಕಾರ್ಯಕ್ರಮ ಮುಗಿದ ನಂತರ ಸೇರಿದ ಎಲ್ಲಾ ಭಾಂಧವರಿಗೆ ವಿಶೇಷವಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು.  

ಸದಸ್ಯರು ತಮ್ಮ ಮನೆಯಿಂದ ಮಾಡಿದ ವಿಶಿಷ್ಟ ಕರಾವಳಿಯ ಸುಮಾರು 80ಕ್ಕೂ ಹೆಚ್ಚು ತಿಂಡಿ ತಿನಿಸುಗಳನ್ನು ಊಟದ ಜೊತೆಗೆ ಬಡಿಸಲಾಸಯಿತು. ಬಾಯಲ್ಲಿ ನೀರೂರುವ ಪತ್ರೊಡೆ,ಮುಲ್ಕ,ನೀರ್ದೋಸೆ, ಶ್ಯಾವಿಗೆ,ಚಟ್ನಿ, ಸಿಗಡಿ ಚಟ್ನಿ, ಪುಂಡಿ..ಇತ್ಯಾದಿ ತಿನಿಸುಗಳು ಜನರ ಮನಸೆಳೆಯಿತು.ಭೋಜನದ ಜವಾಬ್ದಾರಿಯನ್ನು ಶ್ರೀ ಮಂಜುನಾಥ್ ಪಾಂಡೇಶ್ವರ ಇವರು ಅಚ್ಚುಕಟ್ಟಾಗಿ ಯಾವುದೇ ಕೊರತೆ ಇಲ್ಲದೆ ನಿರ್ವಹಿಸಿದರು.  

ಊಟದ ನಂತರದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಗೋಪಾಲ್ ಶೇರಿಗಾರ್ ನೇತೃತ್ವದಲ್ಲಿ ಅವಿನಾಶ್ ದೇವಾಡಿಗ ಮತ್ತು ಸುಧೀರ್ ದೇವಾಡಿಗರವರು ಸಭಿಕರಿಗೆ ಮನರಂಜನಾ ಆಟಗಳನ್ನು ನಡೆಸಿಕೊಟ್ಟರು. ಪ್ರತಿಭಾನ್ವಿತ ಸದಸ್ಯರಿಂದ ಸಂಗೀತ ,ನೃತ್ಯ ವೈಭವ., ಮನರಂಜನೆಯ ಸಾಂಪ್ರದಾಯಿಕ ಆಟಗಳು ಹಾಗೂ ನಾಟಕ ಸಭಿಕರನ್ನು ಮನರಂಜಿಸಿತು. ಪ್ರತಿಭಾನ್ವಿತ ಸದಸ್ಯರಿಂದ ಸಂಗೀತ ,ನೃತ್ಯ ವೈಭವ., ಮನರಂಜನೆಯ ಸಾಂಪ್ರದಾಯಿಕ ಆಟಗಳು ಹಾಗೂ ನಾಟಕ ಸಭಿಕರನ್ನು ಮನರಂಜಿಸಿತು.  
  

ಆಟಿಡೊಂಜಿ ದಿನದ ವಿಶೇಷವಾಗಿ ಕರಾವಳಿಯಲ್ಲಿ ಉಪಯೋಗಿಸುವ ದಿನನಿತ್ಯದ ವಸ್ತುಗಳು ಮತ್ತು ತರಕಾರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕರಾವಳಿಯ ಶೇಂದಿ ಅಂಗಡಿ ಎಲ್ಲರ ಮನಸೆಳೆಯಿತು. 

 ಶ್ರೀ ರಿತೇಶ್ ದೇವಾಡಿಗರವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಸಮಾಜ ಭಾಂದವರಿಗಾಗಿ ಲಕ್ಕಿ ಡ್ರಾ ಏರ್ಪಡಿಸಲಾಗಿತ್ತು.

ಸುಮಾರು 700ಕ್ಕೂ ಅಧಿಕ ಜನರು ಆಟಿಡೊಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ  10ಗಂಟೆಗೆ ಶುರುವಾದ ಕಾರ್ಯಕ್ರಮವು ಸಂಜೆ 06 ಗಂಟೆಗೆ ಸಮಾಪ್ತಿಯಾಯಿತು.   

ಕಾರ್ಯಕ್ರಮದ ನಿರೂಪಣೆಯನ್ನು ಪ್ರವೀಣ್ ಬ್ರಹ್ಮಾವರ ಅತ್ಯುತ್ತಮವಾಗಿ ನಡೆಸಿಕೊಟ್ಟರು.ಸಂಘದ ಸದಸ್ಯರಾದ ಗುರು ದೇವಾಡಿಗರವರು ಕಾರ್ಯಕ್ರಮದ ಪ್ರತಿಯೊಂದು ಕ್ಷಣಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದರು. ವೇದಿಕೆಯ ಹೂವಿನ ಅಲಂಕಾರ ಶ್ರೀ ರುದ್ರ ದೇವಾಡಿಗ ವಹಿಸಿಕೊಂಡರೆ,ಬಹುಮಾನಗಳ ಪ್ರಾಯೋಜಕತ್ವವನ್ನು ಶ್ರೀಮತಿ ಗೀತಾ ಮಂಜುನಾಥ್ ವಹಿಸಿಕೊಂಡರು. 

ಸಂಘದ ಕಾರ್ಯಚಟುವಟಿಕೆಗಳು ಎಲ್ಲಾ ಸದಸ್ಯರಿಗೆ ಪಾರದರ್ಶಕವಾಗಿರಬೇಕು ಮತ್ತು ಪತಿಯೊಬ್ಬ ಸದಸ್ಯನಿಗೂ ಸಂಘದ ಸಂವಿಧಾನ ಅರ್ಥಾತ್ ಬೈ- ಲಾ ವನ್ನು ಮನದಟ್ಟು ಮಾಡುವ ರೀತಿಯಲ್ಲಿ ಎಲ್ಲರಿಗೂ ಬೈ-ಲಾ ಪ್ರತಿಯನ್ನು ನೀಡಲಾಯಿತು.

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ವಾಕ್ಯದಂತೆ ದೇವಾಡಿಗ ನವೋದಯ ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
        ✍
ವರದಿ : ವಿಜಿ ಕಾಪಿಕಾಡ್.,ಮಾಹಿತಿ ಕಾರ್ಯದರ್ಶಿ; ದೇವಾಡಿಗ ನವೋದಯ ಸಂಘ. ಬೆಂಗಳೂರು.


Share