ಉಡುಪಿಯ ದೇವಾಡಿಗರ ಸೇವಾ ಸಂಘದಲ್ಲಿ ಆಟಿಡೊಂಜಿ ಕಾರ್ಯಕ್ರಮ

ಉಡುಪಿ: ಆಟಿಡೊಂಜಿ ಕಾರ್ಯಕ್ರಮವು ಉಡುಪಿಯ ದೇವಾಡಿಗರ ಸೇವಾ ಸಂಘದಲ್ಲಿ ಜು. 07ರಂದು ರವಿವಾರ ಸಂಘದ ಸಭಾಂಗಣದಲ್ಲಿ ಜರುಗಿತು.

ಕಡ್ಕೆ ಶೀನ ಶೇರಿಗಾರ ದಂಪತಿಗಳು ಉದ್ಘಾಟನೆ ಮಾಡಿದರು. ಸಂಘದ ಅಧ್ಯಕ್ಷರಾದ ಸೀತಾರಾಮ ಕೆ ಅಧ್ಯಕ್ಷತೆ ವಹಿಸಿದ್ದರು

ಈ ಸಂದರ್ಭದಲ್ಲಿ ಕುಂಜ್ಜಿಬೆಟ್ಟು ಸಂಜೀವ ಶೆರಿಗಾರ ಮತ್ತು ಕಡಿಯಾಲಿ ಲೀಲಾ ಗೋಪಾಲ ದೇವಾಡಿಗ ಮಹಿಳಾ ಸಂಘಟನೆಯ ಮತ್ತು ಯುವ ಸಂಘಟನೆಯ ಪಧಾದೀಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾಜ ಭಾಂದವರು ಸುಮಾರು 40ಕ್ಕೂ ಹೆಚ್ಚು ಆಟಿಯಾ ಖ್ಯಾದ್ಯಗಳನ್ನು ಉಣಬಡಿಸಿದರು. ಸಮಾಜದ ಪುಟಾಣಿಗಳು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು  ನೀಡಿ ಸಭಿಕರನ್ನು ಮನೋರಂಜಿಸಿದರು.  ಹಳೆಯ ಕಾಲದ ಆಟೋಟಗಳನ್ನು ಸಂಘದಲ್ಲಿ ನೆನಪಿಸಿಕೋಳ್ಳಲಾಯಿತು,

400ಕ್ಕೂಹೆಚ್ಚು ಸಮಾಜ ಭಾಂದವರು ಈ ಸಂದರ್ಭದಲ್ಲಿ ಉಪಸ್ಥಿತರಿದರು.

ನಿಕಟಪೂರ್ವ ಅಧ್ಯಕ್ಷರಾದ ಗಣೇಶ ದೇವಾಡಿಗ ಬ್ರಹ್ಮಗಿರಿಯವರು ಸ್ವಾಗತಿಸಿದರು, ಜ್ಯೋತಿ ಸತೀಶ್  ಪ್ರಾಸ್ತಾವಿಕ ಬಾಷಣ ಮಾಡಿದರು.

ರಾಘವೇಂದ್ರ ಕಾರ್ಯುಕ್ರಮ ನಿರೂಪಣೆ ಮಾಡಿದರು,ಮಲ ನಿತ್ಯಾನಂದ  ವಂದಿಸಿದರು.

 


Share