ಬೈಂದೂರು ಸಿಟಿ ಜೆ.ಸಿ.ಐ ಅಧ್ಯಕ್ಷರಾಗಿ ಮಣಿಕಂಠ ಎಸ್ ಆಯ್ಕೆ

 

ಬೈಂದೂರು : ಶಿರೂರು ಜೆ.ಸಿ.ಐ ಅಧ್ಯಕ್ಷರಾಗಿ ಪಾಡುರಂಗ ಅಳ್ವೆಗದ್ದೆಯವರು ನೇತೃತ್ವದಲ್ಲಿ ಬೈಂದೂರು ಸಿಟಿ ಜೆಸಿಐ ಪ್ರಾರಂಭಗೊಂಡಿದ್ದು ಇದರ ಅಧ್ಯಕ್ಷರಾಗಿ ಮಣಿಕಂಠ ಎಸ್ ಆಯ್ಕೆ

ಮಣಿಕಂಠ ಎಸ್ ಇವರು ಶ್ರೀನಿವಾಸ ದೇವಾಡಿಗ ಇವರ ಪುತ್ರನಾಗಿದ್ದು ಎಮ್.ಕಾಂ ಮತ್ತು ಎಮ್.ಬಿ.ಎ ಪದವಿಯನ್ನು ಹೊಂದಿದ್ದಾರೆ.

ಮುಂಬೈ Pesico ಕಂಪನಿಯ ಮ್ಯಾನೇಜರ್ ಆಗಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಸ್ಟಾರ್ ಹೆಲ್ತ್ ಇನ್ಸುರೆನ್ಸ್ ನಲ್ಲಿ ಮ್ಯಾನೇಜರ್ ಹಾಗೂ DDUGKY ನ ಸೆಂಟರ್ ಉಪ್ಪುಂದ ಮತ್ತು ಬೈಂದೂರ್‍ನಲ್ಲಿ ಡೊಮ್ಮನ್ ಟ್ರೈನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಮೂಕಾಂಬಿಕ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷರಾಗಿ ಪ್ರಗತಿ ಸೌಹಾರ್ಧ ಸೊಸೈಟಿಯ ನಿರ್ದೇಶಕರಾಗಿ ಎ.ಬಿ ಅಸೋಸಿಯೇಸನ್ ಆಡಳಿತ ಪಾಲುದಾರರಾಗಿ, ಬೈಂದೂರು ಪ್ರಮಿಯರ್ ಲೀಗ್ ಅಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್‍ನ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾರ್ಯದರ್ಶಿಯಾಗಿ ಎಚ್ ಸುಶಾಂತ್ ಬೈಂದೂರು, ಉಪಾಧ್ಯಕ್ಷರಾಗಿ ದೊಟ್ಟಯ್ಯ ಪೂಜಾರಿ, ಖಜಾಂಚಿಯಾಗಿ ರಾಘವೇಂದ್ರ ಹೊಳ್ಳ ಉಪ್ಪುಂದ, ಜೊತೆ ಕಾರ್ಯದರ್ಶಿಯಾಗಿ ಸತೀಶ್ ಎಂ, ಆಯ್ಕೆಯಾಗಿದ್ದಾರೆ.


Share