ಮೂಕಾಂಬಿಕಾ ವಿವಿದ್ದೋದೇಶ ಸಹಕಾರಿ ಸಂಘ ಉಪ್ಪುಂದ ಇದರ ಅದ್ಯಕ್ಷರಾಗಿ ಮಂಜು ದೇವಾಡಿಗ ಬಿಜೂರು ಆಯ್ಕೆ

ಉಪ್ಪುಂದ: ಮೂಕಾಂಬಿಕಾ ವಿವಿದ್ದೋದೇಶ ಸಹಕಾರಿ ಸಂಘ ಉಪ್ಪುಂದ ಇದರ ಅದ್ಯಕ್ಷರಾಗಿ ಮಂಜು ದೇವಾಡಿಗ ಬಿಜೂರು ಆಯ್ಕೆಯಾಗಿದ್ದಾರೆ. ಇದರ ಆಡಳಿತ ಮ0ಡಳಿಯ ಚುನಾವಣೆಯಲ್ಲಿ ಕುಂದಾಪುರ ಎಪಿಎಂಸಿ ಸದಸ್ಯರಾದ ಮಂಜು ದೇವಾಡಿಗ ಬಿಜೂರು ಇವರು ಅಧ್ಯಕ್ಷರಾಗಿ ಬಹುಮತದಿಂದ ಆಯ್ಕೆಯಾದರು. .

ಶ್ರಿಯುತರು, ಕುಪ್ಪಯ್ಯ ದೇವಾಡಿಗ ಹಾಗೂ ದೊಟ್ಟಿ ದೇವಾಡಿಗ ಇವರ ಪುತ್ರರಾಗಿ ಬಿಜೂರು ಹರ್ಕೇರೀ ಯಲ್ಲಿ ಡಿಸೆಂಬರ್ 6, 1953 ರಂದು ಜನಿಸಿ ತಮ್ಮ ಪ್ರಾಥಮಿಕ ವಿದ್ಯಾಬ್ಯಾಸ ಉಪ್ಪುಂದಲ್ಲಿಯೂ ಹಾಗೂ ಹೈಸ್ಕೂಲ್ ಮತ್ತು ಕಾಲೇಜ್ ವಿದ್ಯಾಭ್ಯಾಸವನ್ನು ಬೈಂದೂರಿನಲ್ಲಿ ಪೂರೈಸಿದರು.   

ನಂತರ ಗ್ರಾಮ ಕರಣಿಕ ರಾಗಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡು  ಗ್ರಾಮ ಲೆಕ್ಕಿಗರಾಗಿ , ಕಂದಾಯ ನಿರಿಕ್ಷರಾಗಿ , ಪ್ರಭಾರ ಉಪ ತಹಸೀಲ್ದಾರರಾಗಿ ಡಿಸೆಂಬರ್ 2012 ರಲ್ಲಿ ನಿವೃತ್ತಿಗೊಂಡರು.

ರಾಜಕೀಯ ಹಾಗೂ ಸಾಮಾಜಿಕ ದುರೀಣೆ ಶ್ರೀಮತಿ ಶಾರದ ಬಿಜೂರು ಇವರನ್ನು ಮೇ 13,1979 ರಲ್ಲಿ  ವಿವಾಹವಾದ ಇವರಿಗೆ ಮೂರು ಪ್ರತಿಭಾವಂತ ಮಕ್ಕಳು.

ಶ್ರೀಯುತ ಮಂಜು ಅವರು ರಾಜ್ಯ ಮಟ್ಟದ ಕಬಡ್ಡಿ ಆಟಗಾರರಾಗಿದ್ದರು.. ರಾಜ್ಯ ಸರ್ಕಾರಿ ನೌಕರರ ಸಂಘ ದ  ರಾಜ್ಯ ಪ್ರತಿನಿಧಿಯಾಗಿ , ರಾಜ್ಯ ಸರ್ಕಾರಿ ನೌಕರರ ಸಂಘ ಕುಂದಾಪುರ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಈಗ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಉಪಾಧ್ಯಕ್ಷರಾಗಿ ಹಾಗೂ  , ಎಪಿಎಂಸಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾ ಜನರ ಏಳಿಗಿಗೆಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.


Share