ಬೆಂಗಳೂರಿನಲ್ಲಿ ವೈಶಿಷ್ಟಯತೆಯಿಂದ ಆಚರಿಸಿದ ’ಆಟಿದ ಒಂಜಿ ದಿನ- ಆಶಾಡದಲ್ಲಿ ಒಂದು ದಿನ” ಕಾರ್ಯಕ್ರಮ

ಬೆಂಗಳೂರು: ಜುಲೈ 29 ರ ಬಾನುವಾರ ಬೆಳಿಗ್ಗೆ 9-30 ಕ್ಕೆ ದೇವಾಡಿಗ ಭವನ, ರಾಜರಾಜೇಶ್ವರಿ ನಗರ ಬೆಂಗಳೂರು ಇಲ್ಲಿ ದೇವಾಡಿಗ ಸಂಘ (ರಿ) ಬೆಂಗಳೂರು ಇವರಿಂದ ಆಟಿದ ಒಂಜಿ ದಿನ- ಆಶಾಡದಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಚ್ಚಿನ ಸಂಖೆಯಲ್ಲಿ ಸದಸ್ಯರು ಕುಟುಂಬ ಸಮೇತರಾಗಿ ಅತ್ಯಧಿಕ ಸಂಖೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಯಕ್ಷಗಾನದ ಮೇರು ಹಾಸ್ಯ ಕಲಾವಿದ ಶ್ರೀ ರವೀಂದ್ರ ದೇವಾಡಿಗ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನಿಸಲ್ಪಟ್ಟರು.

ಪೋಲೀಸ್  ಅಸಿಸ್ಟಂಟ್ ಕಮೀಶನರ್  ರಮೇಶ ದೇವಾಡಿಗರವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮೆರಗು ತಂದರು.

ಡಾ.ಶಿವಕುಮಾರ್ ಬೇಗಾರ್ ನಿರ್ಧೇಶನದಲ್ಲಿ ಗಾನ ಸೌರಭ ಯಕ್ಷಗಾನ ಶಾಲೆ ಮತ್ತು ಅತಿಥಿ ಕಲಾವಿದರಿಂದ " ಮಾರುತಿ ಪ್ರತಾಪ " ಪ್ರಸಂಗವನ್ನು ಪ್ರಸ್ತುತ ಪಡಿಸಲಾಯಿತು.

ಸಂಘದ ಮಹಿಳೆಯರಿಂದ 100ಕ್ಕೂ ಹೆಚ್ಚು ಆಟಿಯ ಖಾದ್ಯಗಳನ್ನು ಸಾದರ ಪಡಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅದ್ಯಕ್ಷ ಚಂದ್ರಶೇಕರ್ ಕಂಕನಾಡಿಯವರು ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

Raveendra Devadiga very well know popular Yakshagana artist of our community honoured by the Devadiga Sangha (R) Bangalore during the Atida Onji Dina- ಆಶಾಡ ಆಚರಣೆ.

Raveendra Devadiga from Kamalashile Udupi dist

Ramesh Devadiga Asst commissioner of Police Electronic city was chief guest.

Maruthi Prathapa Yakshagana also played directed by Dr Shivakumar Beghar.Huge Devadiga gathering enjoyed the gathering.

Ladies of our community brought nearly 100 traditional items. Programme was huge success.

President Chandrashekhar Kankanady welcomed the gathering.Programme was a huge Success.


Share