ಕರ್ನಾಟಕ ರಾಜ್ಯ ದೇವಾಡಿಗರ ಸಂಘ, ಮಂಗಳೂರು: ವಿದ್ಯಾರ್ಥಿವೇತನ-ಪ್ರತಿಭಾ ಪುರಸ್ಕಾರ (ಚಿತ್ರಗಳು)(Updated)

ಮಂಗಳೂರು: ಅವಕಾಶ ಸದುಉಪಯೋಗಿಸಿಕೊಂಡು ಸತತ ಪ್ರಯತ್ನ ಮಾಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾದಕರಾಗ ಬಹುದು ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ.ವೀರಪ್ಪ ಮೊಯ್ಲಿ ಹೇಳಿದರು.

ರಾಜ್ಯ ದೇವಾಡಿಗರ ಸಂಘ ಮಂಗಳೂರು, ದುಬೈ ದೇವಾಡಿಗ ಸಂಘಗಳ ಆಶ್ರಯದಲ್ಲಿ ವಿದ್ಯಾದಾನಿಗಳ ನೆರವಿನಿಂದ ಹಮ್ಮಿಕೊಂಡ ದೇವಾಡಿಗ ಸಮಾಜದ 500 ಮಂದಿ ಬಡ ವಿದ್ಯಾರ್ಥಿಗಳಿಗೆ ಸುಮಾರು 7 ಲಕ್ಷ ರೂ ವಿದ್ಯಾರ್ಥಿ ವಿತರಣೆ ಮತ್ತು ಪ್ರ್ತತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವರದಿ ವಿವರ:

ಕರ್ನಾಟಕ ರಾಜ್ಯ ದೇವಾಡಿಗ ಸಂಘ ಹಾಗೂ ದೇವಾಡಿಗ ಸಂಘ ದುಬೈ ಅಯೋಜನೆಯಲ್ಲಿ ನಡೆದ ವಿದ್ಯಾರ್ಥಿ ವೇತನ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ ಹಾಗೂ ದೇವಾಡಿಗ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. 

480+ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸಂಘದ ಇತಿಹಾಸದಲ್ಲಿ ದಾಖಲೆ ಬರೆದರು. ದುಬೈ ದೇವಾಡಿಗರ ಸುಮಾರು 2.10ಲಕ್ಷ ದಷ್ಟೂ ಹಣ ದೇಣಿಗೆ, ಮತ್ತು ಡಾ ಕೆ ವಿ ದೇವಾಡಿಗ ಟ್ರಸ್ಟ್ ವತಿಯಿಂದ  ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಅಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಹಾಗೆಯೆ ಶ್ರೀ ಹರೀಶ್ ಶೇರಿಗಾರ್ ಅವರು ಎಸ್ ಎಸ್ ಎಲ್ ಸಿ ಅಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ನೀಡುವ ಲ್ಯಾಪ್ ಟಾಪ್ ಕೂಡ ವಿದ್ಯಾರ್ಥಿಗೆ ನೀಡಲಾಯಿತು.

ಈ ಬಾರಿ  ಕರ್ನಾಟಕ ರಾಜ್ಯ ದೇವಾಡಿಗ ಸಂಘ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ 10ಲಕ್ಷ ಹಣ ಸಂಗ್ರಹಿಸಿದ್ದರು. ಸನ್ಮಾನ್ಯ ವೀರಪ್ಪ ಮೊಯಿಲಿ 1ಲಕ್ಷ ದೇಣಿಗೆ ನೀಡಿದರು.  ಕರ್ನಾಟಕ ರಾಜ್ಯ ದೇವಾಡಿಗ ಸಂಘ, ಕೇಂದ್ರೀಯ ಸಮಿತಿ, ಯುವ ಸಂಘಟನೆ ಮಹಿಳಾ ಸಂಘಟನೆ ಕಾರ್ಯಕರ್ತರಿಗೆ ಅಭಿನಂದನೆಗಳು, ಡಾ ದೇವರಾಜ್ ಕಂಕನಾಡಿ ಅವರಿಗೂ ಕೂಡ ಅಭಿನಂದನೆಗಳು. 

ದುಬೈ ದೇವಾಡಿಗ ಸಂಘದ ಪರವಾಗಿ  ಶ್ರೀ ಸುರೇಶ್ ಚಂದಪ್ಪ ಹಾಗೂ ಶ್ರೀ ಲಕ್ಷ್ಮಿದಾಸ್ ಮಂಗಳೂರು ಇವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ದಿನೇಶ್ ದೇವಾಡಿಗ ಕದ್ರಿ ,ಶ್ರೀ ಕೆ ಜೆ ದೇವಾಡಿಗ , ಶ್ರೀ ರವಿ ದೇವಾಡಿಗ, ಡಾ ಬಿ ಸ್ ಶೇರಿಗಾರ್, ಡಾ ಮಾಧವಿ ಭಂಡಾರಿ, ಆಕ್ಷಿತ್ ಸುವರ್ಣ, ಲಕ್ಷ್ಮಿದಾಸ್ ಮಂಗಳೂರು, ಸುರೇಶ್ ಚಂದಪ್ಪ ಅವರಿಗೂ ಕೂಡ ಅಭಿನಂದನೆಗಳು

ಅದ್ಯಕ್ಷ ಡಾ.ದೇವರಾಜ್ ಕೆ ಅದ್ಯಕ್ಷತೆ ವಹಿಸಿದ್ದರು. ಭಾಸ್ಕರ್ ಇಡ್ಯಾ ಸ್ವಾಗತಿಸಿದರು. ಶಿವಾನಂದ ಮೊಯ್ಲಿ ವಂದಿಸಿದರು. ವಿಜೇಶ್ ದೇವಾಡಿಗ ಹಾಗೂ ವಿಣಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು


Share