ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದವರಿಂದ ಆಟಿಡೊಂಜಿ ದಿನ ಆಚರಣೆ

ಮುಂಬಯಿ; ದೇವಾಡಿಗ ಮಹಿಳಾ ವಿಭಾಗದ ಆಟಿಡೊಂಜಿ ದಿನ ಕಾರ್ಯಕ್ರಮವು  ಜುಲೈ ೨೮ರಂದು ಸಂಘದ ದಾದರ್ ಸಭಾಂಗಣದ  ದೇವಾಡಿಗ ಸೆಂಟರ್ ನಲ್ಲಿ ಸಾಂಪ್ರದಾಯಿಕ ಆಚರಣೆಯೊಂದಿಗೆ ನೆರವೇರಿತು.

ಮಹಿಳಾ ಕಾರ್ಯಾದ್ಯಕ್ಷೆ  ಶ್ರೀಮತಿ ಜಯಂತಿ ಆರ್ ಮೊಯಿಲಿಯವರು, ಸಂಘದ ಅಧ್ಯಕ್ಷರಾದ  ಶ್ರೀ ರವಿ ದೇವಾಡಿಗ,  ಉಪಾದ್ಯಕ್ಷರಾದ ಶ್ರೀ ಸುರೇಶ್ ರಾವು ಪ್ರಧಾನ  ಕಾರ್ಯದರ್ಶಿ ಶ್ರೀ ವಿಶ್ವನಾಥ ದೇವಾಡಿಗ , ಮಾಜಿ ಕಾರ್ಯಾಧ್ಯಕ್ಷರಾದ  ಶ್ರೀ ಗೋಪಾಲ್ ಮೊಯಿಲಿ, ಶ್ರೀ ಕೆ. ಕೆ  ಮೋಹನ್‌ದಾಸ್, ಶ್ರೀ ಏಚ್. ಮೋಹನ್‌ದಾಸ್ ಶ್ರೀ ವಾಸು ದೇವಾಡಿಗ ,ಕೋಶದೀಕಾರಿ ಶ್ರೀ ದಯಾನಂದ ದೇವಾಡಿಗ,  ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿ, ಕಾರ್ಯಕಾರಿ ಸಮಿತಿಯ ಸದ್ಯಸರುಗಳು ಹಾಗೂ ನೆರೆದ ಅತಿಥಿ ಗಣ್ಯರನ್ನು ಹಾಗೂ ಮಹಿಳಾ ಸದ್ಯಸರನ್ನು ಸ್ವಾಗತಿಸಿದರು.

ಆಟಿದ ತಿಂಗಳ ಅಡುಗೆಗಳನ್ನು ತಯಾರಿಸಿ ತಂದ ಎಲ್ಲಾ ಮಹಿಳೆಯರನ್ನು ಅಭಿನಂದಿಸಿ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ತುಳುವ ಸಂಸ್ಕೃತಿ  ಆಚಾರ ವಿಚಾರಗಳನ್ನು ಅಳವಡಿಸಿ ತುಳುಭಾಷೆಯನ್ನು ಉಳಿಸಬೇಕೆಂದು ಕರೆಯಿತ್ತರು.

ಸಂಘದ ಅಧ್ಯಕ್ಷರಾದ ಶ್ರೀ ರವಿ ದೇವಾಡಿಗರು ಬಂದ ಮಹಿಳೆಯರನ್ನು ಅಭಿನಂದಿಸಿ  ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಅರ್ಹ ವಿದ್ಯಾರ್ಥಿಗಳು  ವಿದ್ಯಾಬ್ಯಾಸಕ್ಕಾಗಿ ಪಡೆದುಕೊಳ್ಳಬೇಕು ಹಾಗೂ ಆಗಸ್ಟ್ ೧೫ರಂದು ನಡೆಯುವ ವಾರ್ಷಿಕ ಮಹಾಸಭೆಗೆ ಎಲ್ಲರೂ ಹಾಜರಿರಬೇಕೆಂದು ಸಭಿಕರಿಗೆ ಕರೆಯಿತ್ತರು. 

ಮಾಜಿ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗ ಶ್ರೀ ಏಚ್ ಮೋಹನ್‌ದಾಸ್, ಶ್ರೀ ಕೆ ಕೆ ಮೋಹನ್‌ದಾಸ್  ಹಾಗೂ ಶ್ರೀ ಗೋಪಾಲ್ ಮೊಯಿಲಿಯವರು ಸಾಂದರ್ಭಿಕವಾಗಿ ಮಾತನಾಡಿದರು.

ಮಹಿಳೆಯರಿಗೆ ಅನೇಕ  ಒಂದು ನಿಮಿಷದ ಆಟ, ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಆಯೋಜಿಸಲಾಯಿತು.

ಸಾಮಾನ್ಯ ಜ್ಞಾನದ ಪ್ರಶ್ನೆಯಲ್ಲಿ  ಕನ್ನಡ  ವಿಭಾಗದಲ್ಲಿ  ಕ್ರಮವಾಗಿ  ಪ್ರಥಮ  ಶ್ರೀಮತಿ ವನಿತಾ ಆರ್ ದೇವಾಡಿಗ,  ದ್ವಿತೀಯ ಶ್ರೀಮತಿ ಶಾಂತ ಪಿ ದೇವಾಡಿಗ  ತೃತೀಯ ಶ್ರೀಮತಿ ನಿರ್ಮಲ ದೇವಾಡಿಗ,  ಇಂಗ್ಲೀಷ್ ವಿಭಾಗದಲ್ಲಿ ಪ್ರಥಮ  ಡಾಕ್ಟರ್ ವೀಣಾ ಎನ್ ಉಲ್ಲಾಳ್  ದ್ವಿತೀಯ ಶ್ರೀಮತಿ ಭಾರತಿ ಶೇರಿಗಾರ್ ತೃತೀಯ ಶ್ರೀಮತಿ  ಸುಜಾತ ಆರ್ ಶೇರಿಗಾರ್ ಇವರು ಬಹುಮಾನಗಳನ್ನು ಪಡೆದುಕೊಂಡರು. 

ಆಟಿಯ  ವಿಶೇಷತೆಯ ಬಗ್ಗೆ ಪ್ರಶ್ನೆಗಳಲ್ಲಿ ಶ್ರೀಮತಿ ಶುಭ ದೇವಾಡಿಗರು ಬಹುಮಾನವನ್ನು ತನ್ನದಾಗಿಸಿಕೊಂಡರು. 

ಸುಮಾರು ೪೫ ಬಗೆಯ ತುಳುನಾಡಿನ ಅಡುಗೆ ತಿನಿಸುಗಳನ್ನು ಪ್ರಸ್ತುತಪಡಿಸಲಾಯಿತು  ತುಳು ಪಾಡ್ದನವನ್ನು  ಶ್ರೀಮತಿ ಹೇಮಾ ದೇವಾಡಿಗ, ಶ್ರೀಮತಿ ಲಕ್ಷ್ಮಿ ದೇವಾಡಿಗ ಹಾಗೂ ಲೋಲಾಕ್ಷಿ ದೇವಾಡಿಗರು ಶುಸ್ರಾವ್ಯವಾಗಿ ಹಾಡಿದರು. ಆಟಿದ ವಿಶೇಷತೆಗಳ ಬಗ್ಗೆ ಉಪಾದ್ಯಕ್ಷೆ ಶ್ರೀಮತಿ ರಂಜಿನಿ ಮೊಯಿಲಿಯವರು  ವಿವರಿಸಿ ತುಳು ಓರಿಪಾಲೆ  ತುಳು ಬುಲೆ ಪಾಲೆ ಎಂಬ ವಿಷಯದ ಬಗ್ಗೆ ಚೊಕ್ಕವಾಗಿ  ವಿವರಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗರು ಮಾಡಿದರೆ ಶ್ರೀಮತಿ ಸುಜಾತ ದೇವಾಡಿಗರು ಪ್ರಾರ್ಥಿಸಿದರು.

ಕಾರ್ಯಕ್ರಮ ಯಶಸ್ವಿಯಾಗಲು ಸಂಘದ ಕ್ರೀಡಾ ಕಾರ್ಯದಕ್ಷೆ ಶ್ರೀಮತಿ ಜಯಂತಿ ಎಮ್ ದೇವಾಡಿಗ, ಮಹಿಳಾ ವ್ಸಿಭಾಗದ ಉಪ ಕಾರ್ಯಾದ್ಯಕ್ಷೆ ಶ್ರೀಮತಿ ಸುರೇಖಾ ದೇವಾಡಿಗರು ಸಹಕರಿಸಿದರೆ ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ ರವರು ದನ್ಯವಾದ ಗೈದರು.


Share