ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.) ಮಂಗಳೂರು:  “ಆಟಿಡೊಂಜಿ ದಿನ ಸಮಾರಂಭ "

ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗ ಸಂಘ (ರಿ) ಮಂಗಳೂರು ಹಾಗೂ ಇದರ ಯುವ ಮತ್ತು ಮಹಿಳಾ ಸಂಘಟನೆಯ ಆಶ್ರಯದಲ್ಲಿ ತಾರೀಕು 29/07/2018 ಆದಿತ್ಯವಾರ ಸಂಜೆ ಗಂಟೆ 5 ಕ್ಕೆ ಸಮಾಜಭವನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನೆರವೇರಿತು.

ತುಳುನಾಡ ಸಂಪ್ರದಾಯ  ಶೈಲಿಯಲ್ಲಿ ತೆಂಗಿನಕಾಯಿಯನ್ನು ಕುಟ್ಟಿ ಸಮಾರಂಭವು ತೆಳಿಕೆದ ಬೊಳ್ಳಿ ಶ್ರೀ ದೇವದಾಸ್ ಕಾಪಿಕಾಡ್‍ರವರಿಂದ ಉದ್ಘಾಟಿಸಲ್ಪಟ್ಟಿತು. ಕಲಾರಾಧನೆ ಮಾತ್ರವಲ್ಲ ಇಂತಹ ಜಾನಪದ, ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ತುಳು ಸಂಸ್ಕ್ರತಿಯನ್ನೂ ಫೋಷಿಸಿಕೊಂಡು ಬರುತ್ತಿರುವ ದೇವಾಡಿಗ ಸಮಾಜ ಭಾಂಧವರನ್ನು ಅವರು ಶ್ಲಾಷಿಸಿದರು.

ಮುಖ್ಯ ಉಪನ್ಯಾಸಕರು ಹೆಸರಾಂತ ಜನಪದ ವಿದ್ವಾಂಸ ತುಳುನಾಡ ಬೊಳ್ಳಿ ಶ್ರೀ ದಯಾನಂದ ಕತ್ತಲ್‍ಸಾರ್‍ರವರು ತುಳುನಾಡಿನಲ್ಲಿ ಅನಾದಿಕಾಲದಿಂದಲೂ ಬಂದಿರುವಂತಹ ನಂಬಿಕೆಗಳು, ಆಚರಣೆಗಳು, ಪ್ರಕೃತಿ ಮತ್ತು ದೈವರಾಧನೆಗಳ ಹಿಂದಿರುವ ಉದ್ದೇಶ ಮತ್ತು ಮಹತ್ವದ ಬಗ್ಗೆ ತರ್ಕಬದ್ದವಾದ ವಿಷಯ ಮಂಡನೆ ಮಾಡಿದರು.

ಮುಖ್ಯ ಅತಿಥಿಗಳಾದ ಶ್ರೀ ಸದಾನಂದ ಉಪಾಧ್ಯಾಯ ಅಧ್ಯಕ್ಷರು ರಾಗತರಂಗ ಮಂಗಳೂರು, ಶ್ರೀಮತಿ ಜ್ಯೋತಿ.ಎಸ್ ಶೆಟ್ಟಿ ಅಧ್ಯಕ್ಷರು ನೇತ್ರಾವತಿ ಲಯನ್ಸ್‍ಕ್ಲಬ್, ಶ್ರೀ ಸದಾನಂದ ಪೆರ್ಲ ಮುಖ್ಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಆಕಾಶವಾಣಿ ಮಂಗಳೂರು, ಶ್ರೀ ಸುಧಾಕರ ಕುಮಾರ್ ದೇವಾಡಿಗ ಖ್ಯಾತ ಉದ್ಯಮಿ ಮುಂಬಯಿ , ಡಾ.ಭಾವನ ಶೇರಿಗಾರ್ ಗೈನಾಕೋಲಿಜೆಸ್ಟ್ ಇಂಡಿಯನ್ ಆಸ್ಪತ್ರೆ ಮಂಗಳೂರು, ಡಾ.ಶ್ರುತಿಕೀರ್ತಿ ಕಾರ್ಡಿಯೊಲೋಜಿ ಆಸಿಸ್ಟೇಂಟ್, ಎ,ಜೆ ಆಸ್ಪತ್ರೆ ಮಂಗಳೂರು, ಶ್ರೀಮತಿ ಮಮತಾ ಎನ್ ಹಿರಿಯ ಉಪಾನ್ಯಾಸಕಿ, ಸರಕಾರಿ ಪೊಲಿಟೆಕ್ನಿಕ್ ಮಂಗಳೂರು ಇವರೆಲ್ಲ ಶುಭಾಶಂಸನೆ ಮಾಡಿದರು.

ಸಂಘದ ಅಧ್ಯಕ್ಷರಾದ ಡಾ. ದೇವರಾಜ್ ಕೆ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡ ಉದ್ದೇಶ ಮತ್ತು ಸಂಘದ ವಿವಿಧ ಸಾಮಾಜಿಕ, ಸಾಂಸ್ಕ್ರತಿಕ ಚಟುವಟಿಕೆಗಳ ಬಗ್ಗೆ ವಿವರ ನೀಡಿ ಈ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದವರನ್ನೆಲ್ಲಾ ಅಭಿನಂದಿಸಿದರು. 

ಸಂಘದ ಉಪಾದ್ಯಕ್ಷ ಶೀ ಅಶೋಕ್ ಮೊಯಿಲಿ, ಕೋಶಾಧಿಕಾರಿ ಶ್ರೀಮತಿ ಗೀತಾ.ವಿ ಕಲ್ಯಾಣ್‍ಪುರ್, ಯುವ ಸಂಘಟನೆ ಅಧ್ಯಕ್ಷ ಶ್ರೀ ಉದಯ ಕುಮಾರ್ ಕಣ್ವತೀರ್ಥ, ಮಹಿಳಾ ಸಂಘಟನೆ ಅಧ್ಯಕ್ಷೆ ಶ್ರೀಮತಿ ಮಮತಾ ಪದ್ಮನಾಭ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಾನಂದ ಮೊಯಿಲಿಯವರು ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಸಂಘಟನೆಯ ಕಾರ್ಯದರ್ಶಿ ಉಮಾ ರವಿರಾಜ್ ವಂದಿಸಿದರು. ಈ ಕಾರ್ಯಕ್ರಮವು ನೇತ್ರಾವತಿ ಲಯನ್ಸ್ ಕ್ಲಬ್ ರವರ ಸಹಯೋಗದೊಂದಿಗೆ ನಡೆಯಿತು.

ಊಟದ ವ್ಯವಸ್ಥೆಯಲ್ಲಿ ಆಟಿ ತಿಂಗಳ ವಿಶೇಷ ಖಾದ್ಯಗಳಾದ ಪತ್ರೊಡ್ಡೆ, ತಿಮರೆ ಚಟ್ನಿ, ಕುಕ್ಕು ಚಟ್ನಿ, ಪೊಡಿಯೆಟ್ಟಿ ಚಟ್ನಿ, ಪದೆಂಗಿ ಗಸಿ, ನೀರುಪ್ಪಡ್, ಮೂಡೆ, ಕೋರಿ, ಗಂಜಿವನಸು, ಕುಡು ಚಟ್ನಿ, ಪೆಲಕಾಯಿದ ಗಾರಿಗೆ, ಮರುವಾಯಿದ ಅಡ್ಡೆ, ಮತ್ತಿತರ 42 ಬಗೆಯ ತಿಂಡಿ ತಿನಸುಗಳನ್ನೂ ಬಡಿಸಲಾಯಿತು. ಅನಂತರ ಮನೋರಂಜನಾ ಕಾರ್ಯಕ್ರಮವೂ ಜರಗಿತು.

ಕಾರ್ಯಕ್ರಮದ ಸಂಚಾಲಕ ಶ್ರೀ ರಂಜನ್‍ದಾಸ್ ಅಚ್ಚುಕಟ್ಟಾಗಿ ಸಮಾರಂಭವನ್ನೂ ಸಂಯೋಜಿಸಿದರು. ಯುವ ಸಂಘಟನೆಯ ಕಾರ್ಯದರ್ಶಿ ಶ್ರೀ ವಿಜೇಶ್ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.             


             


Share