ತಮ್ಮ ಕಠಿಣ ಬಾಳರೀತಿಯಲ್ಲಿಯೇ ಸಿ.ಎ.ಪರೀಕ್ಷೆ ಪಾಸ್ ಅದ ಶ್ರೀ ಶಶಿಧರ್ ಕಜೆಕಾರ್ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿ

ಮಂಗಳೂರು: ತಮ್ಮ ಕಠಿಣ ಬಾಳರೀತಿಯಲ್ಲಿಯೇ ಸಿ.ಎ.ಪರೀಕ್ಷೆ ಪಾಸ್ ಅದ ಶ್ರೀ ಶಶಿಧರ್ ಕಜೆಕಾರ್ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿತಂದಿದ್ದಾರೆ. 

ಇತ್ತೀಚಿಗಿನ ದಿನಗಳಲ್ಲಿ ನಾವೆಲ್ಲ ನೋಡುತ್ತಿರುವ ಹಾಗೆ ವಿದ್ಯಾರ್ಥಿಗಳು ಪ್ರತಿಷ್ಠಿತ ಶಾಲೆ ಕಾಲೇಜುಗಳಿಗೆ ಹೋಗಿ ಉನ್ನತ ಶಿಕ್ಷಣ ಪಡೆದರು ಕೂಡ, ನಿರೀಕ್ಷಿತ ಗುರಿ ಸಾಧಿಸಲಿಕ್ಕೆ ಅಗದಿರೋದನ್ನು ಕಂಡಿದ್ದೇವೆ, ಆದರೆ ಶಶಿಧರ್ ಕಜೆಕಾರ್ ಅವರು ಎಲ್ಲರಿಗೂ ಸ್ಫೂರ್ತಿ. ಶಶಿಧರ್ ಅವರು ತಮ್ಮ ಶಾಲಾ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಪಾಂಡವರಕಲ್ಲು ಮುಗಿಸಿ ,ತಮ್ಮ ಪಿಯುಸಿ ಶಿಕ್ಷಣವನ್ನು ಸರ್ಕಾರಿ ಪಿಯು ಕಾಲೇಜು ಪುಂಜಲಕಟ್ಟೆ ಅಲ್ಲಿ ಪಡೆದು ಪದವಿ ಶಿಕ್ಷಣದ ಸಮಯ ಹಗಲು ಹೊತ್ತಲ್ಲಿ ಕೆಲಸಕ್ಕೆ ಹೋಗಿ, ಸಾಯಂಕಾಲ ಬೆಸಂತ್ ಕಾಲೇಜ್ ನಲ್ಲಿ ಶಿಕ್ಷಣ ಪಡೆದು ಡಿಗ್ರಿ ಶಿಕ್ಷಣ ಪದವಿ ಪಡೆದು ಅಷ್ಟಕ್ಕೇ ತ್ರಪ್ತಿ ಪಡೆಯದೆ, ಚಾರ್ಟರ್ಡ್ ಅಕೌಂಟೆಂಟ್ ರಾಮಚಂದ್ರ ಹೆಗ್ಡೆ ಅವರ ಹತ್ತಿರ ತರಬೇತಿ ಪಡೆದು ತಮ್ಮ ಗುರಿಯಾದ ಚಾರ್ಟೆಡ್ ಆಕೌಂಟೆಂಟ್ ಪರಿಕ್ಷೆ ಪಾಸಾಗಿ ಮೆರೆದಿದ್ದಾರೆ. 

ಇವರ ತಾಯಿ ನಾಗಮ್ಮ ಗೃಹಿಣಿ, ತಂದೆ ನಾರಾಯಣ ದೇವಾಡಿಗ ಕೂಲಿ ಕೆಲಸ ಹಾಗೂ ಮನೆಯಲ್ಲಿ ದನ ಸಾಕಿ ಚಿಕ್ಕ ಪುಟ್ಟ ಕೃಷಿ ಕೆಲಸ ತಮ್ಮ ಜಾಗದಲ್ಲಿ ತೊಡಗಿದ್ದಾರೆ ಹಾಗೂ ಇವರ ಅನ್ನ ತವಿಲು ಬರಿಸುದರಲ್ಲಿ ಪ್ರವೀಣ. ಈ ವಿಷಯವನ್ನು ಯಾಕೆ ಹೇಳುತ್ತಿದ್ದೇನೆ ಅಂದರೆ ತಮ್ಮ ನಿಗದಿತ ಮಿತಿಯೊಳಗೆ ಶಶಿಧರ್ ಕಜೆಕಾರ್ ಅವರು ಸಿ.ಎ. ಪರೀಕ್ಷೆ ಪಾಸ್ ಆಗಿ ಎಲ್ಲರಿಗೂ ಸ್ಫೂರ್ತಿಯಾಗಿ  ನಾವು ಏನು, ಎಲ್ಲಿ, ಯಾವುದನ್ನು ಕಲಿಯಬೇಕು ಎಂಬುದರಲ್ಲೇ ಕಾಲಕಳೆಯದೆ, ಸಾಧನೆ ಮಾಡಲಿಕ್ಕೆ ನಾವು ಯಾವ ದೊಡ್ಡ ಶಾಲೆ ಅಲ್ಲಿ ಕಲಿಯ ಬೇಕಿಲ್ಲ ನಮಲ್ಲಿ ಹಠ ಮತ್ತು ಆತ್ಮವಿಶ್ವಾಸ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅಂತ ಶಶಿಧರ ಕಜೆಕಾರ್ ತೋರಿಸಿ ಕೊಟ್ಟಿದ್ದಾರ.

ಶಶಿಧರ್ ಕಜೆಕಾರ್ ಅವರ ಮುಂದಿನ ಭವಿಷ್ಯಕ್ಕೆ ಶುಭಾಶಯ ಹಾಗೂ ಶುಭ ಹಾರೈಕೆಗಳು.

~ ದೇವಾಡಿಗ Idol


Share