85%ಕ್ಕೂ ಹೆಚ್ಚು ಅಂಕ ಪಡೆದ ನಮ್ಮ ಸಮಾಜದ 156 ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್ ಶಿಪ್

ಉಡುಪಿ: ತಾ.19-8-2018ರಂದು ಉಡುಪಿ ದೇವಾಡಿಗರ ಸೇವಾ ಸಂಘದ ಆಶ್ರಯದಲ್ಲಿ ಮುಂಬೈ ದೇವಾಡಿಗ ಸಂಘ ಮತ್ತು ವಿವಿದ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚಿಟ್ಪಾಡಿಯ ದೇವಾಡಿಗ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಬಹಳ ಸಡಗರದಿಂದ ಸಮುದಾಯದ ಅಧಿಕ ವಿದ್ಯಾರ್ಥಿಗಳು ಹಾಗೂ ಪೋಶಕರ ಉಪಸ್ಥಿತಿಯಲ್ಲಿ ಜರುಗಿತು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಮಾರಂಭದಲ್ಲಿ ನಮ್ಮ ಸಮಾಜದ 90% ಗಿಂತ ಹೆಚ್ಚು ಅಂಕ ಗಳಿಸಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪಾಸಾದ ಮಕ್ಕಳೂ ಸೇರಿ 156 ಮಂದಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಶಾಶಕ ರಘಪತಿ ಭಟ್ ಸಮಾರಂಭವನ್ನು ಉದ್ಘಾಟಿಸಿದರು. ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಅವರು ಏಕನಾಥೇಶ್ವರಿ ಸಭಾಭವನ ಉದ್ಘಾಟಿಸಿದರು. 

ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ 85 ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸುಮಾರ 10 ಲಕ್ಷ ರೂ ಮೌಲ್ಯದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ನೀಡಿ ಉಡುಪಿ ಸಂಘ ಮೆರೆದಿದೆ.

ಸಂಘ ಅದ್ಯಕ್ಷ ಸೀತಾರಮ್ ಕೆ. ಅದ್ಯಕ್ಷತೆ ವಹಿಸಿದ್ದರು.

ಗಣೇಶ ದೆವಾಡಿಗ ಸ್ವಾಗತಿಸಿದರು. ಯು.ರತ್ನಾಕರ ದೇವಾಡಿಗ ಹಾಗೂ ಜ್ಯೋತಿ ದೇವಾಡಿಗ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.

 


Share