ಬೈಂದೂರು : ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧಾಕರ ದೇವಾಡಿಗ ಮರು ಆಯ್ಕೆ

ಬೈಂದೂರು: ಸಾರ್ವಜನಿಕ ಗಣೇಶೋತ್ಸವ ಸಮಿತಿ ಶ್ರೀಸೇನೆಶ್ವರ ದೇವಸ್ಥಾನ ಬೈಂದೂರು ಇದರ 2018ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ ದೇವಾಡಿಗ ಯಡ್ತರೆ ಮರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ನಾಗರಾಜ ಪಿ.ಯಡ್ತರೆ, ಉಪಾಧ್ಯಕ್ಷರಾಗಿ ಹೆರಿಯ ದೇವಾಡಿಗ, ಗುರುಪ್ರಕಾಶ್, ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಪಿ.ಯಡ್ತರೆ, ಶಿವಸುಬ್ರಹ್ಮಣ್ಯ ಶೆಟ್ಟಿ, ಗೌರವ ಲೆಕ್ಕ ಪರಿಶೋಧಕರಾಗಿ ಸುರೇಶ್ ಬಟ್ವಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಶಾಂ ಶೇಟ್, ರವೀಂದ್ರ ಜೆ, ರವೀಂದ್ರ ಶ್ಯಾನುಭಾಗ್, ಕಾರ್ಯಕ್ರಮದ ಉಸ್ತುವಾರಿಯಾಗಿ ಪಿ.ದಯಾನಂದ , ಸಂಜಯ್ ಬೈಂದೂರು, ಸದಾಶಿವ ಮೊಗವೀರ, ಶಂಕರ ಮೊಗವೀರ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಪ್ರಕಣೆಯಲ್ಲಿ ತಿಳಿಸಲಾಗಿದೆ.


Share