ದೇವಾಡಿಗ ಸಂಘ ಮುಂಬಯಿ : ನವಿ ಮುಂಬಯಿ ಸಮಿತಿಯಿಂದ ಆಟದ ಅಂಜಿ ದಿನ ಕಾರ್ಯಕ್ರಮ

ಮುಂಬಯಿ: ದೇವಾಡಿಗ ಸಂಘ ಮುಂಬಯಿಯ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ಆಟದ ಒಂಜಿ ದಿನ ಕಾರ್ಯಕ್ರಮವನ್ನು ರವಿವಾರ ಅಗಸ್ಟ್ 12ರಂದು ದೇವಾಡಿಗ ಭವನ ನೆರೊಲ್ ನಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ, ಇವರ ಧರ್ಮಪತ್ನಿ ಶ್ರೀಮತಿ ವನಿತಾ ದೇವಾಡಿಗ ಇವರು ಮುಖ್ಯ ಅತಿಥಿಯಾಗಿದ್ದು ನವಿ ಮುಂಬಯಿ  ಸಮಿತಿಯ ಮಹಿಳಾ ವಿಭಾಗದ ಕಾರ್ಯದ್ಯಕ್ಷೆ ಶ್ರೀಮತಿ ಅಂಬಿಕಾ ಜನಾರ್ಧನ ದೇವಾಡಿಗರು ಅಧ್ಯಕ್ಷೀಯ ಸ್ಥಾನ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಆರ್ ಮೊಯ್ಲಿ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮ ದಯಾನಂದ ದೇವಾಡಿಗ, ನವಿ ಮುಂಬಯಿ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಲತಾ ಆನಂದ ಶೇರಿಗಾರ್, ಮಾಜಿ ಕಾರ್ಯಧ್ಯಕ್ಷೆ ಶ್ರೀಮತಿ ಪ್ರಭಾವತಿ ರಘು ದೇವಾಡಿಗ, ನವಿ ಮುಂಬಯಿ ಸಮಿತಿಯ ಕಾರ್ಯಧ್ಯಕ್ಷ  ಆನಂದ ಶೇರಿಗಾರ್ ಮತ್ತು ಮಾಜಿ ಕಾರ್ಯದ್ಯಕ್ಷರಾದ ಶ್ರೀ ಪಿ.ವಿ.ಎಸ್ ಮೊಯ್ಲಿ ಇವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮುಖ್ಯ ಅತಿಥಿ ಮತ್ತು ಇತರ ಗಣ್ಯರು ದೀಪ ಬೆಳಗಿಸುದರೊಂದಿಗೆ ಹಾಗೂ ಶ್ರೀಮತಿ ಶೋಭಾ ದೇವಾಡಿಗ ಮತ್ತು ಆಶಾ ದೇವಾಡಿಗ ಇವರು ಗಣೇಶಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ವಾಸು ದೇವಾಡಿಗ, ಮಾಜಿ ಅಧ್ಯಕ್ಷರಾದ ಹಿರಿಯಡ್ಕ ಮೋಹನ್‍ದಾಸ್, ಗೋಪಾಲ ಮೊಯ್ಲಿ,  ಶ್ರೀನಿವಾಸ್ ಕರ್ಮರನ್, ಇವರು ವಿಶೇಷವಾಗಿ ಉಪಸ್ಥಿತರಿದ್ದು ಅವರೊಂದಿಗೆ ಸಂಘದ ಜೊತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್, ಜೊತೆ ಕೋಶಾಧ್ಯಕ್ಷರಾದ ದಯಾನಂದ ದೇವಾಡಿಗ, ಅಸಲ್ವಾ ಪ್ರಾದೇಶಿಕ ಸಮಿತಿಯ ಅಶೋಕ ದೇವಾಡಿಗ, ಸಿಟಿ ಪ್ರಾದೇಶಿಕ ಸಮಿತಿಯ ಹೇಮನಾಥ್ ದೇವಾಡಿಗ, ಸಂಘದ ಕ್ರೀಡಾ ಸಮಿತಿ ಅಧ್ಯಕ್ಷೆ ಜಯಂತಿ ದೇವಾಡಿಗ, ಸಮಿತಿ ಸದಸ್ಯರಾದ ಶ್ರೀ ಜನಾರ್ಧನ್ ದೇವಾಡಿಗ ಶ್ರೀಮತಿ ರಂಜಿನಿ ಆರ್ ಮೊಯ್ಲಿ, ಶ್ರೀಮತಿ ಸುರೇಖಾ ಹೆಚ್ ದೇವಾಡಿಗ, ರಮೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀಮತಿ ಲತಾ ಆನಂದ ದೇವಾಡಿಗ ಅತಿಥಿಗಳನ್ನು ಸ್ವಾಗತಿಸುತ್ತಾ ನವಿಮುಂಬಯಿ ವಿಭಾಗದ ಚಟುವಟಿಕೆಗಳ ಬಗ್ಗೆ ವರದಿ ಸಲ್ಲಿಸಿದರು, ಸದಸ್ಯರಾದ ಪದ್ಮನಾಭ ದೇವಾಡಿಗ ಇವರು ಆಟಿ ತಿಂಗಳಿನ ಮಹತ್ವ, ಆಚಾರ, ವಿಚಾರ ಮತ್ತು ಪರಂಪರೆಯ ಬಗ್ಗೆ ಮಾತನಾಡುತ್ತಾ ಹಿಂದೆ ಆಟಿ ತಿಂಗಳಲ್ಲಿ ಪಡೆಯುವ ಬವಣೆ ಮತ್ತು ಆಚಾರಕ್ಕಾಗಿ ಉಪಯೋಗಿಸುವ ಖಾಧ್ಯ ಪದಾರ್ಥಗಳು ಈಗಿನ ಪೀಳಿಗೆ ಮಕ್ಕಳಿಗೆ ಮನವರಿಕೆ ಮಾಡುತ್ತಾ ಮಾಡಿಕೊಂಡು ಕಾರ್ಯಕ್ರಮವನ್ನು ವರ್ಣಿಸಿದರು. ಹಾಗೆಯೇ ಶ್ರೀ ಹಿರಿಯಡ್ಕ ಮೋಹನ್‍ದಾಸ್ರವರು ಮಾತನಾಡುತ್ತಾ ಸಂಘದ ನವಿ ಮುಂಬಯಿ ವಿಭಾಗದ ಸಮಾಜಮುಖಿ ಕಾರ್ಯಕ್ರಮವನ್ನು ಶ್ಲಾಘಿಸಿ ಪ್ರತಿ ವರ್ಷವು  ಉತ್ತಮ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ವರ್ಣಿಸಿ ಎಲ್ಲರಿಗೂ ಶುಭಾಶಯ ಕೋರಿದರು.

ಮಹಿಳಾ ಅಧ್ಯಕ್ಷೆ ಜಯಂತಿ ಎಮ್ ಮೊಯ್ಲಿಯವರು ಮಾತನಾಡುತ್ತಾ ಈಗಿನ ಮುಂಬಯಿ ಇತಂಹ ನಗರಗಳಲ್ಲಿ ವಾಸಿಸುವ ಈಗಿನ ಮತ್ತು ಮುಂದಿನ ಪೀಳಿಗೆಗೆ ನಮ್ಮ ಭಾಷೆ, ಸಂಸ್ಕøತಿ, ಕಲೆ ಆಟೋಟಗಳ ಬಗ್ಗೆ ಮಾಹಿತಿ ನೀಡುತ್ತಾ ಅದನ್ನು ಬೆಳೆಸಿಕೊಳ್ಳಬೇಕೆಂದು ಆಶಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಶ್ರೀಮತಿ ವನಿತಾ ರವಿ ದೇವಾಡಿಗರು ಕಾರ್ಯಕ್ರಮವನ್ನು ಶ್ಲಾಘ್ಲಿಸಿ  ತಂಬು ಹೃದಯದ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.

ಸಮಿತಿಯ ಉಪಾಧ್ಯಕ್ಷರಾದ ಆಡ್ವೊಕೇಟ್ ಪ್ರಭಾಕರ ಎಸ್ ದೇವಾಡಿಗರು ಊರಿನ ಪಾರಂಪರಿಕ ಆಟಗಳಾದ ಚೆನ್ನಮಣಿ ಆಟ, ತೆಂಗಿನಕಾಯಿ ಕಟ್ಟುವುದು, ಮಡಿಲು ಮಡಿಯುವುದು ಹೀಗೆ ಕೆಲವು ಕಾರ್ಯಕ್ರಮಗಳು, ಸ್ಪರ್ಧೆ ಮತ್ತು ಅವುಗಳ ಸಂಪೂರ್ಣ ಮಾಹತಿ ನೀಡಿ ಸದಸ್ಯರನ್ನು ರಂಜಿಸಿದರು.

ಮಹಿಳೆಯರಿಗೆ ಮತ್ತು ಪುರಷರಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸಿ ಎಲ್ಲಾ ವಿಜೆತರಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನವನ್ನು ನೀಡಲಾಯಿತು.

ಸಮಿತಿಯ ಮಹಿಳೆಯರು ವಿಧ ವಿಧವಾದ ಸುಮಾರು ಮೂವತ್ತು ಪ್ರಕಾರಗಳ ಖದ್ಯಾ ಪದಾರ್ಥಗಳನ್ನು ಪ್ರದರ್ಶಿಸಿದರು ಮತ್ತು ಎಲ್ಲರೂ ಅವುಗಳ ರಚಿಸಿ ಆನಂದಿಸಿದರು.

ಕೊನೆಯಲ್ಲಿ ಮಹಿಳಾ ಕಾರ್ಯಧ್ಯಕ್ಷೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲರೂ ಚಿಂತನ ಮಂಥನ ಮೂಲಕ ಉಪಸ್ಥಿತರಿದ್ದ ಎಲ್ಲಾ ಸದಸ್ಯರು, ಆಹಾರ ಪದಾರ್ಥಗಳನ್ನು ತಯಾರಿಸಿದ ಮಹಿಳೆಯರು ಸ್ಪರ್ಧಿಗಳು ಹಾಗೂ ಸಂಘದ ಎಲ್ಲ ಸದಸ್ಯರಿಗೆ ಕೃತಜ್ಞತೆಯನ್ನು ಒಪ್ಪಿಸಿದರು. ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶ್ರೀಮತಿ ಶಾಂತಾ ದೇವಾಡಿಗರು ಧನ್ಯವಾದ ಸಮರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.


Share