ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡ್ ಪು ಇವರಿಂದ  ಆಟಿದ ಒಂಜಿ ದಿನ ಕಾರ್ಯಕ್ರಮ

 

ಮುಂಬೈ: ದೇವಾಡಿಗ ಸಂಘ ಮುಂಬೈ ಇದರ ಪ್ರಾದೇಶಿಕ ಸಮನ್ವಯ ಸಮಿತಿ ವಿಕ್ರೋಲಿಯಿಂದ ಮುಲುಂಡುವರೆಗಿನ  ಭಾಂಡ್ ಪು ವಲಯದ ಮಹಿಳಾ ವಿಭಾಗದವರಿಂದ ಆಟಿದ ಒಂಜಿ ದಿನ ಎಂಬ ಕಾರ್ಯಕ್ರಮವು ಶ್ರೀ ನಿತ್ಯಾನಂದ ಮಂದಿರದ ವಟರಾದಲ್ಲಿ ವಲಯದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ದೇವಾಡಿಗರ ಸಮಕ್ಷಮದಲ್ಲಿ ಬಹಳ ವಿಜ್ರಂಭಣೆಯಿಂದ ನೆರವೇರಿತು. 

ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರು ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ  ಶ್ರೀಮತಿ ಗಳಾದ ಮೆಗ್ದಲಿನ್, ಪ್ರಫುಲ್ಲ ದೇವಾಡಿಗ, ಲೋಲಾಕ್ಷಿ ದೇವಾಡಿಗ, ಸರೋಜಿನಿ ದೇವಾಡಿಗ, ಪ್ರಮೀಳಾ ದೇವಾಡಿಗ, ರಂಜಿತಾ ದೇವಾಡಿಗ ಮತ್ತು ಲತಾ ದೇವಾಡಿಗ ಆಸೀನರಾದ ನಂತರ    ಗಣ್ಯರಿಂದ ದೀಪ ಪ್ರಜ್ವಲನೆ ಮಾಡಿದರು.   ಶ್ರೀಮತಿ ಲೋಲಾಕ್ಷಿ ದೇವಾಡಿಗರು ಪ್ರಾಥನೆ ಹಾಡಿದರು.

ಮುಂಬಯಿ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರು ಮಾತನಾಡುತ್ತ ನಮ್ಮ ಸಂಘ ಎಲ್ಲ ವಿಧದಿಂದಲೂ ಆರ್ಥಿಕ  ಸ್ಥಿತಿಯಲ್ಲಿ ಹಿಂದುಳಿದ  ವರ್ಗದ ಹೆಚ್ಚಿನ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಮತ್ತು  ಅನಾರೋಗ್ಯದಿಂದ ಬಳಲುವವರಿಗೆ ಹೆಚ್ಚಿನ ರೀತಿಯ  ಆರ್ಥಿಕ ಸಹಾಯ ಧನವನ್ನು ಮಾಡಲು ಸದಾ ತಯಾರಿದೆ ಎಂದರು. ಅದಲ್ಲದೆ ಇಂತಹ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖೆಯಲ್ಲಿ ಬಂದಿದ್ದ ಯುವಕ ಯುವತಿಯರ ಪ್ರಶಂಶೆಯನ್ನು ಮಾಡಿದರು.

ಶ್ರೀಮತಿ ಪ್ರಫುಲ್ಲ ದೇವಾಡಿಗ ಮತ್ತು ಶ್ರೀ ಜಯ ದೇವಾಡಿಗರು ನಮ್ಮ ಹಿರಿಯರು ಆಟಿ ತಿಂಗಳಲ್ಲಿ ಪಡೆದ ಕಷ್ಟ ದಿನಗಳು ಮತ್ತು ಸಂಸ್ಕೃತಿಯ ಬಗ್ಗೆ ವಿವರವಾಗಿ ಹೇಳಿದರು. ಹೇಮನಾಥ್ ದೇವಾಡಿಗ, ರಂಜಿನಿ ಮೊಯಿಲಿ ನರೇಶ್ ದೇವಾಡಿಗ, ವಿಶ್ವನಾಥ ದೇವಾಡಿಗ, ವೀಣಾ ದೇವಾಡಿಗ, ಆತಿಷ್ ದೇವಾಡಿಗ ಮೋಹನ್ ದೇವಾಡಿಗ ಮತ್ತು ಶಿವಾನಂದ ದೇವಾಡಿಗ ಸಂದರ್ಭಕ್ಕೆ ಅನುಸಾರವಾಗಿ ಮಾತನಾಡಿದರು.

ಶ್ರೀ ನರೇಶ್ ದೇವಾಡಿಗರು ತಮ್ಮ ಪರವಾಗಿ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಎಲ್ಲಾ ಯುವ ಪೀಳಿಗೆಯು ವಿಧ್ಯಾವಂತರಾಗಿ ಸಮಾಜದ ಏಳಿಗೆಗಾಗಿ ಮುಂದಾಗಬೇಕೆಂದು ಹಾರೈಸಿದರು.

ದೇವಾಡಿಗ ಸಂಘದ ಮಾಜಿ ಅಧ್ಯಕ್ಷರಾದ  ಶ್ರೀ ವಾಸು ದೇವಾಡಿಗ ಮತ್ತು ಶ್ರೀಮತಿ  ಪ್ರಫುಲ್ಲ ದೇವಾಡಿಗ ತಮ್ಮ ವತಿಯಿಂದ ವಿದ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರಿಗೆ ಸಹಾಯ ದನವನ್ನು ನೀಡಿ ಮುಂಬರುವ ಸಂಘದ ಶತಮಾನೋತ್ಸವದ ಸಮಯದಲ್ಲಿ ದೇವಾಡಿಗ ಸಂಘದ ಪ್ರತಿಯೊಬ್ಬ ಮಗುವೂ ವಿಧ್ಯವಂತನಾಗುವಲ್ಲಿ ಯಶಸ್ವಿಯನ್ನು ಪಡೆಯುವ ಸಾಧನೆಯು ದೇವಾಡಿಗ ಸಂಘದ ಮುಖ್ಯ ಉದ್ದೇಶ ಎಂದರು

ಪ್ರಫುಲ್ಲ ದೇವಾಡಿಗ ಮತ್ತು ರಂಜಿತಾ ದೇವಾಡಿಗರು ವಿವಿದ ಕಾರ್ಯಕ್ರಮಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಪ್ರೊತ್ಶಹಿಸಿದರು.

ಸಮಾಜದ ಹೆಚ್ಚಿನ ಸಂಖೆಯಲ್ಲಿ ಮಹಿಳೆಯರು ತುಳುನಾಡಿನ ಆಟಿ ತಿಂಗಳಿಗೆ ಸಂಬಂದಪಟ್ಟ ತರತರದ ತಿಂಡಿಗಳನ್ನು ತಯಾರಿಸಿ ತಂದ ಆಟಿದ ಒಂಜಿ ದಿನದ ಕಾರ್ಯಕ್ರಮವು ಯಶಸ್ವಿಯಾಗುವುದಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಿದರು

ವಯಸ್ಸಿನಲ್ಲಿ ಚಿಕ್ಕವರಾದರೂ ಕುಮಾರಿ ಮೇಘ ದೇವಾಡಿಗ ಚೊಕ್ಕವಾಗಿ ಈ ಕಾರ್ಯಕ್ರಮವನ್ನು ನಿರೂಪಿಸುದಲ್ಲಿ  ಯಶಸ್ವಿಯಾದರು. ಅತಿಷ್ ದೇವಾಡಿಗರ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.


Share