ದೇವಾಡಿಗ ಸಂಘ ಮುಂಬಯಿಯ ಸ್ವಾತಂತ್ರೋತ್ಸವದ  ಆಚರಣೆ ಮತ್ತು ವಿಧ್ಯಾರ್ಥಿ ವೇತನ ವಿತರಣೆ-2018

ಸ್ವಾತಂತ್ರ್ಯ  ದಿನಾಚರಣೆಯನ್ನು  2018 ರ ಆಗಸ್ಟ್ 15 ರಂದು ನಮ್ಮ ಸಂಘದ ಅಧ್ಯಕ್ಷರಾದ  ಶ್ರೀ ರವಿ ಎಸ್ ದೇವಾಡಿಗರ ದ್ವಜಾರೋಹಣೆ ನೆರವೇರಿಸಿ ದೇವಾಡಿಗ ಭವನ ನೆರುಳಿನಲ್ಲಿ ಆಚರಿಸಲಾಯಿತು. 

ಈ ಸಂಧರ್ಭದಲ್ಲಿ ಅವರು ಮಾತನಾಡುತ್ತ ಸ್ವಾತಂತ್ರ್ಯ ದಿನ ನಮಗೆ ಎಲ್ಲರಿಗೂ ಮಂಗಳಕರ ಸಂದರ್ಭವಾಗಿದೆ, ಭಾರತದ ಸ್ವಾತಂತ್ರ್ಯ ದಿನವು ಎಲ್ಲಾ ಭಾರತೀಯ ನಾಗರಿಕರಿಗೆ ಪ್ರಮುಖ ದಿನವಾಗಿದೆ ಎಂದು ಇತಿಹಾಸದಲ್ಲಿ ಶಾಶ್ವತವಾಗಿ ಉಲ್ಲೇಖಿಸಲಾಗಿದೆ. ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಂದ ಅನೇಕ ವರ್ಷಗಳ ಕಠಿಣ ಹೋರಾಟದ ನಂತರ ನಾವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಬಂದ ದಿನ. ಭಾರತದ ಸ್ವಾತಂತ್ರ್ಯದ ಮೊದಲ ದಿನವನ್ನು ನೆನಪಿಟ್ಟುಕೊಳ್ಳಲು ಮತ್ತು ಭಾರತದ ಸ್ವಾತಂತ್ರ್ಯ ಪಡೆಯುವಲ್ಲಿ ತಮ್ಮ ಜೀವವನ್ನು ತ್ಯಾಗ ಮಾಡಿದ ಮಹಾನ್ ನಾಯಕರ ಎಲ್ಲಾ ತ್ಯಾಗಗಳನ್ನು ನೆನಪಿಟ್ಟುಕೊಳ್ಳಲು ನಾವು ಆಗಸ್ಟ್ 15 ರಂದು ಪ್ರತಿ ವರ್ಷ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತೇವೆ. ನಮ್ಮ ಸಂಘದಲ್ಲಿ ನಾವು ಎಲ್ಲರೂ ಒಂದಾಗಬೇಕಿದೆ ಏಕೆಂದರೆ ಮುಂದಿನ  ದಿನಗಳಲ್ಲಿ 2025 ರ ಶತಮಾನೋತ್ಸವದ ಆಚರಣೆಗಾಗಿ ನಾವು ಅನೇಕ ಕಾರ್ಯಕ್ರಮಗಳನ್ನು ಹೊಂದಿದ್ದೇವೆ ಎಂದರು.

ಪ್ರಧಾನ ಗೌರವ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ ದೇವಾಡಿಗ,ಆನಂದ್ ಶೇರಿಗಾರ್, ಪ್ರಾದೇಶಿಕ ಸಮನ್ವಯ ಸಮಿತಿ ನವಿ ಮುಂಬಯಿ, ಮಾಜಿ ಅಧ್ಯಕ್ಷ ಎಚ್.ಮೋಹನ್‌ದಾಸ್, ಜತೆ ಕಾರ್ಯದರ್ಶಿಗಳು ಶ್ರೀಮತಿ ಮಾಲತಿ ಜೆ ಮೊಯಿಲಿ ಮತ್ತು ಶ್ರೀ ಗಣೇಶ್ ಶೇರಿಗಾರ್, ಕೃಷ್ಣ ಬಿ ದೇವಾಡಿಗ, ಶಿಕ್ಷಣ ಸಮಿತಿಯ ಅಧ್ಯಕ್ಷ,ಕೋಶದಿಕಾರಿ ಶ್ರೀ  ದಯಾನಂದ ದೇವಾಡಿಗ, ವೈಧ್ಯಕೀಯ ಮತ್ತು ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಶ್ರೀ ಜನಾರ್ಧನ ದೇವಾಡಿಗ, ಪೂರ್ಣಿಮಾ ದೇವಾಡಿಗ, ಮಹಿಳಾ  ವಿಭಾಗ ಕಾರ್ಯದರ್ಶಿ, ನಿತೇಶ್ ದೇವಾಡಿಗ, ಪ್ರಾದೇಶಿಕ ಸಮನ್ವಯ ಸಮಿತಿ, ನಗರ ವಲಯ,ಸಧ್ಯಸರು ಶ್ರೀ ಚಂದ್ರಶೇಖರ ದೇವಾಡಿಗ, ಶಾಂತಾ ದೇವಾಡಿಗ, ರಂಜಿನಿ ಮೊಯಿಲಿ ಮಹಿಳಾ ವಿಭಾಗ ಉಪಾಧ್ಯಕ್ಷೆ, ಲತಾ ಶೇರಿಗಾರ್, ವನಿತಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. 

ಭೋಜನದ ನಂತರದ  93 ನೇ ವಾರ್ಷಿಕ ಮಹಾಸಭೆ ರಂಜಿನಿ ಮೊಯಿಲಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. 

ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಅಜೆಂಡಾ ಪ್ರಕಾರ ಚರ್ಚೆ ನಡೆಸಿದರು. ಸಂಘದ ಉನ್ನತಿ ಮತ್ತು ಶತಮಾನೋತ್ಸವದ ಆಚರಣೆಯ  ವಿಷಯವಾಗಿ  ಸದಸ್ಯರು ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಉಚಿತ / ಅರ್ಹತೆ ವಿದ್ಯಾರ್ಥಿವೇತನ ವಿತರಿಸುವ ಕಾರ್ಯಕ್ರಮದಲ್ಲಿ  ಮಹಾರಾಷ್ಟ್ರ ರಾಜ್ಯ ಮಂಡಳಿ ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಅಂಕಗಳನ್ನು (94.20%) ಪಡೆದ ಕುಮಾರಿ  ಸುಮಾ ವೆಂಕಟೇಶ್ ಗೌಡ  ಕನ್ನಡ ಭವನ ಸೊಸೈಟಿ ಪ್ರೌಢಶಾಲೆ, ಫೋರ್ಟ್  ಮತ್ತು  ಸಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ  ಕುಮಾರಿ ಶ್ವೇತಾ ಗೋಪಾಲ್ ದೇವಾಡಿಗ ಅವರನ್ನು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಕೆ. ಭುಜಂಗ್ಧರ್ ರಾವ್ ಮತ್ತು ಶ್ರೀ ಏಕನಾಥೇಶ್ವರಿ  ದೇವಸ್ಥಾನದ ಟ್ರಸ್ಟಿ ಶ್ರೀ ಅಣ್ಣಯ್ಯ ಶೇರಿಗಾರರು ಅನುಕ್ರಮವಾಗಿ ಗೌರವಿಸಿದರು.  

224 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಸಂಘದ ಕಚೇರಿದಾರಕರಿಂದ ಬೇರೆ ಬೇರೆ ಪ್ರಾದೇಶಿಕ ಸಮನ್ವಯ ಸಮಿತಿಯ ಕಚೇರಿ ದಾರಕರಿಂದ ವಿದ್ಯಾರ್ಥಿವೇತನವನ್ನು ಪಡೆದರು.  

ಶಿಕ್ಷಣ ವಿಭಾಗದ ಅಧ್ಯಕ್ಷ ಶ್ರೀ ಕೃಷ್ಣ ಬಿ ದೇವಾಡಿಗ ವಿದ್ಯಾರ್ಥಿವೇತನ ವಿತರಿಸುವುದರಲ್ಲಿ ಸಹಕಾರ ನೀಡಿದ ಸದಸ್ಯರ ಸಹಕಾರಕ್ಕಾಗಿ ಧನ್ಯವಾದ ನೀಡಿದರು.


 


Share