ಖ್ಯಾತ ಟೈಲರ್ ಮೂಲ್ಕಿ ರಾಮ ದೇವಾಡಿಗ ನಿಧನ
ಮೂಲ್ಕಿ: ಆರು ದಶಕಗಳಿಂದಲೂ ಹೆಚ್ಚು ಕಾಲ ಇಲ್ಲಿನ ಪಂಚಮಹಲ್ ಪೇಟೆಯಲ್ಲಿ ಲೇಡಿಸ್ ಉಡುಪಿನ ಟೈಲರ್ ಆಗಿದ್ದ ಮೂಲ್ಕಿ ರಾಮ ದೇವಾಡಿಗ (84) ಅವರು ಆ 24 ರಂದು ಮೂಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿರುವ ಸ್ವಗ್ರಹದಲ್ಲಿ ನಿಧನ ಹೊಂದಿದರು ಅವರು ಅವಿವಾಹಿತರಾಗಿದ್ದರು.
ಉತ್ತಮ ಸಾಂಪ್ರದಾಯಿಕ ಟೈಲರ್ ಎಂದೇ ಗುರುತಿಸಿದ್ದ ಇವರ ಹೊಲಿಗೆಯನ್ನು ಮೆಚ್ಚದ್ದ ಅಪಾರ ಸಂಖ್ಯೆಯ ದೂರದೂರಿನ ಗ್ರಾಹಕರು ಇತ್ತೀಚೆಗಿನವರೆಗೂ ಇವರಿಂದಲೇ ಉಡುಪುಗಳನ್ನು ಹೊಲಿಸಿ ಅಂಚೆ ಮೂಲಕ ತರಸಿಕೊಳ್ಳುತ್ತಿದ್ದರು. ವಿಜಯ ಕಾಲೇಜಿನ ವಿದ್ಯಾರ್ಥಿನಿಯರು ಶಿಕ್ಷಣ ಮುಗಿಸಿ ಹುಟ್ಟೂರಿಗೆ ಹೋದರೂ ಇವರಿಂದಲೇ ಉಡುಪು ಹೊಲಿಸುತ್ತಿದ್ದರು.
ಇವರನ್ನು ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮಾನಿಸಲಾಗಿತ್ತು.