ಉಪ್ಪುಂದ: ದೇವಾಡಿಗ ಸಮಾಜ ಭಾಂಧವರಿಂದ ವಿಧ್ಯಾರ್ಥಿ ವೇತನ, ಸನ್ಮಾನ ಹಾಗೂ ವಾರ್ಷಿಕ ಮಹಾಸಭೆ

ಉಪ್ಪುಂದ : ದೇವಾಡಿಗ ಸಂಘ(ರಿ) ಉಪ್ಪುಂದ ಇದರ ವಾರ್ಷಿಕ ಮಹಾಸಭೆ ಸಾಮೂಹಿಕ ಸತ್ಯನಾರಾಯಣ ಪೂಜೆಯೊಂದಿಗೆ ಇಲ್ಲಿನ ಮಾತ್ರಶ್ರೀ ಸಭಾಭವನ ದಲ್ಲಿ ಆದಿತ್ಯವಾರ ದಿನಾಂಕ 26-08-2019 ಮಧ್ಯಾನ್ಹ ನೆರವೇರಿತು. 

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬಿ ಮಂಜು ದೇವಾಡಿಗರವರು  ವಹಿಸಿದ್ದರು. ವೇದಿಕೆಯಲ್ಲಿ ಅಣ್ಣಯ್ಯ ಶೇರಿಗಾರ್, ವಾಮನ ಮರೋಳಿ, ಸುರೇಶ್ ದೇವಾಡಿಗ ಪಡುಕೋಣೆ, ಹಿರಿಯಡ್ಕ ಮೋಹನದಾಸ್, ಗೌ.ಅದ್ಯಕ್ಷ ಉಪ್ಪುಂದ ಜನಾರ್ಧನ ದೇವಾಡಿಗ, ಗೌರಿ ದೇವಾಡಿಗ, ಮಂಜು ದೇವಾಡಿಗ ಬಿಜೂರು, ಪ್ರಮೀಳಾ ದೇವಾಡಿಗ, ನರಸಿಂಹ  ದೇವಾಡಿಗ ಪೂನಾ ಮೊದಲಾದವರು ಉಪಸ್ಥಿತರಿದ್ದರು.

ಈ  ಸಂಧರ್ಭದಲ್ಲಿ  ಪುಣೆಯ  ಭಾವನಾ ಡ್ಯಾನ್ಸ್ ಸ್ಟುಡಿಯೋದ ಶ್ರೀಮತಿ ಭಾವನಾ ದೇವಾಡಿಗ ಹಾಗೂ ರಾಮ್ ದೇವಾಡಿಗ ಅವರನ್ನೂ ಹಾಗು ರಮೇಶ ದೇವಾಡಿಗ ವಂಡ್ಸಿ, ಅಣ್ಣಯ್ಯ ಶೇರಿಗಾರ ಬಾರ್ಕುರು, ವಾಸುದೇವ ಬೈಂದೂರು, ಕೃಷ್ಣ ದೇವಾಡಿಗ ಪಡುಕೋಣೆ ಯವರನ್ನು ಸನ್ಮಾನಿಸಲಾಯಿತು.

ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

( ಹೆಚ್ಚಿನ ವರದಿ ನಿರೀಕ್ಷೆಯಲ್ಲಿ......)


Share