ದೇವಾಡಿಗ ಸಮಾಜ ಸೇವಾ ಸಂಘ(ರಿ) ಬೆಳ್ಮಣ್ ರಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

ಬೆಳ್ಮಣ್: 24-08-2018 ರಂದು ದೇವಾಡಿಗ ಸಮಾಜ ಸೇವಾ ಸಂಘ(ರಿ) ಬೆಳ್ಮಣ್ ರಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಧಾರ್ಮಿಕ ಕಾರ್ಯಕ್ರಮಗಳು ಇತಿಹಾಸ ಪ್ರಸಿಧ್ದ ಶ್ರೀ ಲಕ್ಷ್ಮೀ ಜನಾರ್ದನ ದೇವಾಲಯ ನಂದಳಿಕೆಯಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಪ್ರಾರಂಭಗೊಂಡು ಮದ್ಯಾಹ್ನ 12.30 ರವರೆಗೆ ನೆರವೇರಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜದ ಮುನ್ನೂರು ಮಂದಿ ಮಹಿಳೆಯರು ಪಾಲ್ಗೊಂಡರು ಹಾಗೆಯೇ ಅವರು ವೃತಾದಾರಿಗಳಗಿ ಆಗಮಿಸಿ ತಮ್ಮ ತಮ್ಮ ಕುಟುಂಬ ಸಂಸಾರದ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ದೇವಾಲಯದ ಅರ್ಚಕರಾದ ಶ್ರೀ ಮದುಸೂದನ ಭಟ್ ರವರು ಭಕ್ತಾಭಿಮಾನಿಗಳ ಇಚ್ಚೆಯಂತೆ ಸಕಲ ಪೂಜಾಕರ್ಯಕ್ರಮಗಳನ್ನು ನೆರವೇರಿಸಿ ಕೊಟ್ಟರು.

ಮಹಿಳಾ ವಿಭಾಗದ ಅದ್ಯಕ್ಷೆಯಾದ ಶ್ರಿಮತಿ ಶುಭ ಗಣೇಶ್ ದೇವಾಡಿಗರು ಈ ಪೂಜಾ ಕಾರ್ಯದ ಉಸ್ತುವಾರಿಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಅದ್ಯಕ್ಷರಾದ ಶ್ರೀ ಕರುಣಾಕರ ದೇವಾಡಿಗ, ಗೌರವಾದ್ಯಕ್ಷರಾದ ಶ್ರೀ ಸೂಡ ಚಂದಪ್ಪ ದೇವಾದಿಗ, ಕಾರ್ಯದರ್ಶಿ ಯಶೋದ ದೇವಾಡಿಗ ನಂದಳಿಕೆ, ಕಟ್ಟದ ಸಮಿತಿಯ ಅದ್ಯಕ್ಷರಾದ ಶ್ರಿ ಶ್ರೀಧರ್ ದೇವಾಡಿಗ ಬೆಳ್ಮಣ್ ಹಾಗೂ ಇತರ ಪದಾದಿಕಾರಿಗಳು ಭಾಗವಹಿಸಿದ್ದರು.

ಪೂಜಾ ಕಾರ್ಯಕ್ರಮಗಳು ಮುಗಿದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.

~ ಚಿತ್ರ ವರದಿ: ವಸಂತ್ ಕುಮಾರ್ ನಿಟ್ಟೆ, ಸ್ಥಾಪಕ ಅದ್ಯಕ್ಷರು.


Share