ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಸಿಟಿ ವಲಯದ  ಸಾಮೂಹಿಕ  ವರಲಕ್ಷ್ಮಿಪೂಜೆ

ಮುಂಬೈ: ದೇವಾಡಿಗ ಸಂಘ ಮುಂಬೈ ಇದರ ಪ್ರಾದೇಶಿಕ ಸಮನ್ವಯ ಸಮಿತಿ  ಸಿಟಿ  ವಲಯದ ಮಹಿಳಾ ವಿಭಾಗದವರಿಂದ ಸಾಮೂಹಿಕ  ವರಲಕ್ಷ್ಮಿ ಮಹಾಪೂಜೆಯು ಆಗಸ್ಟ್ 17ರಂದು ದೇವಾಡಿಗ ಸೆಂಟರ್, ದಾದರ್ ನಲ್ಲಿ ಜರಗಿತು.

ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಗೀತ ಎಲ್ ದೇವಾಡಿಗ ಮತ್ತು ಕಾರ್ಯದರ್ಶಿ ಶ್ರೀಮತಿ ಸುಜಯ ವಿ ದೇವಾಡಿಗ ಇವರ ಉಸ್ತುವಾರಿಯಲ್ಲಿ ನಡೆಯಿತು. ಪೂಜೆಯು ಸಾಯಂಕಾಲ 5 ಗಂಟೆಗೆ ಭಜನೆಯೊಂದಿಗೆ ಪ್ರಾರಂಭವಾಯಿತು

ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಈ ವರಲಕ್ಷ್ಮಿ ಮಹಾಪೂಜೆಗೆ ಎಲ್ಲ ಪ್ರಾದೇಶಿಕ ಸಮನ್ವಯ ಸಮಿತಿಯ 90 ಸುಮಂಗಲೆಯರು ಸೇರಿ 120ಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿದರು. ಎಲ್ಲ ಸುಮಂಗಲೆಯರು ಶೃದ್ಧಾ ಭಕ್ತಿಯಿಂದ ಪೂಜೆಯಲ್ಲಿ ಭಾಗವಹಿಸಿದರಲ್ಲದೆ; ಭಜನಾ ಕಾರ್ಯಕ್ರಮದಲ್ಲೂ ಪಾಲ್ಗೊಂಡರು. ತದನಂತರ ಆಗಮಿಸಿದ ಎಲ್ಲ ಸುಮಂಗಲೆಯರಿಗೆ ಸಾಂಪ್ರದಾಯಿಕವಾಗಿ ವಸ್ತ್ರ, ಬಳೆ ಮತ್ತು ಪ್ರಸಾದವನ್ನು ವಿತರಿಸಲಾಯಿತು.

ಪೂಜೆಯ ಕೊನೆಯಲ್ಲಿ ಲಡ್ಡು ಪ್ರಸಾದ ಮತ್ತು ಅನ್ನ ಪ್ರಸಾದದ ವ್ಯವಸ್ತೆಯನ್ನು ಮಾಡಲಾಗಿತ್ತು. ಅನ್ನ ಪ್ರಸಾದವನ್ನು ಶ್ರೀಮತಿ ಸುಜಯ ವಿ ದೇವಾಡಿಗ ಮತ್ತು ಲಡ್ಡು ಪ್ರಸಾದವನ್ನು ಸಿಟಿ  ಪ್ರಾದೇಶಿಕ ವಲಯದ ಯುವ ವಿಭಾಗ ಮತ್ತೆ ಕುಡಿಯುವ ನೀರಿನ ವ್ಯವಸ್ತೆಯನ್ನು ವಲಯದ ಮಾಜಿ ಕಾರ್ಯಾದ್ಯಕ್ಷರಾದ ಶ್ರೀ ಶ್ರೀಧರ್ ಶೇರಿಗಾರ್ ಮಾಡಿದರು.

ನವ ದಂಪತಿಯಾದ ಶ್ರೀ ದೀಕ್ಷಿತ್ ದೇವಾಡಿಗ ಮತ್ತು ವಿಜಯಶ್ರೀ ದೇವಾಡಿಗರಿಂದ ಪೂಜೆ ನೆರವೇರಿತು.  ಹಿರಿಯ ಮುತೈದೆ ದೇವಾಡಿಗ ಸಂಘದ ಗೌ. ಜತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿ ಯನ್ನು ಸನ್ಮಾನಿಸಲಾಯಿತು.

ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ ಮಾಜಿ ಅಧ್ಯಕ್ಷರಾದ ಶ್ರೀ ಗೋಪಾಲ್ ಮೊಯಿಲಿ,   ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ  ಜೆ ಮೊಯಿಲಿ, ಸಿಟಿ ವಲಯದ ಕಾರ್ಯಾದ್ಯಕ್ಷ ಶ್ರೀ ಹೇಮನಾಥ್ ದೇವಾಡಿಗ, ಉಪಾಧ್ಯಕ್ಷ ಶ್ರೀ ಬಾಲಚಂದ್ರ ದೇವಾಡಿಗ, ಮಾಜಿ ಅಧ್ಯಕ್ಷ ಶ್ರೀ ಶ್ರೀಧರ್ ಶೇರಿಗಾರ್, ಮಹಿಳಾ ಉಪಕಾರ್ಯಾದ್ಯಕ್ಷೆ ಶ್ರೀಮತಿ ಲತಾ ವಿ ಮೊಯಿಲಿ,  ಸಲಹೆಗಾರರಾದ ಶ್ರೀಮತಿ ರಂಜಿನಿ ಮೊಯಿಲಿ, ಸುರೇಖಾ ದೇವಾಡಿಗ, ಮತ್ತು ಯುವ ವಿಭಾಗದ ಅಧ್ಯಕ್ಷ  ಶ್ರೀ ನಿತೀಶ್ ದೇವಾಡಿಗ, ಕಾರ್ಯದರ್ಶಿ ಕುಮಾರಿ ದೀಕ್ಷಾ ದೇವಾಡಿಗ ಹಾಗೂ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಮೊಯಿಲಿ, ಎಲ್ಲ ಸಮನ್ವಯ ಸಮಿತಿಯ ಸಧ್ಯಸರು ಉಪಸ್ಥಿತರಿದ್ದರು.

ಶ್ರೀಮತಿ ಸುಜಯ ವಿ ದೇವಾಡಿಗರ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಖ್ತಾಯವಾಯಿತು


Share