ಬೈಂದೂರಿನ ಜನಪ್ರಿಯ ರಂಗ ತಾರೆ ಗಿರೀಶ್ ಬೈಂದೂರು

ಬೈಂದೂರು:  ಬಿಜೂರಿನವರಾದ ತಂದೆ ಫಾರೆಸ್ಟರ್ ಸುಬ್ಬಯ್ಯ ಹಾಗೂ ಬೈಂದೂರಿನ ತಾಯಿ ಚಂದ್ರಾವತಿ ಇವರ ಎರಡನೇ ಪುತ್ರ ಗಿರೀಶ್ ಗೆ ಬಾಲ್ಯದಿಂದಲೇ ನಾಟಕದ ಗೀಳು. ಪಶ್ಚಿಮ ಘಟ್ಟದ ತಪ್ಪಲ ಪಟ್ಟಣಗಳಲ್ಲಿ ಫಾರೆಸ್ಟರ್ ಮನೆಯಲ್ಲಿ ಬೆಳೆದ ಇವರು ಕಾರ್ಕಳ ಭುವನೇಂದ್ರ ಕಾಲೇಜ್ ನಲ್ಲಿ ತನ್ನ ವ್ಯಾಸಂಗ ಮುಗಿಸಿ, ತಂದೆ ನಿವೃತಿ ಬಳಿಕ ಬೈಂದೂರು ಅಜ್ಜಿಯ ಮನೆಯಲ್ಲಿ ವಾಸ್ತವ್ಯ ಮಾಡಿ ತಮ್ಮ ತಾರುಣ್ಯದಲ್ಲಿ ತಮ್ಮ ಸ್ನೇಹ ಹಾಗೂ ಸಹಾಯಕ ಮನೋಭವಾನೆಯಿಂದ ಅಪಾರ ಸ್ನೇಹಿತರಿಗೆ ’ಗಿರೀಶಣ್ಣ" ಎಂದೇ ಪ್ರಸಿದ್ಧರಾದರು. ಅದೇ ಊರಿನ ಅರುಣ ರಾಯ್ಸ್ ಅವರನ್ನು ಪ್ರೀತಿಸಿ ಮದುವೆ ಆದ ಇವರಿಗೆ ಎರಡು ಮಕ್ಕಳಿದ್ದಾರೆ. (ಪ್ರತೀಕ್  ಮತ್ತು ಸಂಜನಾ )

 ಬೈಂದೂರಿನಲ್ಲಿ ಮೊದಲಿನಿಂದಲೂ ಯಕ್ಷಗಾನದಕ್ಕಿಂತ ಹೆಚ್ಚಾಗಿ ನಾಟಕದ ವಾತವರಣ. ಮನೆಯಲ್ಲಿ ನಾಟಕದ ವಾತಾವರಣ ಮಾವ ಮಾಧವರಾವ್ ಮತ್ತು ಅಣ್ಣ ಉಮೇಶ್ ಕುಮಾರ್ ನಾಟಕದಲ್ಲಿ ತೊಡಗಿಸಿಕೊಂಡಿದ್ದರು.

ವಿರಾಗನಂದ ಆಶ್ರಮದ ವಾರ್ಷಿಕ ಭಜನಾ ಕಾರ್ಯಕ್ರಮದಲ್ಲಿ ನಡೆದ ವಿವೇಕಾನಂದ ನಾಟಕದಲ್ಲಿ ಬಾಲ ನರೇಂದ್ರನಾಗಿ ಚೊಚ್ಚಲ ರಂಗ ಪ್ರದರ್ಶನ. ನಂತರ ಶಾಲಾ-ಕಾಲೇಜು ದಿನಗಳಲ್ಲಿ ನಾಟಕದಲ್ಲಿ ಭಾಗವಹಿಸುವಿಕೆ. ಲಾವಣ್ಯದ ನಾಟಕಗಳ ತಾಲೀಮಿನ ವೀಕ್ಷಣೆ. 84ರಲ್ಲಿ ಲಾವಣ್ಯಕ್ಕೆ ಪ್ರವೇಶ..ಪ್ರಾರಂಭದಲ್ಲಿ ಖಳನಟ, ಚಿಕ್ಕಪುಟ್ಟ ಪಾತ್ರದಲ್ಲಿ ಅಭಿನಯ. ಖ್ಯಾತ ರಂಗನಿರ್ದೇಶಕ ಜಿ.ಸೀತಾರಾಮ ಶೆಟ್ಟಿ ಕೂರಾಡಿ ನಿರ್ದೇಶನದ ನಾಯೀಕತೆ ಮತ್ತು ಬೇಲಿ ಮತ್ತು ಹೊಲದಲ್ಲಿ ಪ್ರಮುಖ ಪಾತ್ರ. ನಾಯೀಕತೆಯ 'ಸೋಮಣ್ಣ', ಬೇಲಿ ಮತ್ತು ಹೊಲದ ಪೋತುರಾಜು ಪಾತ್ರಕ್ಕೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿರುತ್ತದೆ ಹಾಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ನಟನೆಯಲ್ಲದೇ ನಿರ್ದೇಶನದಲ್ಲಿ ಸಿದ್ದಹಸ್ತರು. ಇವರ ನಿರ್ಧೇಶನದಲ್ಲಿ ಗಾಂಧಿಗೆ ಸಾವಿಲ್ಲ, ಮುದ್ದಣನ ಪ್ರಮೋಷನ್ ಪ್ರಸಂಗ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪಾರಿತೋಷಕ ತನ್ನದಾಗಿಸಿಕೊಂಡಿದೆ.

ಸಂಘಟನಾ ಚತುರ ಗಿರೀಶ ಬೈಂದೂರು

ನಾಟಕ ಸಂಸ್ಥೆ, ಕ್ರೀಡಾಸಂಸ್ಥೆ, ಧಾರ್ಮಿಕ & ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾಸಂಸ್ಥೆಗಳಲ್ಲಿ..ಎಲ್ಲರನ್ನು ಒಗ್ಗೂಡಿಸುವ ಚಾಕಚಾಕ್ಯತೆ ಮಹತ್ತರವಾದದ್ದು...ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢಿಕರಿಸಿ..ರಚನಾತ್ಮಕವಾಗಿ ಸಂಘಟಿಸಿದ್ದಾರೆ...ಲಾವಣ್ಯದ ಯಶಸ್ಸಿನಲ್ಲಿ ಅಪಾರ ಕೊಡುಗೆ ಇವರದ್ದು.

ವೃತ್ತಿಯಲ್ಲಿ ಉದ್ಯಮಿಯಾಗಿ, ಪತ್ರಕರ್ತನಾಗಿ ಪತ್ರಿಕೆಯನ್ನು ನಡೆಸಿರುತ್ತಾರೆ...ಈವಾಗ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಂತರಾಷ್ಟ್ರೀಯ, ದೇಶಿಯ ಪ್ರಶಸ್ತಿ ಸಿನಿಮಾದಲ್ಲಿ ಅಭಿನಯಿಸಿರುತ್ತಾರೆ..ವಿಷತ್ ಬರ್ಸಾ, ವೈಟ್, ಕುರುನಾಡು, ಹಜ್, ಒನ್ಲಿ ಶ್ರೀ ಕೃಷ್ಣ, ಪ್ರಮುಖ ಚಿತ್ರಗಳು, ಭಗೀರಥ ಪ್ರಮುಖ ಧಾರವಾಹಿ.

ನೇರನಡೆ ನುಡಿ, ಅಜಾನುಬಾಹು, ಗಜಾಗಾತ್ರದ ಗಾಂಭೀರ್ಯ, ಅವರ ಮುಖದ ನಗು ಮುಗ್ಧವಾದದ್ದು ಆಂತರ್ಯದಲ್ಲಿ ಸೃಹೃದಯಿ ಗುಣ ಸಂಪನ್ನಶೀಲ. ಸೃಜನಶೀಲರನ್ನು ಸದಾ ಪೋತ್ಸಾಹಿಸುವ ಗುಣ.ನಿರಂತರವಾಗಿ ತನ್ನಲ್ಲಾ ಚಟುವಟಿಕೆಗಳಲ್ಲಿ ಹಸನ್ಮುಖಿಯಾಗಿ ತೊಡಗಿಸಿಕೊಂಡು ಯುವಕರಿಗೆ ಮಾರ್ಗದರ್ಶನ ನೀಡಲಿ.

(ಬರಹ - ಶಶಿಧರ್ ಬೈಂದೂರು, facebook)

ಫ಼ೆಬ್ರವರಿ ೧,೨ ಹಾಗು ೩ ರ೦ದು ನಮ್ಮ "ಲಾವಣ್ಯ" ದ ವಾರ್ಶಿಕೋತ್ಸವದ ಸಲುವಾಗಿ ಮೂರು ದಿನಗಳ ಕಾಲ ನಾಟಕೋತ್ಸವ ಏರ್ಪಾಡಾಗಿತ್ತು. ಪ್ರಥಮ ದಿನ ಬೆ೦ಗಳೂರಿನ ತ೦ಡದಿ೦ದ "ರಬ್ಡಿ" ಎ೦ಬ ನಾಟಕ.ಮು೦ದಿನ ಎರಡು ದಿನ ನಮ್ಮದೇ "ಲಾವಣ್ಯ"ದ "ಏಕಲವ್ಯ" ಹಾಗೂ "ಮರಣ ಮ್ರದ೦ಗ" ನಾಟಕ ಪ್ರದರ್ಶನ. "ರಬ್ಡಿ" ಬಾಡಿಗೆ ತಾಯಿಯ ಕಥಾ ವಸ್ತುವನ್ನು ಹೊ೦ದಿದ ನಾಟಕ.ಪ್ರಮುಖ ಪಾತ್ರಧಾರಿ ಸಾವ೦ತ್ರಿ ಯ ಅದ್ಭುತ ಅಭಿನಯ ಹಾಗೂ ಉಳಿದೆಲ್ಲಾ ಕಲಾವಿದರ ಉತ್ತಮ ಅಭಿನಯದೊ೦ದಿಗೆ ನಾಟಕವು ಬೈ೦ದೂರಿನ ಪ್ರೇಕ್ಶಕರ ಮೆಚ್ಚುಗೆಗೆ ಪಾತ್ರವಾಯ್ತು. ದ್ವಿತೀಯ ದಿನ ಸುರೇಶ್ ಆನಗಳ್ಳಿ ನಿರ್ದೇಶನದ "ಏಕಲವ್ಯ" ಸುಮಾರು ೧೨ ವರ್ಶಗಳ ಹಿ೦ದೆ ನಮ್ಮದೇ ತ೦ಡದಿ೦ದ ನಟಿಸಲ್ಪಟ್ಟ ನಾಟಕ. ಇದು ಈ ಭಾರಿಯ ದ್ವಿತೀಯ ಪ್ರಯೋಗ. ಈ ನಾಟಕದ ಪ್ರತೀ ಪಾತ್ರಧಾರಿಯೂ ಜೀವತು೦ಬಿ ಅಭಿನಯಿಸಿದರೆ ಇದೊ೦ದು ಅದ್ಭುತ ನಾಟಕವಾಗುತ್ತದೆ. ರಿಹರ್ಸಲ್ ಕೊರತೆ ಮತ್ತು ಪಾತ್ರಧಾರಿಗಳು ಸೀರಿಯಸ್ ಆಗಿ ನಾಟಕದಲ್ಲಿ ತೊಡಗಿಸಿಕೊ೦ಡಿರದ ಪ್ರಯುಕ್ತ ನಾಟಕ ಸಾಮಾನ್ಯ ಪ್ರದರ್ಶನ ಕ೦ಡಿತು. ಮೂರನೇ ನಾಟಕ ನಮ್ಮ ಈ ಭಾರಿಯ ಸುಪರ್ ಹಿಟ್ ನಾಟಕ ರಾಜೇ೦ದ್ರ ಕಾರ೦ತರ "ಮರಣ ಮ್ರದ೦ಗ". ಪ್ರಸ್ತುತ ರಾಜಕೀಯ ವ್ಯವಸ್ತೆಯ ಬಗ್ಗೆ ಕೈಗನ್ನಡಿ ಹಿಡಿಯುವ ಈ ನಾಟಕವು ಈಗಾಗಲೇ ಹತ್ತು ಪ್ರದರ್ಶನ ವನ್ನು ಕ೦ಡಿದೆ. ಪ್ರದರ್ಶಿಸಿದ ಕಡೆಯಲ್ಲೆಲ್ಲ ಪ್ರೇಕ್ಶಕರಿ೦ದ ಮುಕ್ತ ಕ೦ಠದಿ೦ದ ಶ್ಲಾಗಿಸಲ್ಪಟ್ಟಿದೆ. ನಾಟಕದ ಪ್ರಧಾನ ಪಾತ್ರಧಾರಿಗಳಾದ ಯೋಗೀಶ್ ಬ೦ಕೇಶ್ವರ ಹಾಗೂ ಗಣೇಶ್ ಕಾರ೦ತರ ಅಭಿನಯವು ಪ್ರೇಕ್ಶಕರನ್ನು ನಾಟಕದಲ್ಲಿ ಲೀನರಾಗುವ೦ತೆ ಮಾಡುತ್ತದೆ. ನಾಟಕದ ಪ್ರತಿಯೊ೦ದು ಪಾತ್ರಧಾರಿಯೂ ಪಾತ್ರದ ಒಳ ಪ್ರವೇಶವನ್ನು ಮಾಡಿದರೆ ಬಹುಶ ಈ ನಾಟಕವು ಭಾರತ ದೇಶದ ಯಾವುದೇ ಭಾಗದಲ್ಲದರೂ ಪ್ರದರ್ಶಿಸಲ್ಪಟ್ಟರೂ ಸುಪರ್ ಹಿಟ್ ಆಗುವುದ೦ತೂ ಖ೦ಡಿತಾ. ಏಕೆ೦ದರೆ ಈ ನಾಟಕದ ಕಥಾವಸ್ತು, ರಾಜಕೀಯ ವಿಡ೦ಬಣೆ, ತೀಕ್ಶ್ಣವಾದ ಸ೦ಭಾಶಣೆ ಹಾಗೂ ಉತ್ತಮವಾದ ಕ್ಲೈಮ್ಯಾಕ್ಸ್ ಈ ನಾಟಕದ ಹೈಲೈಟ್ಸ್. ಪ್ರತೀ ವರ್ಶವು ಹೊಸ ಹೊಸತನದಿ೦ದ ಕೂಡಿದ ನಾಟಕವು "ಲಾವಣ್ಯ"ದಿ೦ದ ಮೂಡಿಬರಲಿ ಎ೦ಬುದೇ ನಮ್ಮ ಹಾರೈಕೆ.( ಗಿರೀಶ ಬೈಂದೂರು; 4 February 2014 facebook )


Share