ದೇವಾಡಿಗ ಕುಟುಂಬಕ್ಕೆ ಬೈಂದೂರು ಶಾಸಕ ಬಿ ಎಮ್ ಸುಕುಮಾರ ಶೆಟ್ಟಿ ಯವರಿಂದ 5 ಲಕ್ಷ ರೂ ಪರಿಹಾರ ಧನ ಪಾವತಿ

ಬೈಂದೂರು: ಪಡುಕೋಣೆ ಹತ್ತಿರದ ನಾಡ ಗುಡ್ಡೆಅಂಗಡಿಯಲ್ಲಿ ಹದಿನೈದು ದಿನಗಳ ಹಿಂದೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮರಣ ಹೊಂದಿದ ಲಕ್ಷ್ಮೀ ದೇವಾಡಿಗ ಅವರ ಮಗಳಾದ ಪ್ರೆಸಿಲ್ಲಾ ದೇವಾಡಿಗ ಅವರಿಗೆ ಪ್ರಕೃತಿ ವಿಕೋಪ ಪರಿಹಾರದಡಿಯಲ್ಲಿ 5 ಲಕ್ಷ ರೂ ಪರಿಹಾರವನ್ನು ಬೈಂದೂರು ಶಾಸಕ ಬಿ ಎಮ್ ಸುಕುಮಾರ ಶೆಟ್ಟಿ ಅವರು ನೀಡಿದರು. 

ಇದೇ ಸಂಧರ್ಭದಲ್ಲಿ ದುಬೈ ಉದ್ಯಮಿ ದಿನೇಶ್ ದೇವಾಡಿಗ ಅವರ ಜೊತೆ ಮಾತನಾಡಿದ ಶಾಸಕರು ಪ್ರೆಸಿಲ್ಲಾ ದೇವಾಡಿಗ ಅವರ ಮುಂದಿನ ವಿದ್ಯಾಭ್ಯಾಸ ನೋಡಿಕೊಳ್ಳುವಂತೆ ವಿನಂತಿಸಿದಾಗ, ಶಾಸಕರ ಕೋರಿಕೆಯ ಮೇರೆಗೆ ಒಪ್ಪಿಕೊಂಡು ಮೊದಲ ಹಂತವಾಗಿ 10,000 ರೂ ನೀಡಿದರು.

ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ್ ಕಿರಣ್ ಗೋರಯ್ಯ, ಅಶೋಕ್ ಶೆಟ್ಟಿ, ದಿನೇಶ್ ದೇವಾಡಿಗ ಅವರ ಸಹೋದರಿ, ರವಿ ದೇವಾಡಿಗ ತಲ್ಲೂರು, ಸತೀಶ್ ನಾಯಕ್, ಶ್ರೀಧರ್ ದೇವಾಡಿಗ, ಉದಯ್ ಜೋಗಿ, ವಿಶ್ವನಾಥ್ ಪಡುಕೋಣೆ, ಪ್ರವೀಣ್ ಪಡುಕೋಣೆ, ಗೋಪಾಲಕೃಷ್ಣ ನಾಡ, ಸಂಜೀವ ದೇವಾಡಿಗ  ಮುಂತಾದವರು ಉಪಸ್ಥಿತರಿದ್ದರು.


Share