ಗಾಳಿ ಮಳೆಗೆ ಅಲೆವೂರು ನಿವಾಸಿ ತೋಗ್ಗು ಸೇರಿಗಾರರ ಮನೆ ಕುಸಿತ; ಇವರ ನೋವಿಗೆ ಸ್ಪಂದಿಸಿ ಸಹಾಯ ನೀಡಿ

ದಿನಾಂಕ. 5/08/2017 ರ ರಾತ್ರಿ 1ಗಂಟೆಯ ಹೊತ್ತಿಗೆ ನಮ್ಮ ಸಮಾಜದ ಕಡು ಬಡವರಾದ ಅಲೆವೂರು ನಿವಾಸಿ ತೋಗ್ಗು ಸೇರಿಗಾರ ರ ಮನೆಯು ಬಾರೀ ಗಾಳಿ ಮಳೆಗೆ  ಕುಸಿದು ಅತೀಹೆಚ್ಚಿನ ನಷ್ಟವಾಗಿದೆ.

ದೇವರ ಅನುಗ್ರಹದಿಂದ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರ ನೋವಿಗೆ ಸ್ಪಂದಿಸಿ ಉಡುಪಿ ದೇವಾಡಿಗರ ಸೇವಾ ಸಂಘದ ವತಿಯಿಂದ ರೂ. 10,000 ನ್ನು ಸಂಘದ  ;ಅಧ್ಯಕ್ಷಾರದ ಶ್ರೀ.ಕೆ ಸೀತಾರಾಮ್ ಮತ್ತು ಪದಾಧಿಕಾರಿಗಳು ಸೇರಿ ದಿನಾಂಕ 07/08/2017ರಂದು ನೆರವನ್ನು ನೀಡಿದರು.

ಈ ಬಗ್ಗೆ ನೆರವು ನೀಡುವ  ಸಮಾಜ ಬಾಂಧವರು ದೇವಾಡಿಗ ಸಂಘ ಉಡುಪಿ ಯನ್ನು ಸಂಪರ್ಕಿಸಿ ಅಥವ  ಕೆಳಗಿನ ಬ್ಯಾಂಕ್ ಅಕೌಂಟಿಗೆ ತಮ್ಮ ದೇಣಿಗೆ ಸಲ್ಲಿಸ ಬೇಕಾಗಿ ವಿನಂತಿ.

A/No: 022900101005749 :  IFSC Code; CORP0000229; Corporation Bank; Thoggu Sherigara; 4-47 nadu Alevoor, Post: Alevoor 574118


Share