ಬಾರ್ಕೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆಗೊಂಡ ದೇವಾಡಿಗ ಸಮಾಜದ ಜನಪ್ರತಿನಿಧಿ ಗಳಿಗೆ ಅಭಿನಂದನೆ-ಸನ್ಮಾನ

ಬಾರ್ಕೂರು: ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಇದರ ವ್ಯವಸ್ಥಾಪನಾ ಸಮಿತಿಯ ಸಭೆಯು ದೇವಸ್ಥಾನ ದ ಆಡಳಿತ ಮಂಡಲಿಯ ಕಚೇರಿ ವಠಾರದಲ್ಲಿ ತಾ. ೨೩-೦೯-೨೦೧೮ ರಂದು ಜರುಗಿತು.

ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ (ರಿ.) ಬಾರ್ಕೂರಿನ ಪರವಾಗಿ ಅಧ್ಯಕ್ಷರು ಮತ್ತು ಆಡಳಿತ ವಿಶ್ವಸ್ಥರಾದ ಬಿ. ಅಣ್ಣಯ್ಯ ಶೇರಿಗಾರ್, ಪುಣೆ; ಪ್ರಧಾನ ಕಾರ್ಯದರ್ಶಿ ಮತ್ತು  ವಿಶ್ವಸ್ಥ ನರಸಿಂಹ ಬಿ. ದೇವಾಡಿಗ ಉಡುಪಿ; ಕೋಶಾಧಿಕಾರಿ ಹಾಗೂ ವಿಶ್ವಸ್ಥ ಬಿ. ಜನಾರ್ಧನ ದೇವಾಡಿಗ ಬಾರ್ಕೂರು; ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಹಾಗೂ ವಿಶ್ವಸ್ಥರಾದ ಧರ್ಮಪಾಲ ಯು ದೇವಾಡಿಗ ಮುಂಬೈ;  ಮುಖ್ಯ ಸಂಚಾಲಕರು ಮತ್ತು ವಿಶ್ವಸ್ಥರಾದ ಹಿರಿಯಡ್ಕ ಮೋಹನ್‍ದಾಸ್ ಮುಂಬೈ; ಡಾ.ಕೆ.ದೇವರಾಜ್ ಮತ್ತು ಗೌರವ ಕಾರ್ಯದರ್ಶಿ ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಗಣೇಶ ದೇವಾಡಿಗ ಉಡುಪಿ ಹಾಗೂ ಇತರರು ಉಪಸ್ಥಿತರಿದ್ದರು.

ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಹಾಗೂ ವಿಶ್ವಸ್ಥರಾದ ಧರ್ಮಪಾಲ ಯು ದೇವಾಡಿಗ ಮುಂಬೈ ಇವರ ಅದ್ಯಕ್ಷತೆಯಲ್ಲಿ ಮುಂದಿನ ಕಾರ್ಯಕ್ರಮಗಳು ಹಾಗೂ ವ್ಯವಸ್ಥಾಪನೆ ಬಗ್ಗೆ ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ನಗರ ಸಭೆ, ಪುರಸಭೆ, ಮತ್ತು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಗೊಂಡ ದೇವಾಡಿಗ ಸಮಾಜದ ಜನಪ್ರತಿನಿಧಿ ಗಳಾದ ಸೀತಾರಮ ದೇವಾಡಿಗ ಕಾರ್ಕಳ, ವಿಜಯ ಕೊಡವೂರು ಉಡುಪಿ, ಚಂದ್ರಶೇಕರ ದೇವಾಡಿಗ ಉಡುಪಿ, ಶೋಭಾ ದೇವಾಡಿಗ ಕಾರ್ಕಳ, ಗಿರೀಶ್ ದೇವಾಡಿಗ ಕುಂದಾಪುರ, ಹರೀಶ್ ಕುಮಾರ್ ಕೆ.ಕಾರ್ಕಳ, ಸಂಜೀವ ದೇವಾಡಿಗ ಕಾರ್ಕಡ ಸಾಲಿಗ್ರಾಮ ಅವರನ್ನು ದೇಗುಲದ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

Please clk the Headline Links to know more about the Elected Representatives:

ಉಡುಪಿ ನಗರ ಸಭೆಗೆ ಚಂದ್ರಶೇಕರ್.ಯು.ಶೇರಿಗಾರ್ ಆಯ್ಕೆ

ಕಾರ್ಕಳ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ಶ್ರೀ ಯೋಗೇಶ್ ದೇವಾಡಿಗ

ಕಾರ್ಕಳ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ಶ್ರೀಮತಿ ಶೋಭಾ ದೇವಾಡಿಗ

ಕಾರ್ಕಳ ಪುರಸಭೆ ಚುನಾವಣೆಯಲ್ಲಿ ಜಯಶೀಲರಾದ ಕಾರ್ಕಳ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್

ಉಡುಪಿ ನಗರಸಭೆಗೆ ಕೌನ್ಸಿಲರ್ ಆಗಿ ಆಯ್ಕೆಯಾದ ವಿಜಯ್ ಕೊಡವೂರು ರಿಗೆ ಅಭಿನಂದನೆ..

ಕುಂದಾಪುರ ಪುರಸಭೆ ಚುನಾವಣೆಯಲ್ಲಿ ಫೋಟೋಗ್ರಾಫರ್ ಗಿರೀಶ್ ದೇವಾಡಿಗ ಗೆಲವು.

ಸಂಜೀವ ದೇವಾಡಿಗ. ಕಾರ್ಕಡ ರಿಗೆ ಅಭಿನಂದನೆ ಹಾಗೂ ಶುಭಾಶಯಗಳು.
 


Share