ಬಹುಮುಖ ಪ್ರತಿಭೆಯ ಪ್ರೊ.ರಾಮಚಂದ್ರ ನೆಲ್ಲಿಕಾರ್ ಇವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ 21 ವರ್ಷಗಳ ಕಾಲ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕನಾಗಿ, ಪ್ರಸ್ತುತ  5 ವರ್ಷದಿಂದ ಕೆ.ಎಂ.ಇ.ಎಸ್  ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸ್ತುತ್ತಿರುವ ಶ್ರೀ ರಾಮಚಂದ್ರ ನೆಲ್ಲಿಕಾರ್ ರವರಿಗೆ ಇತ್ತೀಚೆಗೆ ಆದರ್ಶ ಆಸ್ಪತ್ರೆಯಲ್ಲಿ ನಡೆದ ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನೆಲ್ಲಿಕಾರ್ನಲ್ಲಿ ದಿ.ಅಣ್ಣು ದೇವಾಡಿಗ ಹಾಗೂ ಸುನಂದರವರಿಗೆ 22-06-1969 ರಲ್ಲಿ ಜನಿಸಿದ ಶ್ರೀಯುತರು ಪ್ರಾಥಮಿಕ ಶಿಕ್ಷಣವನ್ನು ನೆಲ್ಲಿಕಾರ್ ನಲ್ಲಿ ಮುಗಿಸಿ ಧವಳಾ ಕಾಲೇಜು ಮೂಡಬಿದಿರೆಯಲ್ಲಿ ಪದವಿ ಪಡೆದು ಶಿಕ್ಷಕರಾಗ ಬೇಕೆಂಬ ಛಲದಿಂದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜ್ ನಲ್ಲಿ ಬಿ.ಎಡ್ ಪದವಿಯನ್ನು ಪಡೆದು ಮುಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಇತಿಹಾಸ ಮತ್ತು ಇಂಗ್ಲೀಷ್ ನಲ್ಲಿ ಎಂ.ಎ ಪದವಿ ಗಳಿಸಿ ಆದರ್ಶ ಶಿಕ್ಷಕನಾಗಿ ಹೆಸರುಗಳಿಸಿದ್ದಾರೆ.

ವಿದ್ಯಾರ್ಥಿ ಜೀವನದಲ್ಲೇ ಬಹಳ ಕ್ರಿಯಾತ್ಮಕ ಹಾಗೂ ಕಾರ್ಯಶೀಲರಾಗಿದ್ದ ರಾಮಚಂದ್ರರವರು 1990-1991 ರಲ್ಲಿ ಧವಳಾ ಕಾಲೇಜು ಮೂಡಬಿದಿರೆ ಇದರ ವಿದ್ಯಾರ್ಥಿನಾಯಕರಾಗಿ ನೆಲ್ಲಿಕಾರ್ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ನೆಲ್ಲಿಕಾರ್ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿಸಂಘದ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿ; ನಾರಾವಿ ಮತ್ತು ಕಾರ್ಕಳ ದೇವಾಡಿಗ ಸಂಘದಪ್ರದಾನ ಕಾರ್ಯದರ್ಶಿಯಾಗಿ ಜೆಸಿಐ ಕಾರ್ಕಳದ ಉಪಾಧ್ಯಕ್ಷರಾಗಿ/ಕಾರ್ಯದರ್ಶಿ; ರಂಗಸಂಸ್ಕøತಿ ಕಾರ್ಕಳದ ಜತೆ ಕಾರ್ಯದರ್ಶಿ; ಉಡುಪಿ ಜಿಲ್ಲಾ ಪ್ರಾಂಶುಪಾಲ ಸಂಘದ ಕಾರ್ಯಕಾರಿ ಸಮಿತಿಯ ಪ್ರಸ್ತುತ ಸದಸ್ಯರಾಗಿ ಸೇವೆ ಸಲ್ಲಿಸಿ ನಾಯಕತ್ವ ಗುಣಸಂಪನ್ನರಾಗಿದ್ದಾರೆ.  

ಶ್ರೀಯುತರು ಕಲಾವಿದನಾಗಿ ಸುಮಾರು 450ಕ್ಕು ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಮತ್ತು 8 ತುಳು ನಾಟಕಗಳನ್ನು ರಚಿಸಿದ್ದಾರೆ.                 

                    

ಶ್ರೀ.ರಾಮಚಂದ್ರ ನೆಲ್ಲಿಕಾರ್ ರವರು  ಭಾಷಣಕಾರನಾಗಿ ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ವಿವಿಧ  ವಿಷಯಗಳ ಬಗ್ಗೆ 3000ಕ್ಕಿಂತ ಹೆಚ್ಚು ಭಾಷಣ,500ಕ್ಕಿಂತ ಹೆಚ್ಚು ಕಡೆ ಧಾರ್ಮಿಕ ಪ್ರವಚನ, 250ಕ್ಕಿಂತ ಹೆಚ್ಚು ಎನ್.ಎಸ್.ಎಸ್ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಮೂರು ಬಾರಿ ರಾಜ್ಯಮಟ್ಟದ ಎನ್.ಎಸ್.ಎಸ್ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ, 75ಕ್ಕಿಂತ ಹೆಚ್ಚು ಮಧ್ಯವರ್ಜನ ಶಿಬಿರದಲ್ಲಿ ತರಬೇತಿ ನೆಡಿಸಿ ತಮ್ಮ ಬಹುಮುಖ ಪ್ರತಿಭೆಯಿಂದ ಪ್ರಸಿದ್ದರಾಗಿದ್ದಾರೆ.

ಇವರಿಗೆ ದೇವಾಡಿಗ.ಕಾಮ್ ಓದುಗಾರರು, ಆತ್ಮೀಯರು ಹಾಗೂ ಅಸಂಖ್ಯಾತ ಅಭಿಮಾನಿಗಳ ಪರವಾಗಿ ಅಭಿನಂದನೆ ಸಲ್ಲಿಸಿ ಶುಭ ಹಾರೈಕೆ ಸಲ್ಲಿಸುತ್ತೇವೆ.  


Share