ದೇವಾಡಿಗ ಸಮಾಜ ಸೇವಾ ಸಂಘ ರಿ ತಲ್ಲೂರು: ರಕ್ತದಾನ ಶಿಬಿರ (ಸಚಿತ್ರ ವರದಿ)

ತಲ್ಲೂರು: ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕುಂದಾಪುರ ಹಾಗೂ ದೇವಾಡಿಗ ಸಮಾಜ ಸೇವಾ ಸಂಘ ರಿ ತಲ್ಲೂರು, ಸಪ್ತಸ್ವರ ಸಹಕಾರಿ ಸಂಘ ತಲ್ಲೂರು ಹಾಗೂ ರಕ್ತ ದಾನಿಗಳ ಸಹಕಾರ ದೊಂದಿಗೆ ರಕ್ತದಾನ ಶಿಬಿರವು ಜಯದುರ್ಗಾ ಮಾತಾ ಸಭಾಭವನದಲ್ಲಿ ನೆಡೆಯಿತು. ಕಾರ್ಯಕ್ರಮವನ್ನು ರಕ್ತನಿಧಿ ಅಧ್ಯಕ್ಷರಾದ ಎಸ್ ಜಯಕರ ಶೆಟ್ಟಿ ಉದ್ಘಾಟಿಸಿದರು.

ಅಧ್ಯಕ್ಷತೆ ಯನ್ನು ತಲ್ಲೂರು ದೇವಾಡಿಗ ಸಂಘದ ಅಧ್ಯಕ್ಷರಾದ ಬಸವ ದೇವಾಡಿಗ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ತ್ರಾಸಿ, ಸಪ್ತಸ್ವರ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ, ಗಂಗೊಳ್ಳಿ ಸಂಘದ ಅಧ್ಯಕ್ಷರಾದ ಶಂಕರ ದೇವಾಡಿಗ, ಗ್ರಾಮಕರಣಿಕರಾದ ರಾಘವೇಂದ್ರ ದೇವಾಡಿಗ, ದೇವಾಡಿಗ ಸಂಘ ಹೆಮ್ಮಾಡಿಯ ಕಾರ್ಯದರ್ಶಿಯಾದ ಮಂಜು ದೇವಾಡಿಗ , ನಾಗೂರು ದೇವಾಡಿಗ ಸಂಘದ ಕಾರ್ಯದರ್ಶಿಯಾದ ದಿನೇಶ್ ದೇವಾಡಿಗ, ರಕ್ತನಿಧಿ ಕಾರ್ಯದರ್ಶಿಯಾದ ವೈ ಸೀತಾರಾಮ ಶೆಟ್ಟಿ, ಖಚಾಂಚಿ ಶಿವರಾಮ ಶೆಟ್ಟಿ, ವೈದ್ಯಕೀಯ ಅಧಿಕಾರಿಯಾದ ಎಚ್ ಎಸ್ ಮಲ್ಲಿ, ಸದಾನಂದ ಶೆಟ್ಟಿ, ನಾರಾಯಣ ದೇವಾಡಿಗ ಕುಂದಾಪುರ ಮೊದಲಾವರು ಉಪಸ್ಥಿತರಿದ್ದರು.

ರವಿ ದೇವಾಡಿಗ ಉಪ್ಪಿನಕುದ್ರು ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿಯಾದ ಮಹೇಶ್ ಹಟ್ಟಿಯಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಪುರುಷೋತ್ತಮ ದಾಸ್ ಉಪ್ಪುಂದ ವಂದಿಸಿದರು.


Share