ಜಗದೀಶ್ ದೇವಾಡಿಗ ಮೇಲ್ಮನೆ ಉಪ್ಪುಂದ ಇವರಿಂದ ಶಾಲಾ ಮಕ್ಕಳಿಗೆ ಗುರುತಿನ ಕಾರ್ಡ್ ವಿತರಣೆ

ಉಪ್ಪುಂದ: ದಿನಾಂಕ 03/10/2018 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಥಬೀದಿ ಉಪ್ಪುಂದ ಇದರ ಹಳೆಯ ವಿದ್ಯಾರ್ಥಿಯಾದ ಜಗದೀಶ್ ದೇವಾಡಿಗ ಮೇಲ್ಮನೆ ಉಪ್ಪುಂದ ಇವರಿಂದ ಶಾಲಾ ಮಕ್ಕಳಿಗೆ ( Identity card) ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ನಡೆಯಿತು.

ಪ್ರೇಮಾ ದೇವಾಡಿಗ - SDMC ಅಧ್ಯಕ್ಷರು, ಮಂಜುನಾಥ ಎಲ್ , ಶಾಲಾ ಮುಖ್ಯೋಪಾಧ್ಯಾಯರು; ಶಾಲಾ ಸಿಬ್ಬಂದಿಗಳಾದ ಸಾವಿತ್ರಿ, ಸುಜಾತ.ಎಸ್, ರೇಷ್ಮಾ.ಆರ್, ಪಲ್ಲವಿ ಮತ್ತು ಉಪ್ಪುಂದ ಪಂಚಾಯತ್ ನ ಸದಸ್ಯರಾದ ನಾಗರಾಜ್ ಶೇಟ್ ಉಪಸ್ಥಿತರಿದ್ದರು.


Share