ಉಡುಪಿ; ವಿವಿಧ ಸಂಘಟನೆಗಳ ಸಹಕಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಉಡುಪಿ:  ಮೋಗವೀರ ಯುವ ಸಂಘಟನೆ (ರಿ)ಉಡುಪಿ, ಬೆಳ್ಳಂಪಳ್ಳಿ ಘಟಕ, ಡಾ.ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ (ರಿ) ಉಡುಪಿ, ದೇವಾಡಿಗರ ಸಂಘ (ರಿ) ಚಿಟ್ಪಾಡಿ ಉಡುಪಿ, ದೇವಾಡಿಗರ ಯುವ ಸಂಘಟನೆ ಉಡುಪಿ, ಕರಾವಳಿ ಯೂತ್ ಫ್ರೆಂಡ್ಸ್ ಉಡುಪಿ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ತಾ._28.05.2017ರಂದು ಆದಿತ್ಯವಾರ ದೇವಡಿಗರ ಸಭಾಭವನ ಚಿಟ್ಪಾಡಿ ಯಲ್ಲಿ ಜರುಗಿತು.
ಈ  ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ನೇರವೇರಿಸಿದರು. ಅದ್ಯಕ್ಹತೆಯನ್ನು ಸೀತರಾಮ..ಕೆ ದೇವಾಡಿಗ,  ಅದ್ಯಕ್ಹರು ದೇವಾಡಿಗರ ಸಂಘ (ರಿ)ಚಿಟ್ಪಾಡಿ ಉಡುಪಿ ಇವರು ವಹಿಸಿದ್ದರು . ಮುಖ್ಯ ಅತಿಥಿಯಾಗಿ ಮೋಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾದ್ಯಕ್ಹ ಜಯ. ಸಿ. ಕೋಟ್ಯಾನ್, ಮೊಗವೀರ ಜಿಲ್ಲಾ ಯುವ ಸಂಘಟನೆಯ ಉಪಾದ್ಯಕ್ಹ ವಿನಯ್ ಕರ್ಕೇರಾ, ಬೆಳ್ಳಂಪಳ್ಳಿ ಘಟಕ ಅದ್ಯಕ್ಷ ರವೀಂದ್ರ ಪುತ್ರನ್, ರಕ್ತದ ಅಪತ್ಭಾಂದವ ಖ್ಯಾತಿಯ ಸತೀಶ್ ಸಾಲಿಯಾನ್ ಮಣಿಪಾಲ್ ಮತ್ತಿತರರು ಉಪಸ್ಥಿತರಿದ್ದರು.


Share