ಹಸನ್ಮುಖಿ, ಸ್ನೇಹಮಯಿ ಹಾಗೂ ಸಂಘಜೀವಿ ಲೋಹಿತಾಕ್ಷ ಕದ್ರಿ

ಮಂಗಳೂರು:  ಶ್ರೀಯುತ ಲೋಹಿತಾಕ್ಷ ಕದ್ರಿಯವರು ನಾರಾಯಣ ಅಮೀನ್ ಮತ್ತು ಕಮಲ ದಂಪತಿಗಳ ಜ್ಯೇಷ್ಠ ಪುತ್ರ. ಶ್ರೀಯುತ ನಾರಾಯಣ ಅಮೀನ್ ಮತ್ತು ಕಮಲ ದಂಪತಿಗಳಿಗೆ 7 ಜನ ಮಕ್ಕಳು -  3 ಗಂಡು ಹಾಗೂ 4 ಹೆಣ್ಣು ಮಕ್ಕಳು ಅವರಲ್ಲಿ ಶ್ರಿಯುತ ಲೋಹಿಶತಾಕ್ಷ ಕದ್ರಿಯವರು ಮೊದಲನೆಯವರು.

ಲೋಹಿತಾಕ್ಷರವರಿಗೆ ಇಬ್ಬರು ತಮ್ಮಂದಿರು; ಮೊದಲನೆಯವರು ವಾಮನ ಕದ್ರಿ, ಇವರು 18 ವರ್ಷಗಳ ಹಿಂದೆ ದಿವಂಗತರಾಗಿದ್ದಾರೆ. ಅವರು ದಾವಣಗೆರೆಯಲ್ಲಿ ವಾಸವಾಗಿದ್ದರು. ಇನ್ನೊಬ್ಬರು ಸೋಮಶೇಖರ ಕದ್ರಿ ಇವರು ಬಿಲ್ಡಿಂಗ್ ಗುತ್ತಿಗೆದಾರರಾಗಿ ಸಂಸಾರದೊಂದಿಗೆ ಕದಿ ಯಲಿ ವಾಸವಾಗಿದ್ದಾರೆ. ಲೋಹಿತಾಕ್ಷ ಕದ್ರಿಯವರಿಗೆ ನಾಲ್ಕು ಜನ ತಂಗಿಯಂದಿರು ಮೊದಲನೆಯವರು     ಯಮುನಾ ಶ್ರೀನಿವಾಸ್ ಕುಂದರ್, ಎರಡನೇಯವರು ರಾಧ ರವೀಂದ್ರ, ಮೂರನೇವರು ಕಸ್ತೂರಿ ನಾಗೇಶ್ ಅತ್ತಾವರ ಹಾಗೂ ನಾಲ್ಕನೇಯವರು ಲಲಿತ ಲಕ್ಷಣ ಇವರಲ್ಲಿ ರಾಧರವರು 23 ವಿಷಯಗಳ ಹಿಂದೆ ದಿವಂಗತರಾಗಿದ್ದಾರೆ. ಉಳಿದವರು ತಮ್ಮ ಮಕ್ಕಳೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಶ್ರೀಯುತ ಲೋಹಿತಾಕ್ಷ ಕದ್ರಿಯವರು ಜುಲೈ 20.1930ಕ್ಕೆ ಜನಿಸಿದರು. ಕಳೆದ ಜುಲೈನಲ್ಲಿ ಅವರಿಗೆ 88 ವರ್ಷ ಕಳೆದು 89ರ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ನೇರವೇರಿಸಲಾಯಿತು. ಆಗ ತುಂಬಾ ಲವಲವಿಕೆಯಿಂದ ಇದ್ದರು. ಕಳೆದ ಒಂದು ತಿಂಗಳಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿ 19-09-2018 ರಂದು ನಿಧನ ಹೊಂದಿದರು.

ಲೋಹಿತಾಕ್ಷರವರು ವೃತ್ತಿಯಲ್ಲಿ ಟೇಲರಿಂಗ್ ಕೆಲಸ. ಅಟ್ಲಾಸ್ ಮೆನ್ಸ್ ವೇರ್ ಹಂಪನಕ್ಕಟ್ಟೆಯ ಪಾಪ್ಯುಲರ್ ಬ್ಯುಲ್ಡಿಂಗ್ ನಲ್ಲಿ ಶಾಪ್ ಇದ್ದು ಹಲವಾರು ಸ್ನೇಹಿತರು ದಿನ ನಿತ್ಯ ಶಾಪ್ ಗೆ ಬಂದು ಅವರೊಂದಿಗೆ ಬೆರೆತು ಲೊಕಾಭಿರಾಮ ಮಾತನಾಡುತ್ತಾ ಸಮಯ ಕಳೆಯುತ್ತಿದ್ದರು. ಟೈಲರಿಂಗ್ ವೃತ್ತಿಯೊಂದಿಗೆ ಅವರು ಬಹಳ ಸಮಯದವರೆಗೆ ವ್ಯವಸಾಯ ಸಹ ಮಾಡುತಿದೃರು. ತಮ್ಮ ವೃತ್ತಿ ಹಾಗೂ ಸಮಾಜ ಸೇವಾ ಮನೋಭಾವಗಳಿಂದ ಜನಾನುರಾಗಿಯಾಗಿದ್ದರು. ಇವರನ್ನು ಸ್ನೇಹಿತರು ಮತ್ತು ಹಿತೈಸಿಗಳು ’ಅಟ್ಲಾಸ್’ ಎಂದೇ ಕರೆಯುತ್ತಿದ್ದರು. ಇನ್ನು ಕೆಲವು ಆತ್ಮೀಯರು ’ಚಚ್ಚಣ’ ಎಂದು ಸಂಬೋದಿಸುತ್ತಿದ್ದರು. ಆದರೆ ಈ ಅಡ್ಡ ನಾಮ ಹೇಗೆ ಜಾರಿಗೆ ಬಂದಿತ್ತು ಎಂದು ಈಗಲೂ ತಿಳಿಯದು.

ಲೋಹಿತಾಕ್ಷ ಕದ್ರಿಯವರು ಸಮಾಜ ಸೇವಕಾರಗಿದ್ದು ದೇವಾಡಿಗ ಸೇವಾ ವೇದಿಕೆಯ ಅದ್ಯಕ್ಷರಾಗಿಯೂ ಹಾಗೂ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಆಡಳಿತ ಸಮಿತಿ ಸದಸ್ಯರಾಗಿ ಕೆಲವು ಸಮಯ ಸೇವೆ ಸಲ್ಲಿಸಿದ್ದರು. ಹಾಗೆಯೇ ಮಂಗಳ ಕ್ರೆಡಿಟ್ ಕೋ.ಆಪ್ ಸೊಸೈಟಿಯಲ್ಲಿ ಉಪಾದ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.ಇದಲ್ಲದೆ ಕದ್ರಿ ಕಂಬ್ಳದಲ್ಲಿರುವ ಕೃಷ್ಣ ಮಠದಲ್ಲಿ ಟ್ರಸ್ಟಿಯಾಗಿ ಹಾಗೂ ಉಪಾದ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ತಮ್ಮ ಧರ್ಮಾಭಿಮಾನ ಮತ್ತು ಭಕ್ತಿಯಿಂದ ಮೆರೆದಿದ್ದಾರೆ.

ಶ್ರೀಯುತರು ಮೇ5 1963ರಲ್ಲಿ ಶೀಲಾ ಅವರನ್ನು ವಿವಾಹವಾಗಿದ್ದು, ಇವರದ್ದು 55 ವರ್ಷದ ಸುಖಮಯ ದಾಂಪತ್ಯ ಜೀವನ. ಶ್ರೀಮತಿ ಶೀಲಾ ಕದ್ರಿಯವರು ಮೂಲತ ಮಂಕುಡೆಯವರು.  ದಿ. ಶ್ರೀ ಬಾಯರ್ ಅಣ್ಣಪ್ಪ ಮತ್ತು ಶ್ರೀಮತಿ ಪುಟ್ಟಕ್ಕರವರ ಒಬ್ಬಳೇ ಮಗಳು. ಇವರಿಗೆ ಶ್ರೀ ಜನಾರ್ಧನ ವಿಟ್ಲ ಮತ್ತು ಎಮ್.ಹರಿಣಾಕ್ಷ ಎಂಬ ಇಬ್ಬರು ಅಣ್ಣಂದಿರು ಹಾಗೂ  ಶ್ರೀನಿವಾಸ್ ಮುಂಕಡೆ ಕಿರಿಯ ಸಹೋದರ ರಾಗಿರುತಾರೆ.

ಶ್ರೀಯುತ ಲೋಹಿತಾಕ್ಷ ಹಾಗೂ ಶೀಲಾ ದಂಪತಿಗಳಿಗೆ ನಾಲ್ಕು ಮಕ್ಕಳು. ಮೊದಲನೆಯವರು ಮಗಳು ಸಂಗೀತಾ. ಇವರ ಪತಿ ಬಾಲಚಂದ್ರ ಬ್ಯಾಂಕ್ ಅದಿಕಾರಿ. ಮುಂಬಯಿ ಬೆಂಗಳೂರು, ಡೆಲ್ಲಿ ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿ ಈಗ ನಿವೃತ್ತಿ ಜೀವನವನ್ನು ಮಂಗಳೂರಿನಲ್ಲಿ ಕಳೆಯುತ್ತಿದ್ದಾರೆ. ಬಾಲಚಂದ್ರ ಹಾಗೂ ಸಂಗೀತ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಶಿಬಾನಿ ಮತ್ತು ಸಂಜನ.  ಇವರಿಬ್ಬರು ಇಂಜಿನಿಯರಿಂಗ್ ಪದವಿ ಪಡೆದಿದ್ದು ನೌಕರಿಯಲಿದ್ದಾರೆ. ಲೋಹಿತಾಕ್ಷ ಶೀಲಾ ದಂಪತಿಗಳಿಗೆ ಸದ್ಯ ಇವರಿಬರೇ  ಮೊಮ್ಮಕ್ಕಳು. ಹಾಗೆಯೇ ಲೋಹಿತಾಕ್ಷ - ಶೀಲಾ  ದಂಪತಿಗಳಿಗೆ ಮೂವರು ಗಂಡು ಮಕ್ಕಳು; ಹಿರಿಯ ಮಗ ಸುದೀರ್, ಎರಡನೇಯವರು ಸಂದೀರ ಹಾಗೂ ಮೂರನೇಯವರು ಸುಮಂತ.

ಮಕ್ಕಳೆಲ್ಲರು ಒಟ್ಟಿಗೆ  ಹೋಟಲ್ ಉದ್ಯಮ ನಡೆಸುತ್ತಿದ್ದು ಮಂಗಳೂರಿನಲ್ಲಿ 3 Bar & Restaurant  (Liquid Lounge,  Froth on Top, SLK Bar & Restaurant) ಇನ್ನೊಂದು ರೆಸ್ಟೊರೆಂಟ್ ಮಣಿಪಾದಲ್ಲಿ ( Blue Water) ನಡೆಸುತಿದು ಸದ್ಯದಲ್ಲಿ  ಇನ್ನೊಂದು  ಪಬ್ ಮಣಿಪಾಲದಲ್ಲಿ ತೆರಯಲಿದೆ.

ಮಕ್ಕಳೊಂದಿಗೆ ಶ್ರೀಯುತ ಲೋಹಿತಾಕ್ಷ ಕದ್ರಿಯವರು ಈ ಎಲ್ಲಾ ಹೋಟೆಲ್‍ಗಳಲ್ಲಿ ಪಾಲುದಾರರಾಗಿದ್ದಾರೆ. ಮೊದಲನೆ ಮಗ ಸುದೀರ್  ಕದ್ರಿ ತಂದೆಯವರ ವೃತ್ತಿ ಟೈಲರಿಂಗ್ ಉದ್ಯಮವನ್ನು ಮುಂದುವರೆಸಿದ್ದು ರಿಯಲ್ ಎಸ್ಟೆಟ್ನಲ್ಲಿಯಿ ಕೆಲವುಕಾಲ ಬಿಲ್ಡಿಂಗ್ ಪ್ರಮೋಟರ್ ಆಗಿಯೂ ಕಾರ್ಯನಿರತರಾಗಿದ್ದಾರೆ

ಲೋಹಿತಾಕ್ಷ ಕದ್ರಿಯವರದ್ದು ಸುಖಮಯ ಜೀವನ. ತೂಕದ ಮೂತು, ಕೃಮಬದ಼ ಜೀವನ, ಹಿತ ಮಿತ ಆಹಾರ. ಇಳಿ ವಯಸ್ಸಿನಲು  ಬೆಳಿಗ್ಗೆ  5 ಗಂಟೆಗೆ ಎದ್ದು  ಯೋಗ, ವ್ಯಾಯಾಮ ಮಾಡಿ, ಒಂದು ಗಂಟೆ ದಿನ ಪತ್ರಿಕೆ  ಒದಿ, ಟಿವಿ ಯಲ್ಲಿ ವಾರ್ತೆ  ನೋಡಿ ಉಪಹಾರ ಸೆವಿಸುವುದು ದಿನಚರಿ. ಸಂಜೆ 5 ಗಂಟೆಗೆ ಹೋಟೆಲ್‍ಗಳಲ್ಲಿ ಗೋಲಿಬಜೆ, ಅಂಬಡೆ ಸಂಬಾರ ಅಥವಾ ಪೊಡಿ ತಿಂದು, ಕಾಪಿ ಕುಡಿದು ಟೌನ್ ಹಾಲ್ ನಲ್ಲಿ ಕಾಯಕೃಮ ವಿಕ್ಷಿಸಿ 7 ಗಂಟೆಗೆ ಮನೆಗೆ ಬರುವುಧು ಅವರ ವಾಡಿಕೆ. ಎಲ್ಲಾ ಪ್ರಾಯದವರೊಂದಿಗೆ ಬೆರೆತು ಸಂತೋಷವಾಗಿ ಜೀವನ ಕಳೆದರು. ವೃದಾಪ್ಯದಲ್ಲಿ ರಾಜ ಬೋಗವನ್ನು ಅನುಭವಿಸಿ 19-09-2018 ರಂದು ನಮ್ಮೆಲ್ಲರನ್ನು ಅಗಲಿದ್ದಾರೆ.

~ ಕೆ.ಸಿ.ಬಾಲಚಂದ್ರ

ಈ ಕೆಳಗಿನ ವರದಿಗಳನ್ನೂ ಓದಿ:

ಸಮಾಜದ ಜನಪ್ರಿಯ ಮುಂದಾಳು ಲೋಹಿತಾಕ್ಷ ಕದ್ರಿಯವರ ಉತ್ತರಕ್ರಿಯೆ (Click)

ಸಮಾಜದ ಹಿರಿಯ ಮುಂದಾಳು ಶ್ರೀ ಲೋಹಿತಾಕ್ಷ ಕದ್ರಿ ವಿಧಿವಶ (Click)


Share