ದೇವಾಡಿಗ ಸಂಘ ನವಿ ಮುಂಬಯಿ ಸಮನ್ವಯ ಸಮಿತಿಯ ವಾರ್ಷಿಕೋತ್ಸವ

ನವಿ ಮುಂಬಯಿ: ಯಾವುದೇ ವ್ಯಕ್ತಿಗಳು ಅವರು ಸಲ್ಲಿಸಿದ ಸೇವೆಯೇ ಸಂಘ ಸಂಸ್ಥೆಗಳಿಗೆ  ಬೇಕಾಗಿರುವುದು. ಮತ್ತು ಸಂಘ ಸಂಸ್ಥೆಗಳಿಗೆ  ಅವರು ಮಾಡಿದ ಕಾರ್ಯಗಳಿಂದಲೇ ಅವರು ಹೆಸರು ವಾಸಿಯಾಗಿರುತ್ತಾರೆ. ಅದರ ಹೊರತು ಸಂಸ್ಥೆಗಳಲ್ಲಿ ಹುದ್ದೆಗಳನ್ನು ಹಿಡಿದುಕೊಂಡು ಕೆಲಸ ಮಾಡದಿದ್ದರೆ ಸಂಘದ ಬೆಳವಣಿಗೆ ಸಾಧ್ಯವಾಗುವುದಿಲ್ಲ ಅಲ್ಲದೆ ಸಂಸ್ಥೆಗಳಲ್ಲಿ ವಿವಿದ ಹುದ್ದೆಯಲ್ಲಿರುವ ವ್ಯಕ್ತಿಗಳು ತಮ್ಮ ಕಾರ್ಯ ಸಾದನೆಗಳಿಂದ  ಮುಂದೆ ಬರುವಂತಹ ವ್ಯಕ್ತಿಗಳಿಗೆ ಮಾರ್ಗದರ್ಶನವಾಗಿಯೂ ನಿಷ್ಕಳಂಕವಾಗಿಯೂ ಪಾರದರ್ಶಕ ವಾಗಿಯೂ ಇರಬೇಕಾಗುತ್ತದೆ ಎಂದು ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ  ಶ್ರೀ ರವಿ ಎಸ್ ದೇವಾಡಿಗರು ಇಲ್ಲಿ ಹೇಳಿದರು.

ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ವಾರ್ಷಿಕೋತ್ಸವ ಸಮಾರಂಬದಲ್ಲಿ ಮುಖ್ಯ ಅತಿಥಿಗಳಾಗಿ ಎಲ್ಲಾ ದೇವಾಡಿಗ ಬಾಂಧವರಿಗೆ ಶುಭ ಹಾರೈಸಿದ  ಶ್ರೀ ದೇವಾಡಿಗರು ಸಂಘದ ವಿವಿಧ ಹತ್ತು ಪ್ರಾದೇಶಿಕ ಸಮಿತಿಗಳಿಂದ ಬಹಳಷ್ಟು ಸಮಾಜೊಪರ ಕಾರ್ಯಕ್ರಮಗಳಾಗುತ್ತಿದ್ದು ಮಹಿಳೆಯರು ಮತ್ತು ಯುವಕರು ಮುಂದೆ ಬಂದು ತಮ್ಮ ಬಹುಮುಖ ಪ್ರತಿಬೆಯನ್ನು ಎಲ್ಲಾ ಕ್ಷೇತ್ರಗಳಲ್ಲಿ ತೋರಿಸಿದ್ದಾರೆಂದು ಸಂತೋಷ ವ್ಯಕ್ತ ಪಡಿಸಿದರು..  ಹಿರಿಯಡ್ಕ ಮೋಹನ್‌ದಾಸರ ಅಧ್ಯಕ್ಷತೆಯಲ್ಲಿ  ಹತ್ತು ಸಮನ್ವಯ ಸಮಿತಿಗಳಿಂದ ವಿಕಾಸಗೊಂಡು ಸಂಘವು ಮೂಲೆ ಮೂಲೆಗಳವರೆಗೂ ತಲುಪಿ ಸಧಸ್ಯರಿಗೆ ಸಂಘದ ಅಶ್ತಿತ್ವದ ಬಗ್ಗೆ  ಜಾಗ್ರತೆ ಮೂಡಿದೆ ಮತ್ತು ಹೊಸ ಹೊಸ ಪ್ರತಿಭೆಗಳು ಸಂಘದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಶ್ರೀ ದೇವಾಡಿಗರು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಹಾಗೂ ಉಧ್ಯಮಿ, ದಾನಿ  ಮತ್ತು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಶ್ರೀ ದರ್ಮಪಾಲ ಯು ದೇವಾಡಿಗರು ವಿಶೇಷ ಅಥಿತಿಗಳಾಗಿ ಉಪಸ್ಥಿತರಿದ್ದು,  ಸಂಘದಲ್ಲಿ ನಡೆಯುತ್ತಿರುವ  ಸಮಾಜ ಭಾಂದವರ ಬೆಳವಣಿಗೆ ಅವರ ಮುಂದಾಳುತನ, ಕಾರ್ಯ ವೈಖರಿ, ಸಂಘದ ಪ್ರಸಿದ್ದಿಯ ಬಗ್ಗೆ ತುಂಬಾ ಖುಷಿ ಪಟ್ಟರು.  ದೇವಾಡಿಗ ಸಮಾಜವು ಬೇರೆ ಯಾವುದೇ  ಸಮಾಜಕಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ. ಎಲ್ಲಾ ಸಂಘಗಳಲ್ಲಿ ಜಾಗತಿಕ ಸಂಘಟನೆ ಇದ್ದು, ದೇವಾಡಿಗ ಸಂಘ ಜಾಗತಿಕ ಸಂಘಟನೆಯನ್ನು  ಮಾಡುವಲ್ಲಿ,  ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಂಘದಲ್ಲಿ ಯುವಕರು ತಮ್ಮ ಆವೇಶಪೂರಿತ ಲೌಕಿಕತೆಯನ್ನು ಮರೆತು, ಪ್ರಾಯಸ್ಥಿತ ಪಡುತ್ತಿರುವ ಉದಾಹರಣೆಗಳಿದ್ದರೂ; ಯುವಕರು ಸಂಘ ಸಂಸ್ಥೆಗಳ್ಲಲ್ಲಿ  ದುಡಿದ ಹಿರಿಯ ವ್ಯಕ್ತಿಗಳ ಅನುಭವ ಪಡೆದು ತಮ್ಮಲಿರುವ ವೈವಿಧ್ಯಮತೆಯಿಂದ ಮುಂದೆ ಬಂದು ಸಂಘದ ಹಾಗೂ ಸಮಾಜದ ಯುವಕರ, ದುರ್ಬಲರ ಬೆಳವಣಿಗೆಗೆ ದಾರಿದೀಪಕವಾಗಿರಬೇಕೆಂದು  ಆಶಿಸಿದರು. 

ಅತಿಥಿಗಳಾದ ಉದ್ಯಮಿ ಹಾಗೂ ಶ್ರೀ ಏಕನಾಥೇಶ್ವರಿ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಬಾರ್ಕೂರು ಇದರ ಅಧ್ಯಕ್ಷ ಶ್ರೀ ಅಣ್ಣಯ್ಯ ಶೇರಿಗಾರರು ಮಾತಾಡುತ್ತಾ ಸಂಘದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.. ಬಹು ಸಂಖ್ಯೆಯಲ್ಲಿ ಉಪಸ್ತಿತರಿದ್ದ ಸಂಘದ ಸದಸ್ಯರನ್ನು ಶ್ಲಾಘಿಸಿದ ಶ್ರೀ ಶೇರಿಗಾರರು ಎಲ್ಲರಿಗೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಮುಂದೆ ಮಾತಾಡುತ್ತಾ ಬಾರ್ಕೂರಿನ ಶ್ರೀ ಏಕನಾಥೇಶ್ವರಿ ದೇವಾಲಯದ ಪ್ರಗತಿಯ ಬಗ್ಗೆ ಬೆಳಕು ಚೆಲ್ಲಿ ದೇವಸ್ಥಾನವು ದೇವಾಡಿಗರಿಗೆ ಒಂದು ಹೆಮ್ಮೆಯ ವಿಷಯ ಎಂದರು ಅಲ್ಲದೆ ನವರಾತ್ರೊತ್ಸವದ ಸಂದರ್ಭದಲ್ಲಿ ಪ್ರತೀ ದಿನವೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನೆಯ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿಕೊಂಡರು.

ಆಕ್ಸಿಸ್ ಬ್ಯಾಂಕ್ನ  ಉಪಾಧ್ಯಕ್ಷರು ಮತ್ತು ಯುವಕರ ಮೆಂಟರು ಎಂದೇ ಪ್ರಚಲಿತರಾದ  ಸಂಘದ ಮುಲುಂದ್ ಭಾಂಧುಪ್  ಸಮನ್ವಯ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ನರೇಶ್ ಎಸ್ ದೇವಾಡಿಗರು,  ಅಥಿತಿಯ ಸ್ಥಾನದಲ್ಲಿ ಮಾತನಾಡುತ್ತಾ  ಸಮಾಜದ ಯುವಕರು ಮುಂದೆ ಬಂದು  ಕೆಲಸ ಮಾಡಬೇಕು, ಅಲ್ಲದೆ ತಮ್ಮ ವಿವಿದತೆಯಿಂದ ಸಂಘಕ್ಕೆ ಇನ್ನೂ ಹೆಚ್ಚಿನ ಯುವಕರನ್ನು ಸಧ್ಯಾಸರಾನ್ಣಾಗಿ ನೋಂದಾಯಿಸಿ,  ಉತ್ತಮ ಮಾರ್ಗದರ್ಶನ ನೀಡಿ, ಸಶಕ್ತರಾಗುವಂತೆ ಮಾಡಬೇಕಾಗಿ ಹೇಳಿದರು.  ಇನ್ನೋರ್ವ ಗೌರವ ಅಥಿತಿ  ಶ್ರೀ ರಾಮಣ್ಣ ಬಿ ದೇವಾಡಿಗರು ಮಾತನಾಡುತ್ತಾ,  ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಎಲ್ಲರೂ ಒಗ್ಗಟ್ಟಾಗಿ ಇದ್ದು  ಸಂಘಕ್ಕಾಗಿ ದುಡಿಯಬೇಕೆಂದು  ಹೇಳಿದರು. ಬೇರೆ ಸಂಘಟನೆಗಳಿಗೆ ಹೋಲಿಸಿದರೆ ನಮ್ಮ ಸಂಘ ಮತ್ತು ನಮ್ಮ ಜನರ ಪ್ರತಿಬೆ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ಹೇಳಿದರು, ಅಲ್ಲದೆ ಸಮಾಜದ ಹಿರಿಯ ವ್ಯಕ್ತಿಗಳನ್ನು ಗೌರವಿಸುವುದು ಶ್ಲಾಗನಿಯ  ಎಂದರು.  ಈ ಕಾರ್ಯಕ್ರಮಕ್ಕೆ ರಾಯಘಡದ ರಸಾಯಾನೀಯ ಉದ್ಯಮಿ  ಶ್ರೀ ಪದ್ಮನಾಭ ಮೊಯಿಲಿಯವರು ಗೌರವ ಅಥಿತಿಗಳಾಗಿ ಉಪಸ್ತಿತರಿದ್ದು,  ಮಾತನಾಡುತ್ತಾ ಸಂಘದ  ಯಾವುದೇ ಪ್ರಯೋಜನಕ್ಕಾಗಿ ತನ್ನಿಂದಾದಷ್ಟು  ಸೇವೆಯನ್ನು ಸತತವಾಗಿ  ಮಾಡುವುದಾಗಿ ಹೇಳಿ ಅಶ್ವಾಷಣೆ ನೀಡಿದರು. ಸಂಘದ ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ಮೊಯಿಲಿಯವರು ಮಾತನಾಡುತ್ತಾ, ಸಂಘದ ನವಿ ಮುಂಬಯಿ ವಲಯದ ಚಟುವಟಿಕೆಗಳ ಬಗ್ಗೆ ಸಮಾದಾನ ಪಟ್ತರಲ್ಲದೆ, ಬೇರೆ ಎಲ್ಲ ಸಮಿತಿಗಳಿಗಿಂತ ನವಿ ಮುಂಬಯಿ ಸಮಿತಿ ಅಗ್ರ ಗಣ್ಯವಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ  ಎಂದರು.

ಈ ಸಂದರ್ಭದಲ್ಲಿ ಐರೋಳಿಯ ಉಧ್ಯಮಿ ಹಾಗೂ ಸಮಾಜ ಸೇವಕರಾದ  ಶ್ರೀ ಶೇಖರ ದೇವಾಡಿಗ , ಪನ್ವೆಳ್‌ನ ಉಧ್ಯಮಿ ಸಮಾಜ ಸೇವಕರಾದ  ಶ್ರೀ ವಿಶ್ವನಾಥ ಎಸ್ ದೇವಾಡಿಗರು  ಸಹ ಗೌರವ ಅಥಿತಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘಕ್ಕೆ ಅನನ್ಯವಾದ ಸೇವೆ ನೀಡಿದ ಶ್ರೀ ಶ್ರೀನಿವಾಸ್ ಪಿ ಕರ್ಮರನುರನ್ನು ದಂಪತಿ ಸಮೇತ  ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು. ಅಲ್ಲದೆ ಸಂಘದ ಯಾವುದೇ ಹುದ್ದೆಯನ್ನು ಬಯಸದೆ ಸತತವಾಗಿ ಸೇವೆಯನ್ನು ಸಲ್ಲಿಸಿದ  ಶ್ರೀ ಪಾಧಬೆಟ್ಟು ವಿಟ್ಟಲ ಮೊಯಿಲಿಯವರನ್ನು ಅತಿಥಿಗಳ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.  ಇನೊರ್ವ ಧಾರ್ಮಿಕ ಹಾಗೂ ಹಿರಿಯ ಕಾರ್ಮಿಕರ ಮುಂದಾಳು ಶ್ರೀ ವಿಟ್ಟಲ ದೇವಾಡಿಗ ಐರೋಲಿ ಇವರನ್ನು ಸಹ ಪತ್ನಿ ಸಮೇತ ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು. ಸನ್ಮಾನಿತರು ಸಮಯೋಚಿತವಾಗಿ  ಸನ್ಮಾನಕ್ಕೆ ಉತ್ತರ ನೀಡುತ್ತಾ ಸಂಘಕ್ಕೆ ಧನ್ಯವಾದ ನೀಡಿದರು.

ಸಭಾಧ್ಯಕ್ಷರಾದ ಸಂಘದ ನವಿ ಮುಂಬಯಿ ವಲಯದ ಕಾಯಧ್ಯಕ್ಷರಾದ ಶ್ರೀ ಆನಂದ್ ಕೆ ಶೇರಿಗಾರರು ಮಾತನಾಡುತ್ತಾ ಮುಖ್ಯ ಅಥಿತಿಗಳು ಹಾಗೂ ಗೌರವ ಅಥಿತಿಗಳಲ್ಲಿ ವಿಶೇಷವಾಗಿ  ಶ್ರೀ ಧರ್ಮಪಾಲ ದೇವಾಡಿಗರ ಹಾಗೂ ಶ್ರೀ ಅಣ್ಣಯ್ಯ ಶೇರಿಗಾರರ ಉಪಸ್ಥಿತಿಗಳನ್ನು ಶ್ಳಾಗಿಸಿದರು. ಸಂಘದ ಯುವ ವಿಭಾಗವು  ಈ ಕಾರ್ಯಕ್ರಮಕ್ಕೆ ಪಟ್ಟ ಶ್ರಮದಿಂದಾಗಿ ಸಮಾರಂಬ ಅದ್ದೂರಿ ಯಾಗಿದೆ ಎಂದು ಹೇಳಿದ ಅವರು ಈ ಕಾರ್ಯಕ್ರಮಕ್ಕೆ ದುಡಿದ ಯುವ ವಿಭಾಗ, ಮಹಿಳಾ ವಿಭಾಗಕ್ಕೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿದ ವಲಯದ ಪಧಾದಿಕಾರಿಗಳು  ಮತ್ತೆ ಕಲಾವಿದರಿಗೆ ತುಂಬು ಹ್ರದಯದ ಕ್ರತಜ್ಞತೆಯನ್ನು ವ್ಯಕ್ತ ಪಡಿಸಿದರು. ಈ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಎಲ್ಲಾ ದಾನಿಗಳು ಮತ್ತು ಊಟದ ದೇಣಿಗೆದಾರರಾದ ಐರೋಲಿ ಉಧ್ಯಮಿ ಶ್ರೀ ಶೇಖರ ದೇವಾಡಿಗರಿಗೂ ಕ್ರತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮ ಬೆಳಿಗ್ಗೆ ಎಂಟು ಗಂಟೆಗೆ ಶ್ರೀ ಸತ್ಯ ನಾರಾಯಣ ಮಹಾ ಪೂಜೆಯೊಂದಿಗೆ ಪ್ರಾರಂಭವಾಯಿತು, ಈ ಪೂಜೆಯನ್ನು ಸಂಘದ ಖಾರ್ಗಾರಿನ ಸದಸ್ಯ ಶ್ರೀ ನರೇಂದ್ರ ಶೇರಿಗಾರರ ಮಗಳು ಹರ್ಷ ಉಲ್ಲಾಳ್ ಮತ್ತು ಅಳಿಯ ನವೀನ್ ಉಲ್ಲಾಳ್ ರವರು ಪ್ರಾಯೋಜಿಸಿದರು.  ಬಳಿಕ ಕುಮಾರಿ ಕ್ಷಿತಿ ಜನಾರ್ಧನ ದೇವಾಡಿಗರ ಸ್ವಾಗತ ನ್ರತ್ಯ  ನಡೆದು ಸಂಘದ  ಗಾಯಕರಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀ ಗಣೇಶ್ ಶೇರಿಗಾರ್ ಬ್ರಹ್ಮಾವರ್ ಹಾಗೂ ಶ್ರೀ ಅಶೋಕ್ ಝಾ ಅವರಿಂದ ಭಾವ ಸಂಗಮ  ಕಾರ್ಯ ನಡೆಯಿತು. ಅಲ್ಲದೆ ಯುವ ವಿಭಾಗದ ನೇತ್ರತ್ವದಲ್ಲಿ ಸದ್ಯಸರು ಮತ್ತು ಮಕ್ಕಳಿಂದ  ವಿವಿಧ ನ್ರತ್ಯ ಗಳು  ಸಂಗೀತ  “ವಿಶ್ವಾಮಿತ್ರ ಮೇನಕೆ ಎಂಬ ಯಕ್ಷಗಾನ”,  ಆದರ್ಶ ದಂಪತಿಗಳು ಸ್ಪರ್ದೆ, “ಯೇರೆಗಾವುಯೆ ಈ ಕಿರೀ ಕಿರೀ” ಎಂಬ ತುಳು ನಾಟಕ, ಅನೇಕ ಸ್ಪರ್ದೆಗಳು , ಡಿ ಜೆ ನ್ರತ್ಯ ಹೀಗೆ ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಶ್ರೀ ಗಿರೀಶ್ ದೇವಾಡಿಗರ ನೇತ್ರತ್ವದಲ್ಲಿ ಆಯೋಜಿಸಿದರು.

ಈ ಕಾರ್ಯಕ್ರಮದ ಯಶಸ್ವಿಗೆ ವಲಯದ ಮಹಿಳಾ ಕಾರ್ಯದಕ್ಷೆ  ಶ್ರೀಮತಿ ಅಂಬಿಕಾ ಜನಾರ್ಧನ ದೇವಾಡಿಗ, ಶ್ರೀಮತಿ  ಲತಾ ಎ ಶೇರಿಗಾರ್, ಶ್ರೀಮತಿ ಶಾಂತಾ ದೇವಾಡಿಗ, ಶ್ರೀಮತಿ ಸ್ವಪ್ನ ಪಿ ಮೊಯಿಲಿ, ಶ್ರೀಮತಿ ಕಲಾವತಿ ಜಿ ಶೇರಿಗಾರ್, ಶ್ರೀಮತಿ ಸುಪರ್ಣ ದೇವಾಡಿಗ, ಶ್ರೀಮತಿ ಧನವತಿ ಎಸ್ ಪುತ್ತೂರ್ ,  ಶ್ರೀಮತಿ ಅಶ್ವಿನಿ ಕೆ ದೇವಾಡಿಗ, ಯುವ ವಿಭಾಗದಿಂದ ಶ್ರೀ ಸಚಿನ್ ಎಸ್ ದೇವಾಡಿಗ, ಸಚಿನ್ ಮೊಯಿಲಿ, ವಿನಯ್ ದೇವಾಡಿಗ, ಆನಿಶ್ ಶೇರಿಗಾರ್, ಶ್ರೀಮತಿ ಶಾಂಭವಿ ಎಸ್ ದೇವಾಡಿಗ, ಅಕ್ಷಯ ದೇವಾಡಿಗ ಅಲ್ಲದೆ ಉಪಾಧ್ಯಕ್ಷರಾದ ಶ್ರೀ ಪ್ರಭಾಕರ್ ಎಸ್ ದೇವಾಡಿಗ, ಶ್ರೀ ರಮೇಶ್ ಬಿ ದೇವಾಡಿಗ , ಕಾರ್ಯದರ್ಶಿ ಶ್ರೀ ಕರುಣಾಕರ್ ವಿ ದೇವಾಡಿಗ, ಪದಾಧಿಕಾರಿಗಳಾದ ಸರ್ವಶ್ರೀ ಸುರೇಶ್ ಎಸ್ ದೇವಾಡಿಗ ಬಾರ್ಕೂರ್, ಪರಮೇಶ್ವರ ವಿ ದೇವಾಡಿಗ, ಹರಿಶ್ಚಂದ್ರ ಎಸ್ ದೇವಾಡಿಗ, ಚಂದ್ರಶೇಕರ್ ದೇವಾಡಿಗ ಮೊದಲಾದವರು ಶ್ರಮಿಸಿದರು.


Share