ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ನವನಟಿ- ನಮ್ಮ ನಿಮಿಕಾ !

ಮಂಗಳೂರು: ಇಂಜಿನಿಯರಿಂಗ್ ಓದಿದ್ದೀನಿ ಆದರೆ, ಈ ಕ್ಷೇತ್ರದ ಮೇಲಿನ ಆಸಕ್ತಿಯಿಂದ ಈ ಕಡೆ ಬಂದೆ.. ಈ ತರಹ ಹೇಳುವ ಆದಷ್ಟೋ ಮಂದಿ ನಿಮಗೆ ಕನ್ನಡ ಚಿತ್ರರಂಗದಲ್ಲಿ ಸಿಗುತ್ತಾರೆ, ಅದೇನು ಸಳೆತವೋ ಗೊತ್ತಿಲ್ಲ, ಇಂಜಿನಿಯರಿಂಗ್ ಮಾಡಿರುವ ಸಾಕಷ್ಟು ಮಂದಿ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ, ನಟ ನಟಿ ನಿರ್ದೇಶಕ ತಾಂತ್ರಿಕ ವರ್ಗ.. ಹೀಗೆ ಸಿನಿಮಾದ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ನಿಮಿಕಾ ರತ್ನಾಕರ್- ಈಗಷ್ಟೇ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ನವನಟಿ. ನಿಮಿಕಾ ಕೂಡ ಇಂಜಿನಿಯರಿಂಗ್ ಪದವೀಧರೆ, ಆದರೆ, ಆಸಕ್ತಿ ಸಿನಿಮಾದ ಕಡೆಗಿತ್ತು. ಅದೇ ಕಾರಣದಿಂ ದ ಕೈ ತುಂಬಾ ಸಂಬಳ ಬರುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು, ನೇರವಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರರಂಗ ತನ್ನ ಕೈ ಬಿಡಲ್ಲ ಎಂಬ ನಂಬಿಕೆ ನಿಮಿತಾ ಅವರಲ್ಲಿ ಬಲವಾಗಿದೆ.

ಎಲ್ಲಾ ಓಕೆ, ನಿಮಿಕಾ ಯಾವ ಸಿನಿಮಾ ಮಾಡಿದ್ದಾರೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ರಾಮಧ್ಯಾನ ಈಗಾಗಲೇ ಬಿಡುಗಡೆಯಾಗಿರುವ ಈ  ಚಿತ್ರದ ನಾಯಕಿ ನಿಮಿಕಾ ಇದಲ್ಲದೆ, ಬಿಂದಾಸ್, ಗೊಗ್ಲಿ, ಚಿತ್ರದಲ್ಲೂ ನಿಮಿಕಾ ಪ್ರಮುಖ ಪಾತ್ರ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮಿಕಾ ಖುಷಿಯಾಗಿರಲು ಕಾರಣ ‘ರವಿ ಚಂದ್ರ’ ಇದು ಉಪೇಂದ್ರ ಹಾಗೂ ರವಿಚಂದ್ರನ್ ಜೊತೆಯಾಗಿ ನಟಿಸುತ್ತಿರುವ ಚಿತ್ರ ಈ ಚಿತ್ರದಲ್ಲಿ ನಿಮಿಕಾ, ಉಪೇಂದ್ರ ಜೋಡಿಯಾಗಿ ನಟಿಸುತ್ತಿದ್ದಾರೆ, ಇದಲ್ಲದೆ, ಕಾಶ್ಶೋರ ಎಂಬ ಚಿತ್ರವು ನಿಮಿಕಾ ಕೈಯಲ್ಲಿದೆ. 

ವೇದಿಕೆ ಕಲ್ಪಸಿಕೊಟ್ಟ ಮಾಡಲಿಂಗ್
ಎಲ್ಲಾ ನಟಿಯರಂತೆ ನಿಮಿಕಾ ಚಿತ್ರರಂಗದಲ್ಲಿ ವೇದಿಕೆ ಕಲ್ಪಿಸಿಕೊಂಡಿದ್ದು ಮಾಡಲಿಂಗ್, ಇಂಜಿನಿಯರಿಂಗ್ ಜೊತೆಗೆ ಮಾಡಲಿಂಗ್ ಮಾಡುತ್ತಿದ್ದ ನಿಮಿಕಾ 2017ರಲ್ಲಿ ಮಿಸ್ ಇಂಡಿಯಾ ಸೂಪರ್ ಟಾಲೆಂಟ್ ಆಗಿ ಹೋರಹೊಮ್ಮುವ ಮೂಲಕ ಅವರ ಅದೃಷ್ಟದ ಬಾಗಿಲು ತರೆಯುತ್ತದೆ ಇದರ ಬೆನ್ನಲ್ಲೇ ಸೌತ್ ಕೊರಿಯಾದಲ್ಲಿ ನಡೆಯುತ್ತಿರುವ ಬ್ಯೂಟಿ ಕಾಟೆಂಸ್ಟ್‍ಗೂ ನಿಮಿಕಾ ಆಹ್ವಾನ ಬರುತ್ತದೆ ಇತ್ತ ಕಡೆ ಕೆಲಸ ಅತ್ತ ಕಡೆ ಸ್ಪರ್ಧೆ. ಕಂಪಲಿಯಲ್ಲಿ ಕೇಳಿದರೆ ರಜಾ ಕೊಡಲ್ಲ ಎಂಬ ಉತ್ತರ ನಿಮಿಕಾ ಒಂದು ನಿರ್ಧಾರಕ್ಕೆ ಬಂದು ಬಿಡುತ್ತಾರೆ ಅದು ರಾಜೀನಾಮೆ! ನಾನು ಸೌತ್ ಕೊರಿಯಾಗೆ ಹೋಗಬೇಕಾಗಿ ಬಂದಾಗ ಕಂಪನಿಯಲ್ಲಿ ರಜೆ ಸಮಸ್ಯೆ ಎದುರಾಯಿತು, ಆಗ ನಾನು ಒಂದು ನಿರ್ಧಾರ ಮಾಡಿದೆ ನನಗೆ ಇಷ್ಟವಾದ ಕ್ಷೇತ್ರ ಮಾಡೆಲಿಂಗ್ ಹಾಗೂ ಸಿನಿಮಾ ಅದೇ ಕಾರಣದಿಂದ ಕೆಲಸಕ್ಕೆ ಗುಡ್‍ಭೈ ಹೇಳಿ ಕೊರಿಯಾಗೆ ಹೋದೆ ಅದು ನನಗೆ ಹೊಸ ಅವಕಾಶಗಳನ್ನು  ಕೊಟ್ಟಿದ್ದು ಸುಳ್ಳಲ್ಲ ಎಂದು ತಮ್ಮ ಕೆರೆಯರ್ ಆರಂಭವನ್ನು ನೆನಪಿಸಿಕೊಳ್ಳುತ್ತಾರೆ.

ಕೆಲಸ ಬಿಟ್ಟು ಮಾಡೆಲಿಂಗ್‍ನಲ್ಲಿ ತೊಡಗಿಕೊಂಡಿದ್ದ ನಿಮಿಕಾಗೆ ಸಿಕ್ಕ ಮೊದಲ ಅವಕಾಶ ರಾಮಧ್ಯಾನ, ಮೊದಲ ಚಿತ್ರದಲ್ಲೇ ಮೂರು ಸೇಡ್ ಇರುವ ಪಾತ್ರವನ್ನು ನಿರ್ವಹಿಸಿದ ಖುಷಿ ನಿಮಿಕಾಗಿದೆ. ನಟಿಯಾಗಿ ಆ ಸಿನಿಮಾ ನಿಮಿಕಾಗೆ ಒಳ್ಳೆಯ ಹೆಸರು ತಂದುಕೊಟ್ಟಿತಂತೆ. ಮೊದಲ ಚಿತ್ರದಲ್ಲಿ ತುಂಬಾ ಸವಾಲಿನ ಪಾತ್ರ  ಸಿಕ್ಕಿತು. ಒಂದೇ ಶೇಡ್‍ನಲ್ಲಿ ಸೀತೆಯಾಗಿ, ಇನ್ನೊಂದರಲ್ಲಿ ಇವತ್ತಿನ ಹುಡುಗಿಯಾಗಿ ಹಾಗೂ ಮತ್ತೊಂದರಲ್ಲಿ ಕನಕನ ಪತ್ನಿಯಾಗಿ ನಟಿಸಿದೆ. ಸಾಮಾನ್ಯವಾಗಿ ಸಾಮಾನ್ಯವಾಗಿ ನಟಿಯರಿಗೆ ಮೊದಲ ಚಿತ್ರದಲ್ಲಿ ಅಷ್ಟೊಂದು ನಟನೆಗೆ ಅವಕಾಶವಿರುವ ಪಾತ್ರ ಸಿಗೋದಿಲ್ಲ ಎಂಬ ಮಾತನ್ನು ಕೇಳಿದ್ದೇನೆ ಆದರೆ, ಆ ವಿಚಾರಲದಲಿ ನಾನು ಅದೃಷ್ಟವಂತೆ ಮೊದಲ ಚಿತ್ರದಲ್ಲೇ ಅಂತಹ ಅವಕಾಶ ಸಿಕ್ಕಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ನಿಮಿಕಾ.

ನಟನೆ ಹೊಸದು
ಕೆಲವರು ಸಿನಿಮಾಕ್ಕೆ ಬರುವ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿರುತ್ತಾರೆ. ನಟನಾ ತರಬೇತಿ ಸಂಸ್ಥೆಯಲ್ಲಿ ಕಲಿತು ಬಂದಿರುವ ಅನೇಕರಿದ್ದಾರೆ. ಆದರೆ ನಿಮಿಕಾ ಆ ತರಹ ಯಾವುದೇ ಆಕ್ಯ್ಟಿಂಗ್ ಸ್ಕೂಲ್ ಬಾಗಿಲು ಬಡಿದವರಲ್ಲ. ಸ್ವಸಾಮಥ್ರ್ಯ ಹಾಗೂ ಆತ್ಮವಿಶ್ವಾಸದಿಂದ ಚಿತ್ರರಂಗಕ್ಕೆ ಬಂದಿರುವ ನಾನು ಕಾಲೇಜು ದಿನಗಳಲ್ಲೂ ನಟನೆ ಮಾಡಿದವಲ್ಲ ಡಾನ್ಸ್ ಮಾಡೆಲಿಂಗ್ ಮಾಡುತ್ತಿದ್ದೆ ಅಷ್ಟೇ ಆದರೆ, ಅವಕಾಶ ಸಿಕ್ಕರೆ ನಟಿಸಬಲ್ಲೆ ಎಂಬ ವಿಶ್ವಾಸ ನನ್ನಲ್ಲಿತ್ತು. ನನಗೆ ಯಾವುದೇ ಪಾತ್ರ ಕೊಟ್ಟರು ಸೆಟ್‍ಗೆ ಹೋಗುವ ಮುನ್ನ ಅದಕ್ಕೆ ಬೇಕಾದ ತಯಾರಿಯನ್ನು ಮಢಿಕೊಂಡು ಹೋಗುತ್ತೇನೆ. ಆ ತರಹದ ವರ್ಕ್‍ಶಾಪ್ ನನಗೆ ತುಂಬಾ ಸಹಾಯವಾಗುತ್ತಿದೆ. ನಾನಿನ್ನೂ ಹೊಸಬಳು ಚಿತ್ರರಂಗದಲ್ಲಿ ಬೆಳೆಯಬೇಕಿದೆ. ಅದೇ ಕಾರಣದಿಂದ ಸಿಕ್ಕ ಪಾತ್ರಕ್ಕೆ ಶ್ರದ್ಧೆಯಿಂದ ನ್ಯಾಯ ಸಲ್ಲಿಸುತ್ತಿದ್ದೇನೆ ಎನ್ನುವುದು ನಿಮಿಕಾ ಮಾತು.

ನಿಮಿಕಾಗೆ ಒಂದು ಖುಷಿ ಇದೆ ಅದು ಬೇರೆ ಬೇರೆ ತರಹದ ಪಾತ್ರ ಸಿಗುತ್ತಿರೋದು ರಾಮಧ್ಯಾನದಲ್ಲಿ ಒಂದು ತರನಾದ ಪಾತ್ರ ಮಾಡಿದರೆ ಕಾಶ್ಶೋರದ ಹೊಸ ಬಗೆಯಿಂದ ಕುಡಿದೆಯಂತೆ. ನಿಮಿಕಾ ತುಂಬಾ ಎಕ್ಸ್ಯಟ್ ಆಗಿರುವ ಸಿನಿಮಾವೆಂದರೆ ಅದು ರವಿ ಚಂದ್ರ ಅದಕ್ಕೆ ಕಾರಣ ತಾರಾಗಣ. ಆ ಕಡೆ ರವಿಚಂದ್ರ, ಈ ಕಡೆ ಉಪೇಂದ್ರ ಇನ್ನೂ ಸಾಧುಕೋಕಿಲ ಮತ್ತಿತರ ಅನುಭವಿ ನಟರು. ಇವರೆಲ್ಲರ ಮುಂದೆ ಚಿತ್ರರಂಗಕ್ಕೆ ಬಂದು ಒಂದು ವರ್ಷವಾದ ನಿಮಿಕಾ ಚಿತ್ರೀಕರಣದ ಆರಂಭದಲ್ಲಿ ತುಂಬಾ ನರ್ವಸ್ ಆಗಿದ್ದೆ. ದೊಡ್ಡ ದೊಡ್ಡ  ಕಲಾವಿದರ ಮುಂದೆ ಹೇಗಪ್ಪಾ ನಟಿಸೋದು ಎಂಬ ಭಯ ನನ್ನನ್ನು ಕಾಡುತ್ತಿತ್ತು, ಆದರೆ, ಈಗ ಆ ಭಯ ದೂರವಾಗಿದೆ. ಎಲ್ಲರೂ ಫ್ರೆಂಡ್ಲಿಯಾಗಿದ್ದಾರೆ. ಏನಾದರೂ ತಪ್ಪಾದರೆ ತಿದ್ದುತ್ತಾರೆ ನಾನಿಲ್ಲಿ ಉಪೇಂದ್ರ ಅವರ ಜೋಡಿಯಾಗಿ ನಟಿಸುತ್ತಿದ್ದೇನೆ ಎಂದು ಎಂದು ರವಿಚಂದ್ರ ಚಿತ್ರದ ಬಗ್ಗೆ ಹೇಳುತ್ತಾರೆ ನಿಮಿಕಾ.

ನಿಮಿಕ ಒಂದು ಸ್ಪಷ್ಟತೆ ಇದೆ, ಅದು ತಾನಿನ್ನೂ ಹೊಸಬಳು ಜನರಿಗೆ ಈಗಷ್ಟೇ ತನ್ನ ಪರಿಚಯವಾಗುತ್ತಿದೆ ಎಂದು ನಾನು ಹೊಸಬಳು ಚಿತ್ರರಂಗಕ್ಕೆ ಬಂದು ಒಂದು ವರ್ಷವಾಗುತ್ತಿದೆಯಷ್ಟೇ ನನ್ನ ಸಾಮಥ್ರ್ಯದ ಮೂಲಕ ನಾನು ಗುರುತಿಸಿಕೊಳ್ಳಬೇಕು ಅದೇ ಕಾರಣದಿಂದ ನಾನು ಸಿಕ್ಕ ಪಾತ್ರಗಳನ್ನು ಶ್ರದ್ದೆಯಿಂದ ಮಾಡುತ್ತಿದ್ದೇನೆ ಎನ್ನುವುದು ನಿಮಿಕಾ ಮಾತು.

ನಿಮಿಕಾ ಚಿತ್ರರಂಗಕ್ಕೆ ಬರೋದು ಆರಂಭದಲ್ಲಿ ಅವರ ಕುಟುಂಬಕ್ಕೆ ಇಷ್ಟವಿರಲಿಲ್ಲವಂತೆ. ಆದರೆ ಈಹ ಬೆಳೆಯುತ್ತಿರುವ ರೀತಿ ನೋಡಿ ಎಲ್ಲೂರು ಖುಷಿಯಾಗಿದ್ದಾರಂತೆ. ಎಲ್ಲಾ ಓಕೆ ಚಿತ್ರರಂಗವನ್ನು ಹೊರಗಡೆಯಿಮದ ನೋಡಿದಾಗ ಹಾಗೂ ಒಳಗಡೆ ಬಂದಾಗಿನ ವ್ಯತ್ಯಾಸ ಎನೂ ಎಂದರೆ ಹಾರ್ಡ್‍ವರ್ಕ್ ಎಂಬ ಉತ್ತರ ನಿಮಿಕಾರಿಂದ ಬರುತ್ತದೆ. ನಾವು ಒಂದು ಸಿನಿಮಾವನ್ನು ಎರಡು ಗಂಟೆ ನೋಡಿ ಚನ್ನಾಗಿದೆ ಅಥಾವ ಚನ್ನಾಗಿಲ್ಲ ಎಂದು ಒಂದೇ ಮಾತಲ್ಲಿ ಹೇಳಿಬಿಡುತ್ತೇನೆ ಆದರೆ, ಅದರ ಹಿಂದಿನ ಶ್ರಮದ ಅರಿವು ನಮಗಿರೋದಿಲ್ಲ ಒಂದೊಂದು ಸೀನ್ ತೆಗೆಯುವ ಮುನ್ನ ಎಷ್ಟೊಂದು ಜನ ಕಷ್ಟಪಟ್ಟಿರುತ್ತಾರೆ. ಅವೆಲ್ಲವೂ ನನಗೆ ಈಗ ಅರ್ಥವಾಗುತ್ತಿದೆ ಎನ್ನುತ್ತಾರೆ.


Share