ಭರತನಾಟ್ಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕುಮಾರಿ ಶರಣ್ಯ ಮತ್ತು ಕುಮಾರಿ ಲಹರಿ

ಮಂಗಳೂರು: ವಿದೂಷಿ ಕಮಾಲಾ ಭಟ್ ಮಂಗಳೂರುರವರ ಶಿಷ್ಯೆಯರಾದ ಕುಮಾರಿ ಶರಣ್ಯ ಮತ್ತು ಕುಮಾರಿ ಲಹರಿ ದೇವಾಡಿಗರವರು  ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಭರತ ನಾಟ್ಯ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಕುಮಾರಿ ಶರಣ್ಯ ಶೇ 93.25 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ. ಇವಳು ಮಹೇಶ್ ಆರ್ ದೇವಾಡಿಗ ಹಾಗೂ ಪುಷ್ಪಲತಾ ದೇವಾಡಿಗ ದಂಪತಿಗಳ ಸುಪುತ್ರಿ. 

ಕುಮಾರಿ ಲಹರಿ ದೇವಾಡಿಗ ಇವರು  ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ  ಶೇ 80% ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ‌. ಇವರು  ಚಿದಾನಂದ ಹಾಗೂ ಧನಲಕ್ಸ್ಮಿ ದೇವಾಡಿಗ ದಂಪತಿಗಳ ಸುಪುತ್ರಿ.

ನಾಟ್ಯ ಕಲೆಯ ‌ಪರೀಕ್ಷೆಯಲ್ಲಿ ಉನ್ನತ ಶೇಣಿಯಲ್ಲಿ ಉತ್ತೀರ್ಣರಾಗಿರುವ ಇವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು.


Share