ಕುಂದಾಪುರ ದೇವಾಡಿಗ ಮಿತ್ರ (ಕದಮ್ )ದುಬೈ ಸದಸ್ಯರಿಂದ  ಮತ್ತೊಮ್ಮೆ ವೈದ್ಯಕೀಯ ನೆರವು

ಬೈಂದೂರು: ಜನರ ಕಷ್ಟಗಳಿಗೆ ಶೀಘ್ರವಾಗಿ ಸ್ಪಂದಿಸುವ ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬೈ ಸದಸ್ಯರಿಂದ  ಮತ್ತೊಮ್ಮೆ 20000 ರೂ ವೈದ್ಯಕೀಯ ನೆರವು ನೀಡಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೈಂದೂರಿನ ಗೌರಿ ದೇವಾಡಿಗ ಹಾಗೂ ಸೇನಾಪುರ ಗ್ರಾಮದ ನರಸಿಂಹ ದೇವಾಡಿಗ ಇವರಿಗೆ ತಲಾ10000 ವೈದ್ಯಕೀಯ ನೆರವನ್ನು ಕದಮ್ ದುಬೈ ಗೌರವಾಧ್ಯಕ್ಷರಾದ ಶೀನ ದೇವಾಡಿಗ ಮರವಂತೆ ಹಾಗೂ ಸದಸ್ಯರಾದ ಸುಧಾಕರ ದೇವಾಡಿಗ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ, ಕದಮ್ ರೂವಾರಿ ದಿನೇಶ್ ದೇವಾಡಿಗರ ಸಹೋದರಿ ಲೀಲಾವತಿ ದೇವಾಡಿಗ, ರವಿ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.


Share