ದುಬೈಯಲ್ಲಿ ಕದಮ್ ನಿಂದ ಹೊಸ್ತಿನ ಸಂಭ್ರಮ ಆಚರಣೆ....

ದುಬೈ: ಪ್ರಾಚೀನ ಕಾಲದಿಂದಲೂ ಹಲವು ವಿಶಿಷ್ಟ ಸಂಪ್ರದಾಯ ಪರಂಪರೆ ಹಾಗೂ ಆಚರಣೆಗಳನ್ನು ಅಳವಡಿಸಿಕೊಂಡು ಬಂದು ಇವತ್ತಿನ ಆಧುನಿಕ ಯುಗದಲ್ಲಿ ಅದನ್ನು ಆಚರಣೆಯಲ್ಲಿ ಇಟ್ಟುಕೊಂಡು ಬಂದಿರುವುದು ನಮ್ಮ ಕುಂದಾಪುರದ ಜನತೆಯ ಹೆಮ್ಮೆಯ ವಿಷಯವಾಗಿದೆ . ಅಲ್ಲದೇ ಅನೇಕ ವಿಶಿಷ್ಟ ಸಂಪ್ರದಾಯಗಳನ್ನು ಹುಟ್ಟು ಹಾಕಿದ ಕೀರ್ತಿ ನಮ್ಮ ಕುಂದಾಪುರದ ಜನತೆಗೆ ಸಲ್ಲುತ್ತದೆ.

ಇದೇ ನಿಟ್ಟಿನಲ್ಲಿ  ಕುಂದಾಪುರ ದೇವಾಡಿಗ ಮಿತ್ರ (ಕದಮ್ ) ಸದಸ್ಯರು ತಾ19/10/18 ಶುಕ್ರವಾರ ದ೦ದು ಕದಮ್ ಮುಖ್ಯ ರೂವಾರಿ ಶ್ರೀ ದಿನೇಶ್ ದೇವಾಡಿಗರ ಮನೆಯಲ್ಲಿ ಎಲ್ಲಾ ದೇವಾಡಿಗ ಬಾಂಧವರು ಒಂದಾಗಿ ಬಂದು ಸಂಭ್ರಮ ಸಡಗರದಿಂದ ಕದಿರು ಕಟ್ಟುವ ಹಬ್ಬ ವನ್ನು ಆಚರಿಸಿದರು.

ಕದಮ್ ಕೆಲವು ಸದಸ್ಯರು ವಿವಿಧ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಿಕೊಂಡು ಶ್ರೀ ದಿನೇಶ್ ದೇವಾಡಿಗರ ಮನೆಗೆ ಆಗಮಿಸಿ ಅಲ್ಲಿಯೇ ಎಲ್ಲ ಮಿತ್ರರು ಒಂದು ಗೂಡಿ ಸಂಭ್ರಮ ಸಡಗರದಿಂದ ಔತಣ ಕೂಟವನ್ನು ಕದಮ್ ಮಿತ್ರರು ಸವಿದರು.
#ನಮ್ಮಸಂಸ್ಕೃತಿ,  #ನಮ್ಮಹೆಮ್ಮೆ, #ನಮ್ಮಕದಮ್.

 


Share