ನಾದಶ್ರೀ ಸೇವಾ ಟ್ರಸ್ಟ್, ಶ್ರೀಸೀತಾರಾಮ ಮಹಿಳಾ ಭಜನಾ ಮಂಡಳಿ ಮತ್ತು ದೇವಾಡಿಗ ಯುವವೇದಿಕೆ (ರಿ.) ಉಡುಪಿ ವತಿಯಿಂದ ವಿದ್ಯಾರ್ಥಿವೇತನ, ಪ್ರತಿಭಾಪುರಸ್ಕಾರ ಮತ್ತು ಸನ್ಮಾನ

ಉಡುಪಿ: ದೇವಾಡಿಗಯುವವೇದಿಕೆ (ರಿ.) ಉಡುಪಿ, ನಾದಶ್ರೀಸೇವಾ ಟ್ರಸ್ಟ್; ಸೀತಾರಾಮ ಮಹಿಳಾ ಭಜನಾ ಮಂಡಳಿ ಇವರುಗಳ ಸಂಯುಕ್ತ ಆಶ್ರಯದೊಂದಿಗೆ 3ನೇ ವರುಷದ ವಿದ್ಯಾರ್ಥಿವೇತನ, ಪ್ರತಿಭಾಪುರಸ್ಕಾರ ಮತ್ತು ಸನ್ಮಾನವನ್ನು ಶಾರದಾಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. 
ಅಶ್ವಿನಿ ಬೈಲಕೆರೆ ಇವರಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಯುವವೇದಿಕೆ ಅಧ್ಯಕ್ಷ ಕಾರ್ತಿಕ್ ಪ್ರಸ್ತಾವಿಸಿ, ಕಾರ್ಯದರ್ಶಿ ಪ್ರಭಾಕರ ದೇವಾಡಿಗ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯದೇವಾಡಿಗರ ಸಂಘದ ಅಧ್ಯಕ್ಷ ವಾಮನ ಮರೋಳಿಯವರು "ಯುವ ಪೀಳಿಗೆಯ ಯೋಚನಾ ಶೈಲಿ, ನಾಯಕತ್ವ ಸಂಘಸಂಸ್ಥೆಗಳ ಬೆಳವಣಿಗೆಗೆ ಅತ್ಯವಶ್ಯ" ಎಂದು ಹೇಳಿದರು.
ಮುಖ್ಯಅತಿಥಿ ಕುವೆಂಪುವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಶ್ರೀ ಬಿ.ಎಸ್. ಶೇರಿಗಾರ್ ವರು ವಿದ್ಯಾಭ್ಯಾಸವೊಂದೇ ಜೀವನದಲ್ಲಿ ಮುಂದೆಬರಲು ಸಾಧನ. ಉದ್ಯಮಿಗಳು ಧಾನಿಗಳು ವಿದ್ಯೆಗೆ ಹೆಚ್ಚಿನ ಸಹಾಯ ನೀಡಬೆಂದು ವಿನಂತಿಸಿದರು.
ಪ್ರಧಾನ ಭಾಷಣಕಾರರಾಗಿ ಮ್ಯಾನೇಜ್ಮೆಂಟ್ ಗುರುವರ್ಯರಾದ ಡಾ. ದೇವರಾಜ್ ಕೆ ವಿವಿದ ಉದಾಹರಣೆ ಗಳೊಂದಿಗೆ ನಿತ್ಯ ಜೀವನದಲ್ಲಿ ಸಾಮಾನ್ಯ ಜ್ಞಾನ ಮತ್ತು ಮ್ಯಾನೇಜ್ಮೆಂಟ್ತರಬೇತಿಯ ಉಪಯೋಗಗಳ ಬಗ್ಗೆ ಮಾಹಿತಿನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ನಾದಶ್ರೀಸೇವಾಟ್ರಸ್ಟ್ನ ಅಧ್ಯಕ್ಷ ಶ್ರೀಧರ್ದೇವಾಡಿಗರು ಮಾತನಾಡಿ ಇಂತಹ ಕಾರ್ಯಕ್ರಮಗಳಲ್ಲದೆ ಕೆಲವು ವಿದ್ಯಾರ್ಥಿಗಳ ಒಂದು ವರುಷದ ವಿದ್ಯಾಭ್ಯಾಸದ ಖರ್ಚನ್ನುಭರಿಸುತ್ತಿದ್ದು ಇನ್ನು ಮುಂದೆ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಸಂಪೂರ್ಣವಿಧ್ಯಾಭ್ಯಾಸದ ಖರ್ಚನ್ನುಭರಿಸುವುದಾಗಿ ಹೇಳಿದರು.

ಈಸಂಧರ್ಭದಲ್ಲಿ ಡಾ. ಅಭಿಜಿತ್ಕುಮಾರ್ , ಡಾ.  ಕವಿತಾ ವಿಸ್, ಡಾ. ಸೌಜನ್ಯ ಕೆ ಮತ್ತು ಡಾ. ಪೂಜಾ ಜಿಸ್  ಇವರುಗಳ ವಿದ್ಯಾಭ್ಯಾಸದ ಮತ್ತು ವೈದ್ಯಕೀಯ ಕ್ಷೇತ್ರದ ವಿಶೇಷ ಸಾಧನೆಗಾಗಿ ಸನ್ಮಾನಿಸಲಾಯಿತು.

50 ಕ್ಕೂಹೆಚ್ಚುಬಾರಿ ರಕ್ತಧಾನಮಾಡಿದ ಮಂಗಳೂರು ದೇವಾಡಿಗ ಸಂಘದ ಯುವವೇದಿಕೆಯ ಮಾಜಿ ಅಧ್ಯಕ್ಷ ಕರುಣಾಕರ ಎಂಎಚ್ಮತ್ತು ಪದವಿಪೂರ್ವ ವಿಭಾಗದಲ್ಲಿ ರಾಜ್ಯಕ್ಕೆ  7 ನೇಸ್ಥಾನಪಡೆದ ಹಿಮಾಂಶು ಇವರುಗಳನ್ನುಸನ್ಮಾನಿಸಲಾಯಿತು.

ನಂತರ ಏಸ್.ಏಸ್.ಎಲ್.ಸಿ ಮತ್ತು ಪದ ವಿಪೂರ್ವ ವಿಭಾಗದಲ್ಲಿ ಉಡುಪಿ ಕ್ಷೇತ್ರದಲ್ಲಿ ಹೆಚ್ಚು ಅಂಕಗಳಿಸಿದ ಐದು ವಿದ್ಯಾರ್ಥಿ ಗಳನ್ನು ವಿಶೇಷ ವಿದ್ಯಾರ್ಥಿವೇತನದೊಂದಿಗೆ ಪುರಸ್ಕರಿಸಿ, ನಂತರ ಸುಮಾರು 185 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. 7ನೇತರಗತಿಯ ಸುಮಾರು 200 ವಿದ್ಯಾರ್ಥಿಗಳಿಗೆ ಪುಸ್ತಕ, ಪರಿಕರ ಮತ್ತು ಕೊಡೆಯನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಯುವವೇದಿಕೆಯ ಪ್ರವೀಣಕುಮಾರ್ನಿರ್ವಹಿಸಿ ವಾಕೇಶ್ದೇವಾಡಿಗ,ಪ್ರಕಾಶ್ಶೇರಿಗಾರ್, ಪ್ರದೀಪಸೇರಿಗಾರ್, ವರುಣ್ದೇವಾಡಿಗ, ನಮ್ರತಾ, ಸುಶ್ಮಿತಾ, ಸ್ವರ್ಣ, ರಾಧಿಕಾ, ಮನಿಷಾ ಇವರುಗಳು ಸಹಕರಿಸಿದರು.

Merit cum means scholarship at Udupi:  Nadashree Seva Trust, Devadiga Yuva Vedike & Seetharama Mahila Bhajana MandaliUdupi August 14, 2016:  Devadiga Yuva Vedik, Nadashree Seva Trust and Seetharama Mahila BhanajaMandali  have  successfully  conducted   3rd year merit   cum   means scholarship for  Devadiga  students,supported by eminent Devadiga donors. 
These organiza$ons consistently suppor$ng educa$on by givingfees  to whoever approached,   distribu$ng   scholarship through Devadiga   organisa$ons and   also  byconduc$ng career guidance program since years.
The   program  started  by  invoking the almighty  by  Ashwini  Bailakere,  introduc$on  by  Yuva   Vedikepresident Karthik Kumar and welcome address by secretary of Yuva vedike Prabhakar Devadiga.
Inaugura$ng the program president of Karnataka Rajya Devadigara Sangha Vaman Maroly apprecia$ngthe ini$a$on said "Youth par$cipa$on and innova$ve ideas are the key success of any organiza$on,there is a need of youth ac$ve par$cipa$on in the administra$on of organisa$ons". Chief Guest of the func$on former Vice Chancellor of Kuvempu University Dr B S Sherigar said educa$onopens doors for people of all backgrounds, that is the only key to success. Requested all donors of thecommunity to contribute towards educa$on.Keynote  speaker,  Management   guru  Dr.   Devraj  enlightened  the students   and   parents  by   narra$ngsuccessful stories of management leaders, skills including prac$ces in day to day.Presiding the program president of Nadashree Seva Trust Shridhar Devadiga said at present other thanthese programs some students are supported with one year full fees. But in future there is a plan toadapt en$re educa$on of best performing 1nancially poor students of the community. He also added infuture these organiza$on will visit students personally to iden$fy and support the needy.

In this special occasion Dr. Abhijith Kumar, Dr. Kavitha V S, Dr. Soujanya K and Dr. Pooja G S were honored for their achievement and contribution in medical field.
Ex-President of Mangalore Devadiga sangha youth wing Karunakar M H who donated blood for more than 50 times and also PU topper of the community who stood 7th place in the state were also honored by the guests for their remarkable achievements.
Merit cum scholarship was honored to the first five toppers in SSLC and PU category, more than 180 students of SSLC and II PU passed students were given scholarship. Stationary and umbrella was given to 175 students of 7th standard.
The program was compered by the treasurer Praveen Kumar. WakeshDevadiga, Prakash Sherigar and other members cooperated the stage coordination.
 


Share