ಬ್ರಹಾವರ ದೇವಾಡಿಗ ಸಂಘ : ಮಹಾಸಭೆ, ವಿದ್ಯಾರ್ಥಿವೇತನ ಹಾಗೂ ಸಮ್ಮಾನ 

ಬ್ರಹಾವರ: ಗ್ರಾಮೀಣ ಪ್ರದೇಶವಾದ ಬ್ರಹಾವರದಲ್ಲಿ ದೇವಾಡಿಗ ಸಮಾಜದವರನ್ನು ಒಗ್ಗೂಡಿಸಿ  ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ತನ್ನದೇ  ಆದ ಸ್ವಂತ  ಕಟ್ಟಡವನ್ನು ನಿರ್ಮಿಸಲು ತೊಡಗಿರುವ ಬ್ರಹ್ಮಾವರ ದೇವಾಡಿಗ  ಸಂಘ ಸಮಾಜಕ್ಕೆ ಮಾದರಿಯಾಗಿ ಹೊರಹೊಮ್ಮಲಿ ಎಂದು ವಿಶ್ವ  ತುಳು ಒಕ್ಕೂಟದ ಅಧ್ಯಕ್ಷ ; ಮುಂಬೈ ಎಸ್. ಎಸ್. ಐ. ಎಸ್. ಆಡಳಿತ  ನಿರ್ದೇಶಕ ಧರ್ಮಪಾಲ ಯು ದೇವಾಡಿಗ ಹೇಳಿದರು. 

ಅವರು ಬ್ರಹಾವರ ದೇವಾಡಿಗ ಸಮುದಾಯ  ಭವನದ  ಕಟ್ಟಡದಲ್ಲಿ  ನಡೆದ ವಾರ್ಷಿಕ ಮಹಾಸಭೆ ವಿದ್ಯಾರ್ಥಿವೇತನ  ವಿತರಣೆ  ಹಾಗೂ  ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ಸಂಘದ  ಅಧ್ಯಕ್ಷ  ಸಾರಲು  ಶಂಭು ಶೇರುಗಾರ  ಅಧ್ಯಕ್ಷತೆ  ವಹಿಸಿದ್ದರು. ಸಾರಲು ಚಿನ್ಮಯ  ಮಿಷನ್ ನ ಆಚಾರ್ಯ ದಾಮೋದರ  ಚೈತನ್ಯ ಅವರು ಆಶೀರ್ವಚನ ನೀಡಿದರು. ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ  ವ್ಯವಸ್ಥಾಪನ ಸಮಿತಿಯ  ಗೌರವ ಕಾರ್ಯದರ್ಶಿ  ಗಣೇಶ  ದೇವಾಡಿಗ ಬ್ರಹ್ಮಗಿರಿ ಶುಭಾಶಂಸನಗೈದರು.

ಅತಿಥಿಗಳಾಗಿ  ಮುಂಬೈ ದೇವಾಡಿಗ  ಸಂಘದ ಅಧ್ಯಕ್ಷ  ರವಿ ಎಸ್. ದೇವಾಡಿಗ ಮಾತನಾಡಿ ದೇವಾಡಿಗರು ಪ್ರಾಮಾಣಿಕತೆಯಿಂದ ಕಷ್ಟಪಟ್ಟು  ದುಡಿದ ಉನ್ನತ  ಸ್ನಾನಕ್ಕೇರಬೇಕೆಂದು ಹೇಳಿದರು. ಕರ್ನಾಟಕ ರಾಜ್ಯ ದೇವಾಡಿಗ ಸುಧಾರಕ  ಸಂಘ ಮಂಗಳೂರು ಇದರ ಅಧ್ಯಕ್ಷ ಡಾ| ಕೆ. ದೇವರಾಜ್  ಮಾತನಾಡಿ ವಿದ್ಯಾರ್ಥಿಗಳು ನೈತಿಕ ಮೌಲ್ಯ ಉಳಿಸಿಕೊಳ್ಳವಲ್ಲಿ ಶ್ರಮಿಸಬೇಕು ಎಂದರು.  

ಉಡುಪಿ ಸಂಘದ ಅಧ್ಯಕ್ಷ  ಸೀತಾರಾಮ ಗೋವಿಂದಾಸ್ ಕಾಲೇಜಿನ ನಿವೃತ್ತ  ಪಿ. ಕೆ. ಮೊಯ್ಲಿ, ಉಡುಪಿ ದೇವಾಡಿಗ ಉಪಾಧ್ಯಕ್ಷ  ನಾರಾಯಣ  ದೇವಾಡಿಗ, ಏಕನಾಥೇಶ್ವರಿ ದೇವಸ್ಥಾನದ ಆಡಳಿತ  ಮಂಡಳಿಯ ನರಸಿಂಹ ದೇವಾಡಿಗ, ಉಪಾಧ್ಯಕ್ಷ  ದೇವಾಡಿಗ ಬಾರ್ಕೂರು,  ಸಂಘ ದ ಗೌರವಾಧ್ಯಕ್ಷ ಜಿ. ವಿ. ದೇವಾಡಿಗ, ಕಟ್ಟಡ  ಸಮಿತಿ ಅಧ್ಯಕ್ಷ ಬಿ. ಕೆ. ಬಿಜೂರ್, ಮಹಿಳಾ ಸಂಚಾಲಕಿ ಪೂರ್ಣಿಮಾ ಬಿಜೂರ್, ಯುವಾ ಘಟಕದ ಅಧ್ಯಕ್ಷ ರಮೇಶ ದೇವಾಡಿಗ ಹಂಗಾರಕಟ್ಟೆ ಸದಾಶಿವ ದೇವಾಡಿಗ ನೀಲಾವರ,  ಪಂಚಾಯತ್ ಸದಸ್ಯ ಮಹೇಶ್ ಮಾಲಿ ಉಪಸ್ಥಿತರಿದ್ದರು.  

ನಿರ್ಮಾಣವಾಗುತ್ತಿರುವ ಕಟ್ಟಡ  ಶೀಘ್ರದಲ್ಲಿ  ಉದ್ಘಾಟನೆಯಾಗುವಂತೆ ಅತಿಥಿಗಳು  ಶುಭಹಾರೈಸಿದರು.  

ಸಮ್ಮಾನ : ಸಭೆಯಲ್ಲಿ ಶ್ರೀ ಏಕನಾಥೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ  ಅಣ್ಣಯ್ಯ ಶೇರುಗಾರ್ ಬಾರ್ಕೂರು ಹಾಗೂ ಜಿಲ್ಲಾ ಆದರ್ಶ ಶಿಕ್ಷಕ  ಪ್ರಶಸ್ತಿ ಪುರಸ್ಕೃತ ಸಾಧು ಶೇರುಗಾರ್ ಬೆನಗಲ್ ಅವರನ್ನು ಸಮ್ಮಾನಿಸಲಾಯಿತು.

ಎಸ್. ಎಸ್.ಎಲ್. ಸಿ ಮತ್ತು  ಪಿ. ಯು.ಸಿಯಲ್ಲಿ ಗರಿಷ್ಠ  ಅಂಕ ಪಡೆದು  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ  ವಿತರಿಸಲಾಯಿತು. 

ಸಂಘದ ಪ್ರಧಾನ ಕಾರ್ಯದರ್ಶಿ  ಸಾಧು ಸೇರಿಗಾರ್ ಬೆನಗಲ್ ಸ್ವಾಗತಿಸಿ, ವಾರ್ಷಿಕ ವರದಿ  ಮಂಡಿಸಿದರು. ಮಂಜುನಾಥ  ದೇವಾಡಿಗ ವಾರಂಬಳ್ಳಿ ಲೆಕ್ಕಪತ್ರ ಮಂಡಿಸಿದರು. ಮಾಲತಿ ಸಾಧು ಶೇರುಗಾರ್ ಮತ್ತು ರಾಘವೇಂದ್ರ  ದೇವಾಡಿಗ ಹಂಗಾರಕಟ್ಟೆ ಸಮ್ಮಾನ ಪತ್ರ  ವಾಚಿಸಿದರು.

ಯುವ ಘಟಕದ ಅಧ್ಯಕ್ಷ  ಗಣೇಶ ದೇವಾಡಿಗ ಸೇರಲು ಕಾರ್ಯಕ್ರಮ  ನಿರೂಪಿಸಿ,  ಸಾಂಸ್ಕೃತಿಕ  ಕಾರ್ಯದರ್ಶಿ ಯಾದವ ಶೇರುಗಾರ್ ಆರೂರು  ವಂದಿಸಿದರು.

ನಾಗರಾಜ  ದೇವಾಡಿಗ ಹಂಗಾರಕಟ್ಟೆ  ಶೇಖರ ದೇವಾಡಿಗ ವಾರಂಬಳ್ಳಿ ಮಂಜುನಾಥ ದೇವಾಡಿಗ ಬ್ರಹ್ಮಾವರ,  ಹೆರಿಯ ದೇವಾಡಿಗ ಕೊಳಂಬೆ,  ಭುವನೇಂದ್ರ ದೇವಾಡಿಗ ಬ್ರಹ್ಮಾವರ, ಬಾಬು ದೇವಾಡಿಗ  ಬ್ರಹ್ಮಾವರ, ನಾಗರಾಜ್ ದೇವಾಡಿಗ ನೀಲಾವರ, ಚಂದ್ರಶೇಖರ ದೇವಾಡಿಗ ಹಂಗಾರಕಟ್ಟೆ, ಪ್ರಕಾಶ್‌  ದೇವಾಡಿಗ ನೀಲಾವರ, ಲಕ್ಷ್ಮಣ ದೇವಾಡಿಗ ಬ್ರಹ್ಮಾವರ, ಕೃಷ್ಣ ಶೇರುಗಾರ್ ಕೊಳಂಬೆ, ಭಾಸ್ಕರ ಶೇರುಗಾರ್ ಪುತ್ರಿ,  ಸುಬ್ರಮಣ್ಯ ದೇವಾಡಿಗ ಬ್ರಹ್ಮಾವರ, ಗಣೇಶ ದೇವಾಡಿಗ ಸುರಾಲು ಸಹಕರಿಸಿದರು.


Share