ತಲ್ಲೂರು: ಅಕಾಲಿಕ ಮರಣ ಹೊಂದಿದ ಸದಸ್ಯ್ರರ ಕುಟುಂಬದವರಿಗೆ 25ಸಾವಿರ ವಿಮಾ ಪರಿಹಾರ ಮೊತ್ತ ವಿತರಣೆ

ತಲ್ಲೂರು:  ಸಪ್ತಸ್ವರ ವಿವಿದ್ಧೋಶ.ಸಹಕಾರಿ ಸಂಘ ತಲ್ಲೂರು ಇದರ ಸದಸ್ಯರುಗಳಾದ ಅಕಾಲಿಕ ಮರಣ ಹೊಂದಿದ ಸೀತಾ ದೇವಾಡಿಗ ಪಡುಕೋಣೆ, ಹರೀಶ್ ದೇವಾಡಿಗ ತಲ್ಲೂರು, ಗಿರಿಜ ದೇವಾಡಿಗ ಕೋಟೇಶ್ವರ, ರಾಮ ದೇವಾಡಿಗ ಉಪ್ಪುಂದ, ಕಲಾವತಿ ತಲ್ಲೂರು ಇವರುಗಳಿಗೆ ತಲಾ ರೂ.5000ದಂತೆ ಪಲಾನುಭವಿಗಳ ಕುಟುಂಬದವರಿಗೆ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ ತಲ್ಲೂರು ಇವರು ವಿಮಾ ಪರಿಹಾರ ಮೊತ್ತವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಚಂದ್ರಶೇಖರ ದೇವಾಡಿಗ ನಾಡ , ಸಂಘದ ಕಾರ್ಯನಿರ್ವಾಹಕ ಅಧಿಕಾರಿ ರವಿ ದೇವಾಡಿಗ ಉಪ್ಪಿನಕುದ್ರು, ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ಸತೀಶ ದೇವಾಡಿಗ, ವಿಶಾಲ ದೇವಾಡಿಗ , ಸಂಘದ ಸದಸ್ಯರಾದ ಶೀಲಾವತಿ ದೇವಾಡಿಗ ಮತ್ತು ನಾಗೇಶ ದೇವಾಡಿಗ ಪಡುಕೋಣೆ ಮೊದಲಾದವರು ಉಪಸ್ಥಿತರಿದ್ದರು.


Share