"ಕೋರಿ ರೋಟ್ಟಿ" ಚಿತ್ರದ ಹೀರೋ, ನಿರ್ದೇಶಕ ರಜಿನೀಶ್ ದೇವಾಡಿಗ

ಕೋಸ್ಟಲ್‍ವುಡ್‍ನಲ್ಲಿ ಪ್ರಯೋಗ ಮಾಡುವಾಸೆ!

ಉಡುಪಿ : ಈತನ ಮಾತಲ್ಲಿ ಸ್ಪಷ್ಟತೆ, ಗುರಿಯನ್ನು ನಿಖರತೆ ಇತ್ತು ಸಿನಿಮಾ ಕ್ಷೇತ್ರ, ಪ್ರೇ ಕ್ಷಕ ವರ್ಗದ ಮೇಲೆ ಅಭಿಮಾನ ತುಳುಕುತ್ತಿತ್ತು. ಮುಂದೆ ಒಳ್ಳೆಯದೇ ಆಗುತ್ತದೆ ಎಂಬ ವಿಶ್ವಾಸಕ್ಕಂತೂ ಕೊರತೆಯೇ ಇರಲಿಲ್ಲ!

ಹೌದು ಸಿನಿಮಾ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಬೇಕೆಂಬ ಬಯಕೆ ಇಟ್ಟಕೊಂಡಿರುವ ರಜನೀಶ್ ದೇವಾಡಿಗ, ಉಡುಪಿ ಕಿನ್ನಿಮೂಲ್ಕಿ ಗರಡಿ ರಸ್ತೆಯ ನಿವಾಸಿ, ಸುರೇಶ್ ದೇವಾಡಿಗ ಮತ್ತು ಲೀಲಾ ಅವರ ಪುತ್ರ. ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಸಿನೆಮಾ ಲೋಕದ ಪರಿಚಯ, ಅಧ್ಯಯನ ಮಾಡುತ್ತಾ ಶ್ರಮಜೀವಿಯಾಗಿ ಒಳಹೊಕ್ಕು ಒಂದಷ್ಟು ವಿಶ್ವಾಸದೊಂದಿಗೆ ಪೀಲ್ಡಗಿಳಿದಿರುವ ರಜಿನೀಶ್ ಈಗ ಕರಾವಳಿಗೆ ‘ಕೋರಿ ರೋಟ್ಟಿ’ಯ ಜತೆ ಮರಳಿದ್ದಾರೆ.

‘ಕೋರಿ ರೋಟ್ಟಿ’ ತುಳುಸಿನಿಮಾ ಬಿಡುಗಡೆಯ ಈ ವೇಳೆ ರಜನೀಶ್ ಜತೆ ಮಾತಿಗಿಳಿದರು.

ಹೇಗೆ ಬಂತು ಸಿನೆಮಾಸಕ್ತಿ?
ನನಗೆ ಶಾಲಾ ದಿನಗಳ ಅವಧಿಯಲ್ಲೇ ನಾಟಕ, ಹೈಸ್ಕೂಲ್‍ನಲ್ಲಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸಿದ್ದೆ, ಪಿಪಿಸಿಯಲ್ಲಿ ಪದವಿ ಮುಗಿಸಿ ಬೆಂಗಳೂರಿಗೆ ತೆರಳಿ ಅಲ್ಲಿ ಲೈಟ್ ಬಾಯ್‍ನಿಂದ ಹಿಡಿದು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದೆ. ನಿರ್ದೇಕರೊಂದಿಗೆ ದುಡಿದೆ. ಡೈರೆಕ್ಟಿಂಗ್ ಕೋರ್ಸ್ ಕೂಡ ಮಾಡಿದೆ. ’ಪ್ರೀತಿಯಿಂದ...” ‘ಪಾಂಡುರಂಗ ವಿಟ್ಠಲ’ ಮೊದಲಾದ ಧಾರವಾಹಿ ‘ಜರಾಸಂಧ’, ‘ಕಿಲಾಡಿ ಕಿಟ್ಟಿ’ ಮೊದಲಾದ ಸಿನಿಮಾಗಳಲ್ಲಿ ಅವಕಾಶ ದೊರೆಯಿತು. ‘ನಾನು ಹೇಮಂತ್ ಅವಳು ಸೇವಂತಿ’ ಸಿನಿಮಾದಲ್ಲಿ ನಾಯಕನಾಗುವ ಅವಕಾಶ ಸಿಕ್ಕಿತ್ತು. ಈಗ ಮೊದಲ ಬಾರಿಗೆ ಪೂರ್ಣಪ್ರಮಾಣಳದಲ್ಲಿ ನಿರ್ದೇಶಕನಾಗಿಯೂ ದುಡಿಯುತ್ತಿದ್ದೇನೆ.

ಪ್ರಯೋಗದ ದೈರ್ಯವಿದೆಯೇ ?
ಸದ್ಯ ‘ಕೋರಿ ರೋಟ್ಟಿ ಕೂಡ ವಿಬಿನ್ನವಾಗಿ ಕರಾವಳಿಗರು ಇಷ್ಟಪಡುವ ಸಿನಿಮಾವಾಗಿ ಮೂಡಿಬಂದಿದೆ. ಬಹಳ ನಿರೀಕ್ಷೆಗಳಿವೆ. ಮುಂದೆ ವಿಶಿಷ್ಟ ರೀತಿಯ ಪ್ರಯೋಗದ ಸಿನಿಮಾಗಳನ್ನು ಕೂಡ ತುಳುವಿನಲ್ಲಿ ಮಾಡುವ ಯೋಜನೆ ಇದೆ. 3 ಚಿತ್ರಕತೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇನೆ. ಯುವಜನತೆಯನ್ನು ತಲುವುದರ ಜತೆಗೆ ಹೀಗೂ ತುಳು ಸಿನೆಮಾ ಮಾಡಬಹುದು ಎಂಬುದನ್ನು ತೋರಿಸುವ ಪ್ರಯತ್ನ ನಡೆಸುವೆ. ಅದನ್ನು ಕೂಡ ಜನ ಇಷ್ಟಪಡುವ ವಿಶ್ವಾಸವಿದೆ.

ಇದುವರೆಗಿನ ಸಿನೆಮಾ ಹಾದಿ ಖುಷಿ ಕೊಟ್ಟಿದೆಯೇ?
ಹೌದು ಆದರೆ ನಾನು ಸವೆಸಿದ ಹಾದಿ ಕಷ್ಟದ್ದು, ಸಮಯ ಕೈ ಕೊಟ್ಟಿತ್ತು. ಆದರೂ ನಗುತ್ತಲೇ ಎಲ್ಲವನ್ನೂ ಎದುರಿಸಿದೆ. ಸಣ್ಣ ಅವಕಾಶಗಳು ಕೂಡ ಕೈ ತಪ್ಪಲು ಬಿಡಲಿಲ್ಲ. ಈಗ ಒಂದಷ್ಟು ಧೈರ್ಯ ಮೂಡಿದೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿದೆ.

ನಟನೆ ಇಷ್ಟವೋ ನಿರ್ದೇಶನವೇ ಹೆಚ್ಚು ಇಷ್ಟವೋ?.

ನನಗೆ ನಿರ್ಧೇಶನ ಹೆಚ್ಚು ಇಷ್ಟ.  ನನ್ನ ನಿರ್ದೇಶನದಲ್ಲಿ ಸಣ್ಣ ಪಾತ್ರ ಮಾಡಿದರೆ ಸಾಕಷ್ಟೆ. ಮುಂದೆ ಎರಡು ಕನ್ನಡ ಸಿನಿಮಾಗಳನ್ನು ಕೂಡ ಮಾಡುವ ಸಿದ್ಧತೆಯಲ್ಲಿದ್ದೇನೆ. ನಾಟಕ, ಕಿರುಚಿತ್ರಗಳು ನನಗೆ ಮೆಟ್ಟಿಲಾದವು. ದುನಿಯಾ ವಿಜಯ್, ರಂಗಾಯಣ ರಘು, ಶ್ರೀನಗರ ಕಿಟ್ಟಿ, ಸಾಧುಕೋಕಿಲ ಅವರೊಂದಿಗೆ ಮಾಡಿದ ಕೆಲಸ ನೆರವಿಗೆ ಬಂದಿದೆ. ತುಳುವಿನಲ್ಲಿ ಸಿನೆಮಾ ಮಾಡುವ ಯೋಚನೆಯೂ ಇದೆ.

ನಾ ಕಂಡ ರಜನೀಶ್!! (click)


Share