ನಿರಂತರವಾಗಿ ಮುಂದುವರಿದ ದೇವಾಡಿಗ ಅಕ್ಷಯ ಕಿರಣದ ಸೇವಾ ಯಜ್ನ ಕಾರ್ಯಾಚಾರಣೆ...

ಕುಂದಾಪುರ: ಇದು ದೇವಾಡಿಗ ಅಕ್ಷಯ ಕಿರಣದ 17ನೇ ಸೇವಾ ಯಜ್ಞ ದೇವಾಡಿಗ. ಅಕ್ಷಯ ಕಿರಣದ ಸೇವಾದಾರರು ಇಂದು ಪಡುಕೋಣೆಯ ಬಡಾಕೆರೆ ಗ್ರಾಮದ ತೆಂಗಿನ ಮರದಿಂದ ಬಿದ್ದು ತನ್ನ ಎರಡು ಕಾಲಿನ ಸ್ವಾಧೀನ  ಕಳೆದುಕೊಂಡಿರುವ ಮಾಧವ ದೇವಾಡಿಗರ ನಿವಾಸಕ್ಕೆ ತೆರಳಿ ರೂ 15,000/- ವೈದ್ಯಕೀಯ ನೆರವು ನೀಡಿದರು.

ಸೇವಾದಾರರಾದ ಶ್ರೀ ರಾಮ ದೇವಾಡಿಗರು, ಶ್ರೀ ಜಗದೀಶ್ ದೇವಾಡಿಗರು, ಶ್ರೀ ಪುರುಷೋತ್ತಮ ದಾಸ್ ದೇವಾಡಿಗರು, ಶ್ರೀ ಸತೀಶ್ ದೇವಾಡಿಗರು, ಶ್ರೀ ಮಹಾಲಿಂಗದೇವಾಡಿಗರು ಮತ್ತು ಶ್ರೀಧರ ದೇವಾಡಿಗರು ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಇಲ್ಲಿನ ನಾಗುರಿನಲ್ಲಿ ಶ್ರೀ ಚಂದೂ  ದೇವಾಡಿಗ ಎನ್ನುವ 70 ವರ್ಷದ ಅಜ್ಜಿ ಒಬ್ಬರು ಇದ್ದ ಒಬ್ಬನೇ ಮಗನನ್ನು ಕಳಕೊಂಡು ಅನಾಥರಂತೆ ಒಬ್ಬಂಟಿಯಾಗಿ ಜೀವನ ನಡೆಸುತಿದ್ದು ಇತ್ತೀಚೆಗೆ ಬಿದ್ದು ಕೈ ಮುರಿದುಕೊಂಡಿದ್ದು ನಿನ್ನೆ ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಸುದ್ದಿ ಸಿಕ್ಕಿದ ತಕ್ಷಣ ಅಜ್ಜಿಯ ನಿವಾಸಕ್ಕೆ ಭೇಟಿ ನೀಡಿ ಸಾಂಥ್ವನ ಹೇಳಿದರು.


Share