ಅಣ್ಣಯ್ಯ ಶೇರಿಗಾರ ಬಾರ್ಕೂರು ಇವರಿಗೆ ಕದಂ ದುಬೈಯ "ದೇವಾಡಿಗ ಸಾಧಕ" ಪ್ರಶಸ್ತಿ

ದುಬೈ: ಕುಂದಾಪುರ ದೇವಾಡಿಗ ಮಿತ್ರ (ಕದಂ) ದುಬೈ ಪ್ರತಿ ವರ್ಷ ಕೊಡ ಮಾಡುವ "ದೇವಾಡಿಗ ಸಾಧಕ" ಪ್ರಶಸ್ತಿಗೆ ಈ ಬಾರಿ ಧಾರ್ಮಿಕ ನೇತಾರ, ಕೊಡುಗೈ ದಾನಿ, ಪುಣೆಯ ಉದ್ಯಮಿ ಶ್ರೀ ಏಕನಾಥೇಶ್ವರಿ ಟ್ರಸ್ಟ್ (ರಿ) ಇದರ ಅಧ್ಯಕ್ಷ ಶ್ರೀ ಅಣ್ಣಯ್ಯ ಶೇರಿಗಾರ ಬಾರ್ಕೂರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಸಮಾರಂಭವು ದಿನಾಂಕ 30-11-2018 ರಂದು ದುಬೈಯಲ್ಲಿ ನಡೆಯಲಿರುವ "ಕದಂ" ನ 9ನೇ ವಾರ್ಶಿಕೋತ್ಸವದಲ್ಲಿ ನಡೆಯಲಿದೆ.

ಶ್ರೀ ಅಣ್ಣಯ್ಯ ಶೇರಿಗಾರ್ ಬಾರ್ಕೂರು ಇವರು ವಿವಿಧ ಕಲಾ ಪ್ರಕಾರಗಳ ವಿಶಿಷ್ಠವಾದ ಶಿಲ್ಪ ಕಲೆಗಳಿಂದ ಕಂಗೊಳಿಸುತ್ತಿರುವ ಸಂಸ್ಕೃತಿ ಸಂಸಾರಗಳ ಮಡಿಲು ಧರ್ಮ ಸಾಮ್ರಾಜ್ಯದ ರಾಜಧಾನಿ ಬಾರ್ಕೂರಿನಲ್ಲಿ ಬುಡ್ಡು ಶೇರಿಗಾರ್ತಿ ಮತ್ತು ಶ್ರೀ ರಾಮ ಶೇರಿಗಾರ್ ಮಗನಾಗಿ 1955ರ ಜೂನ್ 1ರಂದು ಜನಿಸಿದ್ದಾರೆ. 

ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಾರ್ಕೂರಿನಲ್ಲಿಯೇ ಪಡೆದು ಉನ್ನತ ಶಿಕ್ಷಣವನ್ನು ಮಹಾರಾಷ್ಟ್ರದ ಪುಣೆಯಲ್ಲಿ ಪಡೆದು, ಅಲ್ಲಿಯೇ ಉದ್ಯೋಗವನ್ನು ಆರಂಭಸಿದರು. 

1981ರಲ್ಲಿ ವಿವಿಧ ಕಂಪನಿಗಳಿಗೆ ಉಟೋಪಹಾರ ಸರಬರಾಜು ಮಾಡುವ ಕೆಟರಿಂಗ್ ವೃತ್ತಿಯನ್ನು ಆರಂಭಿಸಿ, ಅದರಲ್ಲಿ ಅದರಲ್ಲಿ ಸೋಲನ್ನು ಮೆಟ್ಟಿ ಗೆಲುವಿನ ಮಟ್ಟಲನ್ನೇರುತ್ತಾ ಯಶಸ್ವಿ ಉದ್ದಮೆದಾರರ ಸಾಲಲ್ಲಿ ತಮ್ಮ ಹೆಸರನ್ನು ಛಾಪುಗೊಳಿಸಿದರು. 1987ರಲ್ಲಿ ಬೈಂದೂರಿನ ಶಾರದ ರವರನ್ನು ಧರ್ಮ ಪತ್ನಿಯಾಗಿ ಸ್ವೀಕರಿಸಿದ ಅಣ್ಣಯ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಮಗ ಇದ್ದಾರೆ.

{ Left to right-Dhananjay Sherigar (Son), Annayya  Sherigar, Sharada  Sherigar, Satish G Tekkatte (Son-in-law), Dharini Sherigar ( daughter), Maitri Devadiga(Daughter), Santosh Devadiga, (Son-in-law), Master Siddhanth Devadiga (Grandson).}

ದೇವಾಡಿಗ ಸಂಘ ಪುಣೆ ಇವರ ಗೌರವಾಧ್ಯಕ್ಷರಾಗಿ ಸಾಮಾಜಿಕ ಸೇವೆಯನ್ನು ಸಲ್ಲಿಸಿದ್ದ ಶ್ರೀಯುತರು ಸದಾ ಸಮಾಜದ ಏಳಿಗಾಗಿ ಚಿಂತನೆಯಲ್ಲಿರುವವರು.  ತಮ್ಮೂರು ಬಾರ್ಕೂರಿನಲ್ಲಿ ಅದಾವುದೊ ಶಕ್ತಿ ದಾರ್ಮಿಕ ಚೌಕಟ್ಟಿನೊಳಗೆ ಅವರನ್ನು ನಿಲ್ಲಿಸುವ ಮೂಲಕ ಅವರ ಜವಬ್ದಾರಿಯನ್ನು ಹೆಚ್ಚಿಸಿತು. ದೇವಾಡಿಗ ಸಮುದಾಯದ ಕುಲದೇವರೆಂದು ಬಿಂಬಿತಗೊಂಡಿರುವ ಶ್ರೀ ಏಕನಾಥೇಶ್ವರಿ ದೇವಿ ದೇವಾಲಯ ನಿರ್ಮಾಣಕ್ಕೆ ಸಮಾನ ಮನಸ್ಕರೊಂದಿಗೆ ತಮ್ಮ ತನು ಧನ ಮನದಿಂದ ಕೈಜೋಡಿಸಿ ಜಗತ್ತು ಮೆಚ್ಚುವ ಶಾಶ್ವತವಾದ ಶಿಲಾ ದೇಗುಲ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿ ಶ್ರೀ ದೇವರನ್ನು ಪ್ರತಿಷ್ಠಾಪಿಸಿ, ಜಗದಂಬಾ ಶ್ರೀ ಏಕನಾಥೇಶ್ವರಿಯ ಅನುಗ್ರಹಕ್ಕೆ ಪಾತ್ರರಾಗಿ ದೇವಾಡಿಗ ಸಮಾಜದ ಜನಮಾನಸದಲ್ಲಿ ನೆಲೆಸಿದ್ದಾರೆ.

ಈಗ ಶ್ರೀ ಏಕನಾಥೇಶ್ವರಿ ಟ್ರಷ್ಟ (ರಿ) ಬಾರ್ಕೂರು ಇದರ ಘನ ಅದ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಜನ ಮನ್ನಣೆ ಗಳಿಸಿದ್ದಾರೆ.

"ಎಲ್ಲರಂತಲ್ಲದ ನೀವು ಬದುಕಿನಲ್ಲಿ ನಿರ್ದಿಷ್ಟವಾದ ಗುರಿಗೊಂದಿಗೆ ತಮ್ಮದೇ ದಾರಿಯಲ್ಲಿ ಸಾಗಿಬಂದರು. ತುಳಿದಷ್ಟು ಮತ್ತೆ ಮತ್ತೆ ಚಿಗುರುವ ಗರಿಗೆಯಾಗಬೇಕು, ಜರಿದಷ್ಟು ಜಗಮಗಿಸುವ ದೀಪದ ಬೆಳಕಾಗಬೇಕು ತೂಳಿದಷ್ಟು ಎತ್ತರಕ್ಕೆ ಹಾರುವ ಗಾಳಿಪಟವಾಗಬೇಕು ಕೈಬಿಟಷ್ಟು ಮತ್ತೆಂದು ಸಿಗದ ಪಾದರಸವಾಗಬೇಕು ಇವೆಲ್ಲವನ್ನ ಮೀರಿ ನಾವು ನಾವಾಗಿಯೇ ನಮ್ಮ ತನದ ಅಡಿಯಲ್ಲಿ ಬೆಳಗಬೇಕು - ಬೆಳಕು ಚೆಲ್ಲಬೇಕು ಎಂಬುದು ನಿಮ್ಮ ಅಂತರಾಳದ ಸಂದೇಶ, ನಿಮ್ಮ ಜೀವನದ ಸಾಧನೆ ಎಲ್ಲರಿಗೂ ಮಾರ್ಗದರ್ಶಕವಾಗಲಿ, ಶ್ರೀ ಏಕನಾಥೇಶ್ವರಿ ನಿಮಗೂ ಕುಟುಂಬಕ್ಕೂ ಅನುಗ್ರಹಿಸಲಿ" ಎಂದು ನಾವೆಲ್ಲರೂ ಹಾರೈಸುತ್ತೇವೆ


Share