ದೇವಾಡಿಗ ಸೇವಾಸಂಘ (ರಿ) ಉಡುಪಿ - 78ನೇ ವಾರ್ಷಿಕ ಮಹಾಸಭಾ ಅಧಿವೇಶನ - ಸಚಿತ್ರ ವರದಿ

{ವರದಿ: ಸಂಘದ ಸದಸ್ಯ ಮತ್ತು ಸಂಪಾದಕ ದೇವಾಡಿಗ.ಕಾಮ್ }
ಉಡುಪಿ: ದೇವಾಡಿಗ ಸೇವಾಸಂಘದ ವಾರ್ಷಿಕ ಮಹಾಸಭೆ ಅಧಿವೇಶನ ಆದಿತ್ಯವಾರ ಅ.14ರಂದು ದೇವಾಡಿಗ ಸಮಾಜ ಭವನದಲ್ಲಿ ಜರುಗಿತು.
ಈ ಅಧಿವೇಶನದ ಅದ್ಯಕ್ಷತೆಯನ್ನು ಅದ್ಯಕ್ಷ ಸೀತಾರಾಮ್ ವಹಿಸಿದ್ದರು. ಕಾರ್ಯದರ್ಶಿ ಹರೀಶ್ ರವರು ಸದನದಲ್ಲಿ 2015-2016 ರ ವರದಿ ಮಂಡಿಸಿ ಸಭೆಯ ಒಪ್ಪಿಗೆ ಪಡೆದರು. ಮಾಜಿ ಅದ್ಯಕ್ಷ ಶ್ರೀಧರ್ ರವರು ಇತ್ತೀಚಿಗೆ ನಿಧನ ಹೊಂದಿದ ಸಂಘದ ಸದಸ್ಯ ಮತ್ತು ಒಂದು ಲಕ್ಷ ದಾನವಿತ್ತ ಶ್ರೀ ರಾಮ ದೇವಾಡಿಗೆ ರ ಬಗ್ಗೆ ವರದಿಯ ಡೋನರ್ ಲಿಸ್ಟ್ ನಲ್ಲಿ ಹೆಸರು ಇಲ್ಲದಿರುವ ಬಗ್ಗೆ ಸೂಚನೆಯನ್ನಿಟ್ಟು ಇನ್ನು ಮುಂದೆ ದಾನಿಯವರ ಪಟ್ಟಿಯನ್ನು ಸರಿಯಾಗಿ ಪ್ರಕಟಿಸುವರೇ ವಿನಂತಿಸಿದರು. 
ಆದರೂ ನಿಧನರಾದ ದಾನಿ ಶ್ರೀ ರಾಮ ದೇವಾಡಿಗರ ಬಗ್ಗೆ ಈ ರೀತಿಯ ನಡವಳಿಕೆ ಬಹಳ ವಿಷಾಧಕರ ಮತ್ತು ಖಂಡನೀಯ ಎಂದು ಹೆಚ್ಚಿನ ಸದಸ್ಯರು ಅಭಿಪ್ರಾಯಪಟ್ಟರು..
ಕೋಶಾಧಿಕಾರಿ ಸುದಾರ್ಶನ್ ಅವರು ವರ್ಷದ ಲೆಕ್ಕಪತ್ರ ವನ್ನು ಓದಿ ಮ0ಡಿಸಿ ಅನುಮೋದನೆ ಪಡೆದರು. 
ಸಭಾಭವನದಿಂದ ಬಂದ ವಾರ್ಷಿಕ ಆದಾಯದ ಬಗ್ಗೆ ಚರ್ಚೆಯಲ್ಲಿ ಪ್ರಭಾಕರ್ ಮತ್ತು ಶ್ರೀಧರ್ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಅದ್ಯಕ್ಷ ಸೀತಾರಮ್ ರವರು ಬಹಳ ಚೆನ್ನಾಗಿ ಮತ್ತು ಸಮಯೋಚಿತವಾಗಿ ಸಬೆಯನ್ನು ಪ್ರಜಾಪ್ರಬುತ್ವದ ಸಂಪ್ರದಾಯದಂತೆ ನೆೆಡೆಸಿ ಮೆಚ್ಹುಗೆಗೆ ಪಾತ್ರರಾದರು.

ಈ ಸಭೆಯಲ್ಲಿ ಹಿರಿಯ ಸದಸ್ಯ ಡಾ.ಬಿ.ಎಸ್.ಶೇರಿಗಾರ್ ಅವರು ದಿನಾಂಕ: 04.08.2016 ರಂದು ಪ್ರಧಾನ ಕಾರ್ಯದರ್ಶಿ,ದೇವಾಡಿಗರ ಸೇವಾ ಸಂಘ [ರಿ] ಉಡುಪಿ,ಚಿಟ್ಪಾಡಿ, ಉಡುಪಿ ಇವರಿಗೆ ಪತ್ರ ಮುಖೇನ ಕಳುಹಿಸಿದ ಪ್ರಸ್ತಾಪನೆ ಯ್ ಬಗ್ಗೆ ಚರ್ಚೆ ನೆಡೆಯಿತು. ಅವುಗಳನ್ನು ಕೆಳಗೆ ನಮೂದಿಸಲಾಗಿದೆ.... 
 ಮಾನ್ಯರೇ, 
ವಿಷಯ : ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಲು ಸಂಘದ ಕ್ರಮ ನಿಭಂಧನೆ ಗಿII [ಛಿ] ಪ್ರಕಾರ ಸಲ್ಲಿಸಲಾದ ಪ್ರಸ್ತಾವನೆ.
ಉಲ್ಲೇಖ: 78ನೇ ಮಹಾಸಭೆಯ ಕರೆಯೋಲೆ, ಜೊತೆ ಅಜೀವ ಸದಸ್ಯ ಸಂಖ್ಯೆ 128 ಡಾ. ಬಿ ಎಸ್. ಶೇರಿಗಾರ್.
ಪ್ರಸ್ತಾಪಿಸಲಾದ 78ನೇ ಮಹಾಸಭೆಯಲ್ಲಿ ಈ ಕೆಳಗೆನಮೂದಿಸಲಾದ ವಿಷಯಗಳನ್ನು ಸೃಷ್ಟೀಕರಣ, ಚರ್ಚೆ ಮತ್ತು ನಿರ್ಣಯಕ್ಕಾಗಿ ಮಂಡಿಸಲು ಕೋರಲಾಗಿದೆ:
[1] ಸದಸ್ಯರು ಮಂಡಿಸಿದ "ವಿಷಯಗಳ ಚರ್ಚೆಮತ್ತು ನಿರ್ಣಯಕ್ಕಾಗಿ" ಎಂಬುದನ್ನು ಕಾರ್ಯಸೂಚಿಯಲ್ಲಿ ನಮೂದಿಸಲು ತಾ.16.09.2014ರ ಜಿಲ್ಲಾ ನೋಂದಣಾಧಿಕಾರಿ ಗಳ ಸಭೆಯಲ್ಲಿ ಒಪ್ಪಲಾಗಿದ್ದರೂ, ಹಾಗೂ ಕಳೆದ ಮಹಾಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದರೂ ಹೊರಡಿಸಲಾದ ನೋಟಿಸಿನಲ್ಲಿ ಆ ವಿಷಯವನ್ನು ಸೇರಿಸದೇ ಇರುವ ಬಗ್ಗೆ.
[2] ಗಿII[1][g].
"ಸಂಘದ ಪರವಾಗಿ ಜರಗಿಸಲ್ಪಡುವಪ್ರತಿಯೊಂದು ಸಭೆ, ಕಾರ್ಯಕ್ರಮಗಳ ವರದಿಯ ಪುಸ್ತಕದಲ್ಲಿ ರಿಕಾರ್ಡು ಮಾಡಲ್ಪಟ್ಟು ಆವರದಿಗೆ ಸದಸ್ಯರ ಸಹಿತ ಸಭಾಧ್ಯಕ್ಷರು ಕೂಡಲೇ ಅಂದಿನ ತಾರೀಕಿನೊಂದಿಗೆ ಸಹಿಮಾಡತಕ್ಕದ್ದು". ಈ ನಿಬಂಧನೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಮಾತ್ರವಲ್ಲದೆ ಪ್ರಿಂಟ್ ಔಟ್ ಪ್ರತಿಗಳನ್ನು ಹಾಜರಾದ ಸದಸ್ಯರಿಗೆ ಕಡ್ಡಾಯವಾಗಿ ನೀಡಬೇಕು.
[3] ದಿನಾಂಕ 06.03.2016ರ ಮಾಸಿಕ ಸಭೆಯಲ್ಲಿಪ್ರಾರಂಭದಿಂದ ಮುಕ್ತಾಯದ ತನಕ ಹಾಜರಿದ್ದ ಆಡಳಿತ ಸಮಿತಿಯ ಸದಸ್ಯರೊಬ್ಬರು, ಉಡುಪಿ ನೋಂದಣಿ ಅಧಿಕಾರಿ ಯವರಿಗೆ ನೀಡಿರುವ ದೂರಿನ ಪ್ರಕಾರ, ಸಭೆಯಲ್ಲಿ ಅಂಗೀಕರಿಸಲ್ಪಟ್ಟ ನಿರ್ಣಯಗಳಿಗೆ ಹೊರತಾಗಿ ಅಜೆಂಡಾದಲ್ಲಿ ಇರದಿದ್ದ ಒಂದು ಪ್ರಾಮುಖ್ಯ ವಿಷಯದ ಬಗ್ಗೆ ನಿರ್ಣಯವನ್ನು, ಸಭೆಯ ಮುಕ್ತಾಯದ ನಂತರದಲ್ಲಿ ನಿಯಮ ಬಾಹಿರವಾಗಿ ಸಭಾ ವರದಿಯಲ್ಲಿ ಸೇರಿಸಲಾಗಿರುವ ಬಗ್ಗೆ ಸ್ಪಷ್ಟೀಕರಣಕೋರಲಾಗಿದೆ. .
[4] ದಿನಾಂಕ 25.12.2015 ರಂದು ನಡೆದ "ಸಂಘದ ಬೈಲಾ ತಿದ್ದುಪಡಿ ಮಾಡುವ ಬಗ್ಗೆ ಕರೆಯಲಾದ ಸಭೆಯಲ್ಲಿ ಅದಕ್ಕಾಗಿಯೇ 5 ಜನರಸಮಿತಿಯನ್ನು ರಚಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತೇ ಹೊರತು, ತಿದ್ದುಪಡಿಯ ವಿವರಗಳನ್ನು ಪರಿಶೀಲಿಸಿ ನೋಂದಣಿ ಅಧಿಕಾರಿ ಉಡುಪಿ ಇವರಿಗೆ ಬೈಲಾ ತಿದ್ದುಪಡಿ ದಾಖಲಾತಿಗಾಗಿ ಸಲ್ಲಿಸುವ ಸಂಪೂರ್ಣ ಅಧಿಕಾರವನ್ನು ಉಪ ಸಮಿತಿಗೆ ನೀಡುವ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ ಎಂದು ದೃಡಪಟ್ಟಿದೆ. ಆ ರೀತಿಯ ಅಧಿಕಾರನೀಡಲು ಬೈಲಾದಲ್ಲಿ ಅವಕಾಶಗಳಿಲ್ಲ.
 Iಘಿ 1[ಚಿ}ಸಂಘದ ಆಡಳಿತ ಸಮಿತಿಯಕರ್ತವ್ಯಗಳು: "ಸಂಘದ ಮೂಲ ತತ್ವಗಳಿಗೆ ಭಾದಕವಾಗದಂತೆ ಸಂಘದ ನಿಯಮಗಳನ್ನು ಕಾಲೋಚಿತ ತಿದ್ದುಪಡಿ, ರದ್ದು, ನವೀಕರಣ ಮಾಡುವರೇ ಮಹಾಸಭೆಗೆ ಸೂಚಿಸಲು ಆಡಳಿತ ಸಮಿತಿಗೆ ಅಧಿಕಾರವಿರುತ್ತದೆ.
ಆದರೆ ಇದುವರೆಗೆ ಮಹಾಸಭೆಯಲ್ಲಿ ತಿದ್ದುಪಡಿ ಕರಡು ಪ್ರತಿಯ ಮಂಡನೆ, ಚರ್ಚೆ ಅನುಮೋದನೆ, ಉಪ ನೋಂದಣಿ ಅಧಿಕಾರಿಯವರ ಅನುಮೋದನೆ, ಮುಂತಾದ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದುಧೃಡಪಟ್ಟಿದೆ. 
ಆದ್ದರಿಂದ ಮೂಲ ಬೈಲಾ ಪ್ರಕಾರ ಪ್ರತೀ ವರ್ಷನಡೆಸಲಾಗುವ ಮಹಾಸಭೆಯಲ್ಲಿ ಹೊಸ ಆಡಳಿತ  ಸಮಿತಿಯ  ಆಯ್ಕೆ  ಕೂಡಾ ಕಡ್ಡಾಯವಾಗಿ ನಡೆಸಬೇಕಾಗಿರುವುದರಿಂದ, ಅದಕ್ಕೆ ಹೊರತಾಗಿ  ನಡೆಸುವ ; ಸಭೆ ; ಅಸಿಂಧು ಆಗುತ್ತದೆ. ಆದ್ದರಿಂದ, ಈ ಮಹಾಸಭೆಯನ್ನು ರದ್ದುಗೊಳಿಸಿ  ಹೊಸ  ಆಡಳತಸಮಿತಿಯ ಆಯ್ಕೆಯನ್ನೊಳಗೊಂಡ ಕಾರ್ಯಸೂಚಿಯೊಂದಿಗೆ  ಮಹಾಸಭೆಯನ್ನು  ಕರೆಯಲು ಸೂಚಿಸಲಾಗಿದೆ. 
ಪ್ರೋ. ಡಾ. ಬಿ. ಎಸ್. ಶೇರಿಗಾರ್, ಮನೆ ನಂಬ್ರ 4-50ಸಿ[1], "ಅಹನ", ಗಾಂಧಿ ಪಾರ್ಕಿನ ಮುಂಭಾಗ, ಕೊಳಂಬೆ, ಉಡುಪಿ 576 101.


Share