ಮುಂಡ್ಕೂರು : 103 ವರ್ಷ ಸಾರ್ಥಕ ಜೀವನ ಬಾಳಿದ ಕಾಳಿ ದೇವಾಡಿಗ  ನಿಧನ - ಶ್ರದ್ಧಾಂಜಲಿ

ಮುಂಡ್ಕೂರು : ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂದುಗಡೆಯ ನಂದಗೋಕಲ ನಿವಾಸಿ ಕಾಳಿ ಸಿದ್ದು ದೇವಾಡಿಗ (103) ಅವರು ಎಲ್ಲೂರು ಬನ್ನಂಜೆಯಲ್ಲಿರುವ ಪುತ್ರಿ ವಸಂತಿ ಅವರ ನಿವಾಸದಲ್ಲಿ ನ. 11ರಂದು ನಿಧನರಾಗಿದ್ದಾರೆ. 

ಮೃತರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅನಾದಿ ಕಾಲದಿಂದಲೂ ದೇವರ ಚಾಕರಿ ಯಲ್ಲಿದ್ದು ನಿವೃತ್ತ ಜೀವನ ನಡೆಸುತ್ತಿದ್ದರು. ತನ್ನ  ಹುಟ್ಟುಹಬ್ಬದ ಶತಮಾನನೋತ್ಸವನ್ನು ತನ್ನ ಊರಿನ ಹಾಗೂ ಮುಂಬಯಿಯ ಎಲ್ಲಾ ಕುಟುಂಬಿಕರನ್ನು ಒಗ್ಗೂಡಿಸಿ ಅದ್ದೂರಿಯಾಗಿ ಆಚರಿಸಿದ್ದರು. 

ಕಾಳಿ ಎಸ್.  ದೇವಾಡಿಗರು ಮುಂಬಯಿಯ ದೇವಾಡಿಗ ಸಂಘದ ಅಂಧೇರಿ-ಜೋಗೇಶ್ವರಿ, ಮಲಾಡ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಶಂಕರ್ ದೇವಾಡಿಗ ಸೇರಿದಂತೆ  ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.   

ಮೃತರ ಅಂತ್ಯಕ್ರಿಯೆಯು ನ. 12ರಂದು ಮುಂಡ್ಕೂರು ರುದ್ರಭೂಮಿಯಲ್ಲಿ ಜರುಗಿದಾಗ ಅಪಾರ ಬಂದು-ಬಳಗದವರು, ಹಿತೈಷಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದರು.

ಅವರ ಆತ್ಮಕ್ಕೆ ಶಾಂತಿ-ಸದ್ಗತಿ ಸಿಗಲಿ ಎಂದು ನಮ್ಮ ಪ್ರಾರ್ಥನೆ.


Share