ಬೈಂದೂರಿನ ವಿನುತಾ ಎಮ್ ದೇವಾಡಿಗ ಸತತ ಮೂರನೇ ಬಾರಿ ಚದುರಂಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಬೈಂದೂರು:  ಮಧುಗಿರಿಯಲ್ಲಿ ನಡೆದ ರಾಜ್ಯಮಟ್ಟದ ಚೆಸ್ ನಲ್ಲಿ(CHESS) ಪ್ರೌಢಶಾಲಾ ಮಟ್ಟದ ಬಾಲಕಿಯರ ವಿಭಾಗದಲ್ಲಿ  ಯಡ್ತರೆಯ ವಿನುತಾ ಎಂ.ದೇವಾಡಿಗ ಸತತ ಮೂರನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ, ಡಿಸೆಂಬರ್ ನಲ್ಲಿ ಸಿಕ್ಕಿಂನಲ್ಲಿ ನಡೆಯುವ ಚದುರಂಗ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾಳೆ.

ಇವಳು ಬೈಂದೂರಿನ ಮಂಗಳಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶಾಖಾ ವ್ಯವಸ್ಥಾಪಕರಾದ ಸುಬಾಸ್ ದೇವಾಡಿಗ  ಹಾಗೂ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಪ್  ಇಂಡಿಯಾ ಪ್ರಬಂಧಕರಾದ ಚಂದ್ರಶೇಖರ್ ದೇವಾಡಿಗರ ಸೊಸೆಯಾದ ಇವಳು ಸಾಗರದ ಪ್ರಗತಿ ಸಂಯುಕ್ತ ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದು ಶಿಕ್ಷಕರಾದ ವೈ ಮೂರ್ತಿ ದೇವಾಡಿಗ ಹಾಗೂ ಸುಜಾತ ದೇವಾಡಿಗ ದಂಪತಿಯ ಪುತ್ರಿಯಾಗಿರುತ್ತಾಳೆ.

ಬೈಂದೂರಿನ ಹೆಮ್ಮೆಯ ಕುವರಿ ವಿನುತಾ ಎಮ್ ದೇವಾಡಿಗ ಸತತ ಎರಡನೇ ಭಾರಿ ರಾಷ್ಟ್ರಮಟ್ಟಕ್ಕೆ ( Clik the Link)

 


Share