ದಾರಿಕಾಸುರ ಮತ್ತು ತೋಟದ ಅಣ್ಣಯ್ಯನ ಪಾತ್ರದಲ್ಲಿ ಮಿಂಚಿದ ವಿಜೇಶ್ ದೇವಾಡಿಗ ಮಂಗಳಾದೇವಿ

ಮಂಗಳೂರು: ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಮಂಗಳಾದೇವಿ ದೇವಸ್ಥಾನ ಮಂಗಳೂರು ಇದರ 4ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಭಾಕಾರ್ಯಕ್ರಮ ನೆರವೇರಿತು. ಅದರಲ್ಲಿ ಮಂಗಳೂರಿನ ಹೆಮ್ಮೆಯ ಶಾಸಕರಾದ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು. ಮಂಗಳಾದೇವಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀ ರಮಾನಾಥ ಹೆಗ್ಡೆ ಸಬಾಧ್ಯಕ್ಷಸ್ಥಾನವನ್ನು ಅಲಂಕರಿಸಿದರು.

ಸಾಹಿತಿ ಶ್ರೀ ಕಾ. ವಿ ಕೃಷ್ಣದಾಸ್, ಮಹಿಳಾ ಉದ್ಯಮಿ ಶ್ರೀಮತಿ ಕುಸುಮ ದೇವಾಡಿಗ, ಉದ್ಯಮಿ ಸಂತೋಷ್ ಶೆಟ್ಟಿ, ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿಶೇಷವಾಗಿ ಖ್ಯಾತ ಮದ್ದಾಳೆಗಾರ ಸತೀಶ್ ಆಚಾರ್ಯ ಮುಲ್ಕಿ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಗುರುವಂದನೆ ನಡೆಸಿ ಗುರುಗಳನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಸೇರಿ ಗೌರವಿಸಿದರು

 

ತದನಂತರ ತರಬೇತಿ ಕೇಂದ್ರದ ವಿದ್ಯಾರ್ಥಿ ಮಿತ್ರರಿಂದ #ಬಪ್ಪನಾಡುಕ್ಷೇತ್ರಮಹಾತ್ಮೆ ಎಂಬ ಪುಣ್ಯ ಯಕ್ಷಗಾನ ಬಯಲಾಟ ನೆರವೇರಿತು. ಈ ಬಯಲಾಟದಲ್ಲಿ ದಾರಿಕಾಸುರ ಮತ್ತು ತೋಟದ ಅಣ್ಣಯ್ಯನ ಪಾತ್ರದಲ್ಲಿ ವಿಜೇಶ್ ದೇವಾಡಿಗ ಮಂಗಳಾದೇವಿ ಮಿಂಚಿದರು.


Share