ಧರ್ಮಸ್ಥಳ ಕ್ಷೇತ್ರದ ನಾಗಸ್ವರ ವಾದಕ ಅಣ್ಣು ದೇವಾಡಿಗರಿಗೆ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಚಂದ್ರನಾಥ ಸ್ವಾಮಿ ಯ ಸನ್ನಿಧಾನದಲ್ಲಿ ಪರಮಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರ ಕೃಪಾಶೀರ್ವಾದದಿಂದ ಸುದೀರ್ಘ 35 ವರ್ಷಗಳ ಕಾಲ ಸಾರ್ಥಕ್ಯ ಸೇವೆ ಸಲ್ಲಿಸಿ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿ ಆಕಾಶವಾಣಿ "ಎ" ಶ್ರೇಣಿ , ದೂರದರ್ಶನ ಕಲಾವಿದರಾಗಿ ಇದೀಗ ಕರ್ನಾಟಕ ಸರ್ಕಾರದ ಪ್ರತಿಷ್ಠಿತ  2018 ನೇ ಸಾಲಿನ "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ " ಗೆ ಆಯ್ಕೆಯಾದ ಹೆಮ್ಮೆಯ ನಾಗಸ್ವರ ವಿದ್ವಾನ್ ಧರ್ಮಸ್ಥಳ ಅಣ್ಣು ದೇವಾಡಿಗ ರವರಿಗೆ ಹೃದಯಸ್ಪರ್ಶಿಯಾದ ಅಭಿನಂದನೆಗಳು.

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ನಾಗಸ್ವರ ವಾದಕ, ಆಕಾಶವಾಣಿ ಎ ಗ್ರೇಡ್, ದೂರದರ್ಶನ ಕಲಾವಿದ ಅಣ್ಣು ದೇವಾಡಿಗ ಸಂಗೀತ ಕ್ಷೇತ್ರದ ಸಾಧಕ. ತನ್ನ 9ನೇ ವಯಸ್ಸಿನಲ್ಲಿ ಟಿ.ಎಂ ಗೋವಿಂದರಾಜ ಪಿಳ್ಳೈ ಅವರಿಂದ ನಾಗಸ್ವರ ಕಲಿಕೆ ಆರಂಭಿಸಿದರು. ಬಳಿಕ ಗುರುಗಳಾದ ಕೋದಂಡರಾಮ ಮತ್ತು ಕೆ.ಎನ್. ರಾಜರತ್ನ ಪಿಳ್ಳೈ ಅವರಿಂದ ಹೆಚ್ಚಿನ ಜ್ಞಾನವನ್ನು ಪಡೆದರು. 1985ರಲ್ಲಿ ಆಕಾಶವಾಣಿ – ದೂರದರ್ಶನ ಕಲಾವಿದರಾಗಿಯೂ ಅವಕಾಶ ಪಡೆದರು. ತನ್ನ ನಾಗಸ್ವರ ವಾದನ ಕ್ಷೇತ್ರದ ಸಾಧನೆಗಾಗಿ ನಾಗಸ್ವರ ಪಟು, ನಾಗಸ್ವರ ದೊರೆ ಎಂಬ ಬಿರುದನ್ನೂ ಪಡೆದಿದ್ದಾರೆ.

ಚೆನ್ನೈಯಲ್ಲಿ ವಿಶೇಷ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನೃತ್ಯ ಅಕಾಡಿಮಿ ಕಲಾಶ್ರೀ ಪ್ರಶಸ್ತಿ, ಕರ್ನಾಟಕ ನೃತ್ಯ ಅಕಾಡೆಮಿ ಕಲಾಶ್ರೀ ಪ್ರಶಸ್ತಿ ಪಡೆದಿದ್ದಾರೆ. 2012ರಲ್ಲಿ ಮಲೇಶಿಯಾದ ದೇವಸ್ಥಾವೊಂದರಲ್ಲಿ ನಾಗಸ್ವರ ವಾದನ ನೀಡಿದ ಕೀರ್ತಿ ಇವರದು. 2017ರಲ್ಲಿ ಧರ್ಮಾಧಿಕಾರಿ ಡಾ| ಹೆಗ್ಗಡೆ ಅವರ 20ನೇ ಪಟ್ಟಾಭಿಷೇಕ ವರ್ಷಾಚರಣೆಯ ಸಂದರ್ಭ ಪೂಜ್ಯರಿಂದ ವಿಶೇಷ ಸಮ್ಮಾನ ಪಡೆದಿದ್ದಾರೆ.


Share