ಮಾಜಿ ಸೈನಿಕ ದೇಜಪ್ಪ ದೇವಾಡಿಗ ನಿಧನ

ಮೂಡುಬಿದಿರೆ: ಮಾಜಿ ಸೈನಿಕ, ಚಾಲಕ,ಭದ್ರತಾ ಸಿಬಂದಿಯಾಗಿದ್ದ ದೇಜಪ್ಪ ದೇವಾಡಿಗ (77) ಡಿ3ರಂದು ರಾತ್ರಿ ಪ್ರಾಂತ್ಯ ಶಾಲೆಯ ಬಳಿ ತಮ್ಮ ಕುಮಾರ ನಿವಾಸದಲ್ಲಿ ನಿಧನ ಹೊಂದಿದರು.

ಅವರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. 

ಸೇನಾ ಸಿಬಂದಿಯಾಗಿ, ಚಾಲಕರಾಗಿ 15 ವರ್ಷಗಳ ಕಾಲ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದ ಅವರು ಬಳಿಕ ಹನುಮಾನ್ ಟ್ರಾನ್ಸ್ಪೋಟರ್್ ಬಸ್ ಚಾಲಕರಾಗಿ ಸುಮಾರು 23 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಜನಪರ ಕಾಳಜಿ, ಸೇವಾ ಮನೋಭಾವದೊಂದಿಗೆ ಗುರುತಿಸಿಕೊಂಡು ಉತ್ತಮ ಚಾಲಕ ಗೌರವದೊಂದಿಗೆ ಸಮ್ಮಾನಿತರಾಗಿದ್ದರು. ನಡುವೆ 6 ವರ್ಷಗಳ ಕಾಲ ವಿದೇಶದಲ್ಲಿ ಚಾಲಕರಾಗಿ ನಂತರ ಬಜ್ಪೆ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬಂದಿ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು.

ಅವರ ಆತ್ಮಕ್ಕೆ ಶಾಂತಿ-ಸದ್ಗತಿ ಸಿಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ


Share