ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸ್ಯಾಕ್ಸೋಪೊನ್ ಕಲಾವಿದೆ ಕುಮಾರಿ ದೀಕ್ಷಾ ಅಲೆವೂರ್

ಉಡುಪಿ: ಸ್ಯಾಕ್ಸೋಪೊನ್ ವಾದನವನ್ನು ನುಡಿಸುವುದರಲ್ಲಿ ಪ್ರಸಿದ್ಧ ಪ್ರತಿಭೆ ಕುಮಾರಿ ದೀಕ್ಷಾಳದ್ದು. ಉಡುಪಿ ಜಿಲ್ಲೆಯವರಾದ ಅಲೆವೂರು ರಾಘವ ಶೇರಿಗಾರ ಮತ್ತು ಮೋಹಿನಿಯವರ ಮಗಳು ಕುಮಾರಿ ದೀಕ್ಷಾ (ಹುಟ್ಟಿದ ದಿನಾಂಕ:- 28-01-1994) ಚಿಕ್ಕ ವಯಸ್ಸಿನಲ್ಲಿಯೇ( 4ನೇ ತರಗತಿ) ಸ್ಯಾಕ್ಸೋಪೊನ್ ವಾದನವನ್ನು ಕರಗತ ‌ಮಾಡಿಕೊಂಡ ಇವರು ಸುಮಾರು 15 ವರ್ಷಗಳಿಂದ ಸ್ಯಾಕ್ಸೋಪೊನ್ ವಾದನವನ್ನು ನುಡಿಸುತ್ತಾ ಹಿಗೆ ಕೃತಿಗಳನ್ನು ನುಡಿಸುವ ಮಟ್ಟಕ್ಕೆ ಬಂದಿರುತ್ತಾರೆ. ಅಲ್ಲದೇ ತ್ಯಾಗರಾಜರ ಅನೇಕ ಕೃತಿಗಳು, ಪಂಚ ರತ್ನ ಕೃತಿಗಳು, ವರ್ಣಗಳು, ದೇವರ ನಾಮಗಳು ಇವಲ್ಲವನ್ನು ನುಡಿಸುವ ಮಟ್ಟಕ್ಕೆ ಬೆಳೆದಿರುತ್ತಾರೆ.

ದೀಕ್ಷಾಳ ಗುರು ಉಡುಪಿ ಕೆ. ರಾಘವೇಂದ್ರ ರಾವ್ ಕೊಳಲು ವಾದಕ ಆಕಾಶವಾಣಿ ಕಲಾವಿದರು, ಅಂತೆಯೆ ಮೊದಲ ಎರಡು ವರ್ಷದ ಸಂಗೀತ ವಾದನ ಅಭ್ಯಾಸವನ್ನು ಅಲೆವೂರು ಶ್ರೀ ಸುಂದರ ಶೇರಿಗಾರ್ ಜೊತೆ ಕಲಿತರು. ಪ್ರಸ್ತುತ ಇವರು ವಾದನ ಅಭ್ಯಾಸ ವನ್ನು ವಿದುಷಿ ಮಾಧವಿ ಭಟ್ ಇವರಲ್ಲಿ ಕಲಿಯುತ್ತಿರುತ್ತಾರೆ.

ಎಮ್.ಎ,  ಬಿ.ಎಡ್ ವಿದ್ಯಾರ್ಹತೆ ಪಡೆದಿರುವ ದೀಕ್ಷಾಳ ಹವ್ಯಾದ  ಕರ್ನಾಟಕ ಸಂಗೀತ ಆಲಿಸುವುದು, ಹಿಂದುಸ್ಥಾನಿ ಸಂಗೀತ ಆಲಿಸುವುದು ಮತ್ತು ಸ್ಯಾಕ್ಸೋಪೊನ್ ನುಡಿಸುವುದು.

ಕುಮಾರಿ ದೀಕ್ಷಾ ಇವರು ಉಡುಪಿಯಲ್ಲಿ ಹಲವಾರು ಕಡೆ ಸ್ಯಾಕ್ಸೋಪೊನ್ ವಾದನ ಕಾರ್ಯಕ್ರಮ ವನ್ನು ನೀಡಿರುತ್ತಾರೆ, ಅಲ್ಲದೆ ಮಂಗಳೂರು, ಮೂಡಬಿದಿರೆ, ಬೆಂಗಳೂರು, ಮೈಸೂರು, ಮುಂಬಯಿ, ತಮಿಳುನಾಡು, ಹಾಸನ, ಬಳ್ಳಾರಿ, ಕೇರಳ, ಹುಬ್ಬಳ್ಳಿ, ಕುಮಟಾ, ಹೊನ್ನಾವರ, ಯಲ್ಲಾಪುರ, ಮಲ್ಲಾಪುರ, ಗೋವಾ ಮುಂತಾದ ಹಲವಾರು ಕಡೆಗಳಲ್ಲಿ 4000 ಗಿಂತ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಕುಮಾರಿ ದೀಕ್ಷಾ ಪಡೆದ ಪುರಸ್ಕಾರ ಮತ್ತು ಪ್ರಶಸ್ತಿಗಳು:  

* 2006 ರಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ 74 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಯಾಕ್ಸೋಪೊನ್ ವಾದನವನ್ನು ನೀಡಿರುತ್ತಾರೆ.

* 2008 ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

* 2008 ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಶ್ರೀ ಚಕ್ರೇಶ್ವರಿ ದೇವಸ್ಥಾನ ಕೋಡಿ ಕನ್ಯಾನ ಸಾಸ್ತಾನ ಇಲ್ಲಿನ ಸಾಧನ ಪ್ರಶಸ್ತಿ ಪತ್ರ.

* ಸರ್ಟಿಫಿಕೇಟ್ ಅಫ್ ಮೆರಿಟ್ ಹ್ಯಾಸ್ ಬೀನ್ ಅವಾರ್ಡೆಡ್ ಸರ್ಟಿಫಿಕೇಟ್ ಇನ್ instrumental ಮ್ಯೂಸಿಕ್ ಸ್ಯಾಕ್ಸೋಪೊನ್  ಫ್ರಾಮ್ ಗವರ್ನಮೆಂಟ್ ಆಫ್ ಇಂಡಿಯಾ.

* 2010 ರಲ್ಲಿ ಬೆಂಗಳೂರಿನಲ್ಲಿ ನೀಡಿದ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ಯಾಕ್ಸೋಪೊನ್ ವಾದನದಲ್ಲಿ  ’ನಾದ ವೈಭವ ಬಿರುದು”

* 2010 ರಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ  ವಾದ್ಯ ಸಂಗೀತದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ, ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಜಿಲ್ಲಾಮಟ್ಟದ ವರೆಗೂ ಪ್ರತಿನಿಧಿಸಿರುತ್ತಾರೆ.

* ಶ್ರೀ ಕೃಷ್ಣ ಮಠ ಉಡುಪಿ ಶ್ರೀ ಅದಮಾರು ಮಠದ ಸ್ವಾಮೀಜಿಯವರ ಪರ್ಯಾಯ ಮಾಹೊತ್ಸವಕ್ಕೆ ನೀಡಿದ ಧಾರ್ಮಿಕ ಕಾರ್ಯ ಕ್ರಮದಲ್ಲಿ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ.

* participated - national cultural festival unity in diversity center for cultural resources and training, government of India directorate of art and culture, government of Goa.

* ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ನಡೆಸಿದ 2017 ನೇ ಸಾಲಿನ ವಾದ್ಯ ಸಂಗೀತ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಗೆ ಪ್ರಥಮ ಸ್ಥಾನ.

FACEBOOK PAGE:

https://www.facebook.com/Deeksha-Alevoor-807684079395379/

 


Share