ದೇವಾಡಿಗ ಅಕ್ಷಯ ಕಿರಣದ 19 ಮತ್ತು 20 ನೇ ಸೇವಾಯಜ್ಞ !

ತಾರೀಕು 23-12-2018 ರಂದು  ದೇವಾಡಿಗ ಅಕ್ಷಯ ಕಿರಣದ 19 ಮತ್ತು 20 ನೇ ಸೇವಾಯಜ್ಞ ಅರ್ಥಪೂರ್ಣವಾಗಿ ನೆರವೇರಿತು.

ಹೈ ವೋಲ್ಟೇಜ್ ವಿದ್ಯುತ್ ತಗುಲಿ ಎರಡೂ ಕೈಕಾಲುಗಳನ್ನು  ಸುಟ್ಟುಕೊಂಡು ಅದರ ಸ್ವಾದೀನ ಕಳೆದುಕೊಂಡ  ಶ್ರೀ ಸದಾನಂದ ದೇವಾಡಿಗ, ಖಂಬದಕೋಣೆ ಇವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಈಗಾಗಲೇ ವೈದ್ಯರು ತಿಳಿಸಿರುವಂತೆ ಇವರ ಮುಂದಿನ  ಚಿಕಿತ್ಸೆಗೆ ಸುಮಾರು 4 ಲಕ್ಷಕ್ಕೂ ಹೆಚ್ಚು  ಹಣದ ಅಗತ್ಯವಿರುವದನ್ನು ಅರಿತು  ದೇವಾಡಿಗ ಅಕ್ಷಯ ಕಿರಣದ ಸದಸ್ಯರು 20 ಸಾವಿರ ರೂಪಾಯಿ ಹಣವನ್ನು ನೀಡಿ ಧನ್ಯತಾಭಾವ ಹೊಂದಿದರು. 

ಹಾಗೇ 70 ವರ್ಷದ ಅನಾಥ ಚಂದು ಅಜ್ಜಿ ಕೈ ಮುರಿದುಕೊಂಡು ಯಾತನೆಯ ಜೀವನ ನಡೆಸುತ್ತಿದ್ದ ಸ್ಥಿತಿಗೆ ಮರುಕ ಪಟ್ಟ ನಮ್ಮ ತಂಡ ಅವರ ಸಣ್ಣ ಪುಟ್ಟ ದೈನಂದಿನ ಖರ್ಚಿಗೆ ಅನುಕೂಲ ಆಗಲಿ ಎಂದು 5 ಸಾವಿರ ರೂಪಾಯಿ ನಗದು ನೀಡಿ ಅಜ್ಜಿಯ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮುಂಬೈಯ ಶ್ರೀ ಗಣೇಶ್ ಶೇರಿಗಾರ್, ಶ್ರೀ ಶಂಕರ ಅಂಕದ ಕಟ್ಟೆ, ಶ್ರೀ ರಾಮ ದೇವಾಡಿಗ, ಶ್ರೀ ಜಗದೀಶ್ ದೇವಾಡಿಗ,  ಶ್ರೀ ಪುರುಷೋತ್ತಮದಾಸ್, ಶ್ರೀ ಸತೀಶ್ ದೇವಾಡಿಗ, ಶ್ರೀ ಮಹಾಲಿಂಗ
ದೇವಾಡಿಗ,  ಶ್ರೀ ರಾಜ್ ದೇವಾಡಿಗ, ಶ್ರೀ ಮಧುಕರ್ ದೇವಾಡಿಗ, ಶ್ರೀ ಶ್ರೀಕಾಂತ ದೇವಾಡಿಗ ಹಾಗೂ ಶ್ರೀ ನಾಗೇಂದ್ರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.


Share